Tata Punchಗೆ ಒಲಿಯಿತು 2024ರ ಮಾರ್ಚ್‌ನಲ್ಲಿ ಭಾರತದ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆ
ಮಾರುತಿ ಕಾರುಗಳನ್ನು ಹಿಂದಿಕ್ಕಿ ಹ್ಯುಂಡೈ ಕ್ರೆಟಾವು 2024ರ ಮಾರ್ಚ್‌ನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
2024ರ ಮಾರ್ಚ್‌ನಲ್ಲಿ, ಟಾಟಾ ಪಂಚ್ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಗೌರವಕ್ಕೆ ಪಾತ್ರವಾಗಿದೆ. ಮಾರುತಿ ವ್ಯಾಗನ್ ಆರ್, ಮಾರುತಿ ಡಿಜೈರ್ ಮತ್ತು ಮಾರುತಿ ಸ್ವಿಫ್ಟ್ ಅನ್ನು ಹಿಂದಿಕ್ಕಿದ ಹುಂಡೈ ಕ್ರೆಟಾವು ಪಂಚ್‌ನ ನಂತರದ ಸ್ಥಾನವನ್ನು ಅಲಂಕರಿಸಿದೆ. 2024ರ ಮಾರ್ಚ್‌ನಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿರುವ ಟಾಪ್ 15 ಕಾರಿನ ಮೊಡೆಲ್‌ಗಳು ಯಾವ ಸ್ಥಾನವನ್ನು ಪಡೆದಿದೆ ಎಂಬುವುದು ಇಲ್ಲಿದೆ.
ಮೊಡೆಲ್‌ಗಳು |
2024 ಮಾರ್ಚ್ |
2023 ಮಾರ್ಚ್ |
2024 ಫೆಬ್ರವರಿ |
ಟಾಟಾ ಪಂಚ್ |
17,547 |
10,894 |
18,438 |
ಹುಂಡೈ ಕ್ರೆಟಾ |
16,458 |
14,026 |
15,276 |
ಮಾರುತಿ ವ್ಯಾಗನ್ ಆರ್ |
16,368 |
17,305 |
19,412 |
ಮಾರುತಿ ಡಿಜೈರ್ |
15,894 |
13,394 |
15,837 |
ಮಾರುತಿ ಸ್ವಿಫ್ಟ್ |
15,728 |
17,559 |
13,165 |
ಮಾರುತಿ ಬಲೆನೋ |
15,588 |
16,168 |
17,517 |
ಮಹೀಂದ್ರಾ ಸ್ಕಾರ್ಪಿಯೋ |
15,151 |
8,788 |
15,051 |
ಮಾರುತಿ ಎರ್ಟಿಗಾ |
14,888 |
9,028 |
15,519 |
ಮಾರುತಿ ಬ್ರೆಜ್ಜಾ |
14,614 |
16,227 |
15,765 |
ಟಾಟಾ ನೆಕ್ಸಾನ್ |
14,058 |
14,769 |
14,395 |
ಮಾರುತಿ ಫ್ರಾಂಕ್ಸ್ |
12,531 |
- |
14,168 |
ಮಾರುತಿ ಇಕೋ |
12,019 |
11,995 |
12,147 |
ಮಾರುತಿ ಗ್ರ್ಯಾಂಡ್ ವಿಟಾರಾ |
11,232 |
10,045 |
11,002 |
ಮಹೀಂದ್ರಾ ಬೊಲೆರೊ |
10,347 |
9,546 |
10,113 |
ಟೊಯೋಟಾ ಇನ್ನೋವಾ ಕ್ರಿಸ್ಟಾ |
9,900 |
8,075 |
8,481 |
ಗಮನಿಸಿದ ಪ್ರಮುಖ ಅಂಶಗಳು
-
17,500ಕ್ಕೂ ಹೆಚ್ಚು ಡೆಲಿವರಿಯೊಂದಿಗೆ ಟಾಟಾ ಪಂಚ್ 2024ರ ಮಾರ್ಚ್‌ನಲ್ಲಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಇದರೊಂದಿಗೆ, 2024ರ ಫೆಬ್ರವರಿಗೆ ಹೋಲಿಸಿದರೆ ಅದರ ಮಾಸಿಕ ಮಾರಾಟವು 891 ಯುನಿಟ್ ನಷ್ಟು ಕಡಿಮೆಯಾಗಿದೆ, ಆದರೂ ಇದು ವರ್ಷದಿಂದ ವರ್ಷಕ್ಕೆ (YoY) ಮಾರಾಟದಲ್ಲಿ 61 ಪ್ರತಿಶತದಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಈ ಅಂಕಿಅಂಶಗಳು ಟಾಟಾ ಪಂಚ್ ಮತ್ತು ಟಾಟಾ ಪಂಚ್ EV ಎರಡರ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
-
ಹ್ಯುಂಡೈ ಕ್ರೆಟಾ ಕಾಂಪ್ಯಾಕ್ಟ್ ಎಸ್‌ಯುವಿಯು ಕಳೆದ ತಿಂಗಳು ಸುಮಾರು 16,500 ಯುನಿಟ್‌ಗಳ ಮಾರಾಟದೊಂದಿಗೆ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಕ್ರೆಟಾವು ಕಳೆದ ತಿಂಗಳ ಮಾರಾಟದಲ್ಲಿ 1,000 ಯುನಿಟ್‌ನಷ್ಟು ಹೆಚ್ಚಾಗುವುದರೊಂದಿಗೆ ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ ಮತ್ತು ವರ್ಷದಿಂದ ವರ್ಷಕ್ಕೆ (YoY) ಹೋಲಿಕೆಯಲ್ಲಿ ಸುಮಾರು 2,500 ಯುನಿಟ್‌ಗಳನ್ನು ಏರಿಕೆ ಕಂಡಿದೆ.
-
ಕಳೆದ ತಿಂಗಳ (MoM) ಮಾರಾಟದಲ್ಲಿ ಶೇಕಡಾ 16 ರಷ್ಟು ಕುಸಿತದೊಂದಿಗೆ, ಮಾರುತಿ ವ್ಯಾಗನ್ ಆರ್ ಮಾರಾಟದ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ವ್ಯಾಗನ್ ಆರ್ ನ 16,000 ಯೂನಿಟ್‌ಗಳು 2024ರ ಮಾರ್ಚ್‌ನಲ್ಲಿ ಮಾರಾಟವಾಗಿವೆ, ಇದು 2023ರ ಮಾರ್ಚ್‌ಕ್ಕಿಂತ ಕೇವಲ 937 ಯುನಿಟ್‌ಗಳು ಕಡಿಮೆ ಇದೆ.
ಇದನ್ನು ಸಹ ಓದಿt: 2024ರ ಮಾರ್ಚ್‌ನಲ್ಲಿ ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಕಂಪನಿಗಳ ಒಟ್ಟು ಸಂಖ್ಯೆಗಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
-
Maruti Dzire ತಿಂಗಳ ಸರಾಸರಿ ಮಾರಾಟದಲ್ಲಿ ಸ್ಥಿರವಾದ ಬೇಡಿಕೆಯನ್ನು ಕಾಯ್ದುಕೊಂಡಿದೆ, ಕಳೆದ ತಿಂಗಳು ಸುಮಾರು 15,900 ಯುನಿಟ್‌ಗಳನ್ನು ಡೆಲಿವರಿ ಮಾಡಿದೆ. ಮಾರುತಿಯ ಸಬ್‌ಕಾಂಪ್ಯಾಕ್ಟ್ ಸೆಡಾನ್ ಸಹ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ, ಈ ಮಾರ್ಚ್‌ನ ಮಾರಾಟದಲ್ಲಿ 19 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
-
ಮಾರಾಟದ ಅಂಕಿಅಂಶದಲ್ಲಿ ಡಿಜೈರ್‌ಗಿಂತ ನಂತರದ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್, ಕಳೆದ ತಿಂಗಳು 15,700 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. 2024ರ ಫ್ರೆಬ್ರುವರಿಗೆ ಹೋಲಿಸಿದರೆ, ಈ ಮಾರ್ಚ್‌ನಲ್ಲಿ ಹ್ಯಾಚ್‌ಬ್ಯಾಕ್‌ನ ಮಾಸಿಕ ಮಾರಾಟವು 19 ಪ್ರತಿಶತದಷ್ಟು ಹೆಚ್ಚಿದ್ದರೂ, ಅದರ ವಾರ್ಷಿಕ ಮಾರಾಟದಲ್ಲಿ 10 ಪ್ರತಿಶತದಷ್ಟು ಇಳಿಕೆ ಕಂಡಿದೆ. ನೀವು ಶೀಘ್ರದಲ್ಲೇ ಹೊಸ ಸ್ವಿಫ್ಟ್ ಖರೀದಿಸಲು ಬಯಸುತ್ತಿದ್ದರೆ ಸ್ವಲ್ಪ ಸಮಯ ಕಾಯಿರಿ, ಹೊಸ ಜನರೇಶನ್‌ನ ಹ್ಯಾಚ್‌ಬ್ಯಾಕ್ ಮುಂಬರುವ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲಿದೆ.
-
2024ರ ಮಾರ್ಚ್‌ನ ಹೆಚ್ಚು ಮಾರಾಟವಾದ ಕಾರುಗಳ ಟಾಪ್ 15 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದರೆ ಅದು ಮಾರುತಿ ಬಲೆನೊ ಮಾತ್ರ. ಅನುಕ್ರಮವಾಗಿ ವಾರ್ಷಿಕ ಮತ್ತು ತಿಂಗಳಿನಿಂದ ತಿಂಗಳ ಮಾರಾಟದಲ್ಲಿ 11 ಪ್ರತಿಶತ ಮತ್ತು 4 ಪ್ರತಿಶತದಷ್ಟು ನಷ್ಟದ ಹೊರತಾಗಿಯೂ, ಮಾರುತಿ ಕಳೆದ ತಿಂಗಳು ಬಲೆನೊದ ಸುಮಾರು 15,600 ಯುನಿಟ್‌ಗಳನ್ನು ಮಾರಾಟ ಮಾಡಿದೆ.
-
2024ರ ಮಾರ್ಚ್‌ನಲ್ಲಿ ಮಹೀಂದ್ರಾ ಸ್ಕಾರ್ಪಿಯೋಸ್ 15,000 ಯುನಿಟ್‌ಗಳ ಮಾರಾಟದ ಮೈಲುಗಲ್ಲನ್ನು ದಾಟಿದೆ, ಮಾಸಿಕ ಮಾರಾಟದಲ್ಲಿ ಸ್ಥಿರವಾದ ಅಂಕಿಅಂಶವನ್ನು ಕಾಯ್ದುಕೊಂಡಿದೆ. ಆದರೆ ವಾರ್ಷಿಕ ಮಾರಾಟದಲ್ಲಿ ಮಹೀಂದ್ರಾದ ಈ ಎಸ್‌ಯುವಿಯು ಅತ್ಯಧಿಕ 72 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಈ ಅಂಕಿಅಂಶಗಳು ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎರಡರ ಮಾರಾಟವನ್ನು ಒಳಗೊಂಡಿವೆ.
-
14,800 ಕ್ಕೂ ಹೆಚ್ಚು ಮಾರಾಟದೊಂದಿಗೆ, ಮಾರುತಿ ಎರ್ಟಿಗಾವು 2024ರ ಮಾರ್ಚ್‌ನಲ್ಲಿ ಎಂಟು ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದಿದೆ. ಈ ಎಮ್‌ಪಿವಿಯ ವಾರ್ಷಿಕ ಮಾರಾಟವನ್ನು ಗಮನಿಸುವಾಗ ಕಳೆದ ವರ್ಷಕ್ಕಿಂತ 5,800 ಯುನಿಟ್‌ಗಳಷ್ಟು ಏರಿಕೆ ಕಂಡಿದೆ, ಆದರೂ ಅದರ ಮಾಸಿಕ ಮಾರಾಟವು 631 ಯುನಿಟ್‌ಗಳಷ್ಟು ಕಡಿಮೆಯಾಗಿದೆ.
-
ಮಾರುತಿ ಬ್ರೆಜ್ಜಾದ ಮಾಸಿಕ ಮಾರಾಟವು ಕಳೆದ ತಿಂಗಳು 7 ಪ್ರತಿಶತದಷ್ಟು ಕುಸಿದಿದ್ದರೂ, ಅದರ 2024ರ ಮಾರ್ಚ್‌ನ ಮಾರಾಟವು ಅದರ ನೇರ ಪ್ರತಿಸ್ಪರ್ಧಿ ಟಾಟಾ ನೆಕ್ಸಾನ್‌ಗಿಂತ 556 ಯುನಿಟ್‌ಗಳು ಹೆಚ್ಚು ಇದೆ. ಮತ್ತೊಂದೆಡೆ, ಟಾಟಾ ನೆಕ್ಸಾನ್ ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಸ್ಥಿರವಾದ ಅಂಕಿಅಂಶವನ್ನು ಕಾಯ್ದುಕೊಂಡಿದೆ, 14,000 ಯುನಿಟ್‌ಗಳ ಮಾರಾಟದ ಮಾರ್ಕ್ ಅನ್ನು ದಾಟಿದೆ. ನೆಕ್ಸಾನ್‌ನ ಅಂಕಿಅಂಶವು ನೆಕ್ಸಾನ್ ಇವಿಯ ಮಾರಟದ ಸಂಖ್ಯೆಯನ್ನು ಒಳಗೊಂಡಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು.
-
ಮಾರುತಿಯ ಸಬ್-4ಮೀ ಕ್ರಾಸ್ಒವರ್ ಫ್ರಾಂಕ್ಸ್, ವಾರ್ಷಿಕ (MoM) ಮಾರಾಟದಲ್ಲಿ 12 ಪ್ರತಿಶತದಷ್ಟು ಕುಸಿತವನ್ನು ಎದುರಿಸಿತು. ಮಾರುತಿಯು 2024ರ ಮಾರ್ಚ್‌ನಲ್ಲಿ ಫ್ರಾಂಕ್ಸ್‌ನ 12,500 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ರೂಪದಲ್ಲಿ ಫ್ರಾಂಕ್ಸ್ ಹೊಸ ಪ್ರತಿಸ್ಪರ್ಧಿಯನ್ನು ಪಡೆದುಕೊಂಡಿದೆ, ಇದು ಫ್ರಾಂಕ್ಸ್‌ನ ಮರುಬ್ಯಾಡ್ಜ್ ಆವೃತ್ತಿಯಾಗಿದ್ದು, ಈ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದೆ.
-
12,000 ಯುನಿಟ್‌ಗಳ ಕಾರು ಮಾರಾಟದೊಂದಿಗೆ, ಮಾರುತಿ ಇಕೋ ಕಳೆದ ತಿಂಗಳು ಮತ್ತೊಂದು ಸ್ಥಿರವಾದ ಪ್ರದರ್ಶನ ನೀಡಿತು.
-
Maruti Grand Vitara ಕಳೆದ ತಿಂಗಳು 11,000 ಯುನಿಟ್‌ಗಳ ಮಾರಾಟದ ಮಾರ್ಕ್ ಅನ್ನು ದಾಟಿದೆ, ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ಆದರೂ, ಅದರ ಸೆಗ್ಮೆಂಟ್ ಪ್ರತಿಸ್ಪರ್ಧಿಯಾದ ಹ್ಯುಂಡೈ ಕ್ರೆಟಾಗೆ ಹೋಲಿಸಿದರೆ ಅದರ 2024ರ ಮಾರ್ಚ್‌ನ ಮಾರಾಟದಲ್ಲಿ ಅದಕ್ಕಿಂತ ಇದರ ಸಂಖ್ಯೆಯು 5,000 ಯುನಿಟ್‌ಗಳಷ್ಟು ಕಡಿಮೆ ಇದೆ.
-
ಪಟ್ಟಿಯಲ್ಲಿರುವ ಮತ್ತೊಂದು ಮಹೀಂದ್ರಾದ ಕಾರು ಎಂದರೆ ಅದು ಬೊಲೆರೊ, 2024ರ ಮಾರ್ಚ್‌ನಲ್ಲಿ 10,000 ಕ್ಕೂ ಹೆಚ್ಚು ಖರೀದಿದಾರರನ್ನು ಆಕರ್ಷಿಸಿತು. ಅದರ ವಾರ್ಷಿಕ ಮಾರಾಟದ ಅಂಕಿ-ಅಂಶದಲ್ಲಿ ಕಳೆದ ತಿಂಗಳು 8 ಶೇಕಡಾರಷ್ಟು ಹೆಚ್ಚಾಗಿದೆ. ಈ ಸಂಖ್ಯೆಗಳು ಮಹೀಂದ್ರಾ ಬೊಲೆರೊ ಮತ್ತು ಬೊಲೆರೊ ನಿಯೊ ಎರಡರ ಮಾರಾಟ ಅಂಕಿಅಂಶಗಳನ್ನು ಒಳಗೊಂಡಿವೆ.
-
ಈ ಪಟ್ಟಿಯಲ್ಲಿ ಕೊನೆಯಲ್ಲಿರುವ ಕಾರು ಅತ್ಯಂತ ಬೆಲೆಬಾಳುವ ಮೊಡೆಲ್ ಆಗಿದೆ, ಹೌದು, ಟೊಯೊಟಾ ಇನ್ನೋವಾ ಕ್ರಿಸ್ಟಾ 2024ರ ಮಾರ್ಚ್‌ನಲ್ಲಿ 9,900 ಖರೀದಿದಾರರ ಮನೆ ಸೇರಿದೆ. ಡೀಸೆಲ್ ಎಂಜಿನ್‌ನ ಎಂಪಿವಿಯ ಮಾರಾಟವು ಉತ್ತಮವಾದ ಬೆಳವಣಿಗೆಯನ್ನು ಕಂಡಿದೆ, ಇದರ MoM ಮತ್ತು YoY ಮಾರಾಟವು ಕ್ರಮವಾಗಿ 17 ಪ್ರತಿಶತ ಮತ್ತು 23 ಪ್ರತಿಶತದಷ್ಟು ಹೆಚ್ಚಾಗಿದೆ.
ಇಲ್ಲಿ ಇನ್ನಷ್ಟು ಓದಿ: ಟಾಟಾ ಪಂಚ್ ಎಎಮ್‌ಟಿ