• English
  • Login / Register

ಟಾಟಾ ಸಫಾರಿ ಫೇಸ್‌ ಲಿಫ್ಟ್‌ Vs ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಟಾಟಾ ಸಫಾರಿ ಗಾಗಿ shreyash ಮೂಲಕ ಅಕ್ಟೋಬರ್ 21, 2023 09:05 pm ರಂದು ಪ್ರಕಟಿಸಲಾಗಿದೆ

  • 100 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೂರು ಸಾಲುಗಳ ಎಲ್ಲಾ SUV ಗಳಿಗೆ ಹೋಲಿಸಿದಾಗ ಟಾಟಾ ಸಫಾರಿಯು ಅತ್ಯಂತ ಕಡಿಮೆ ಆರಂಭಿಕ ಬೆಲೆ ಮತ್ತು ಅತ್ಯಂತ ಹೆಚ್ಚಿನ ಟಾಪ್‌ ಸ್ಪೆಕ್‌ ಬೆಲೆಯನ್ನು ಹೊಂದಿದೆ

Tata Safari Facelift vs Rivals: Price Comparison

ಟಾಟಾ ಸಫಾರಿ ಕಾರು ಇತ್ತೀಚೆಗೆ ಸಮಗ್ರ ಪರಿಷ್ಕರಣೆಗೆ ಒಳಪಟ್ಟಿದ್ದು ಪ್ರಾರಂಭಿಕ ಬೆಲೆ ರೂ. 16.19 ಲಕ್ಷದಿಂದ (ಎಕ್ಸ್-ಶೋರೂಂ ದೆಹಲಿ) ಇದರ ಮಾರಾಟವು ಪ್ರಾರಂಭಗೊಂಡಿದೆ. ಟಾಟಾ ಸಂಸ್ಥೆಯು ಈ ಮುಂಚೂಣಿಯ 3 ಸಾಲುಗಳ SUVಯ ಸಂಪೂರ್ಣ ಬೆಲೆಯನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಇದು ಮೊದಲಿಗಿಂತಲೂ ಹೆಚ್ಚು ದುಬಾರಿಯಾಗಿದೆ. ಪರಿಷ್ಕೃತ ಸಫಾರಿಯು ಮಹೀಂದ್ರಾ XUV700, ಹ್ಯುಂಡೈ ಅಲ್ಕಜಾರ್, ಮತ್ತು MG ಹೆಕ್ಟರ್‌ ಪ್ಲಸ್‌ ಜೊತೆಗೆ ಸ್ಪರ್ಧಿಸಲಿದೆ. ಈ ಸುಧಾರಿತ ಟಾಟಾ SUV ಯು ಬೆಲೆಯ ವಿಚಾರದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ನೋಡೋಣ.

ಹಕ್ಕುತ್ಯಾಗ: ನಾವು  ಮಹೀಂದ್ರಾ XUV700, ಹ್ಯುಂಡೈ ಅಲ್ಕಜಾರ್, ಮತ್ತು MG ಹೆಕ್ಟರ್ ಪ್ಲಸ್‌ ಕಾರುಗಳ 7/6 ಸೀಟರ್‌ ಡೀಸೆಲ್‌ ವೇರಿಯಂಟ್‌ ಗಳನ್ನು ಮಾತ್ರವೇ ಪರಿಗಣಿಸಿದ್ದೇವೆ. ಏಕೆಂದರೆ ಸಫಾರಿ ಕಾರು ಡೀಸೆಲ್‌ ಎಂಜಿನ್‌ ನಲ್ಲಿ ಮಾತ್ರವೇ ಲಭ್ಯ.

 

ಡೀಸೆಲ್‌ ಮ್ಯಾನುವಲ್

ಟಾಟಾ ಸಫಾರಿ

ಮಹೀಂದ್ರಾ XUV700 

ಹ್ಯುಂಡೈ ಅಲ್ಕಜಾರ್

MG ಹೆಕ್ಟರ್‌ ಪ್ಲಸ್

ಸ್ಮಾರ್ಟ್ - ರೂ. 16.19 ಲಕ್ಷ

     

ಸ್ಮಾರ್ಟ್ (O) - ರೂ. 16.69 ಲಕ್ಷ

     

ಪ್ಯೂರ್ - ರೂ. 17.69 ಲಕ್ಷ

‌AX3 - ರೂ. 17.77 ಲಕ್ಷ

ಪ್ರೆಸ್ಟೀಜ್ 7S - ರೂ. 17.73 ಲಕ್ಷ

 

ಪ್ಯೂರ್ (O) - ರೂ. 18.19 ಲಕ್ಷ

‌AX3 E - ರೂ. 18.27 ಲಕ್ಷ

   

ಪ್ಯೂರ್+ - ರೂ. 19.39 ಲಕ್ಷ

‌AX5 - ರೂ. 19.11 ಲಕ್ಷ

ಪ್ಲಾಟಿನಂ 7S - ರೂ. 19.64 ಲಕ್ಷ

ಸ್ಮಾರ್ಟ್ 7S - ರೂ. 19.76 ಲಕ್ಷ

   

ಪ್ಲಾಟಿನಂ ಅಡ್ವೆಂಚರ್ 7S - ರೂ. 20 ಲಕ್ಷ

 

ಪ್ಯೂರ್+ S - ರೂ. 20.39 ಲಕ್ಷ/ ರೂ. 20.69 ಲಕ್ಷ (ಡಾರ್ಕ್)

 

ಸಿಗ್ನೇಚರ್ 6S - ರೂ. 20.13 ಲಕ್ಷ

 

ಅಡ್ವೆಂಚರ್ - ರೂ. 20.99 ಲಕ್ಷ

‌AX7 - ರೂ. 21.53 ಲಕ್ಷ

 

ಸ್ಮಾರ್ಟ್ ಪ್ರೋ 6S - ರೂ. 20.80 ಲಕ್ಷ

ಅಡ್ವೆಂಚರ್+ - ರೂ. 22.49 ಲಕ್ಷ/ ರೂ. 23.04 ಲಕ್ಷ (ಡಾರ್ಕ್) 

   

ಶಾರ್ಪ್ ಪ್ರೋ 6S/7S - ರೂ. 22.21 ಲಕ್ಷ

ಅಡ್ವೆಂಚರ್+ - ರೂ. 23.49 ಲಕ್ಷ 

‌AX7 - ರೂ. 23.48 ಲಕ್ಷ

   

ಅಕಂಪ್ಲಿಷ್ಡ್ - ರೂ. 23.99 ಲಕ್ಷ/ ರೂ. 24.34 ಲಕ್ಷ (ಡಾರ್ಕ್)

     

ಅಕಂಪ್ಲಿಷ್ಡ್+ - ರೂ. 25.49 ಲಕ್ಷ/ ರೂ. 25.84 ಲಕ್ಷ (ಡಾರ್ಕ್)

     

ಅಕಂಪ್ಲಿಷ್ಡ್+‌ 6S - ರೂ. 25.59 ಲಕ್ಷ/ ರೂ. 25.94 ಲಕ್ಷ (ಡಾರ್ಕ್)

     

ಅಕಂಪ್ಲಿಷ್ಡ್+‌ ಡಾರ್ಕ್ 6S - ರೂ. 25.94 ಲಕ್ಷ

     


ಪ್ರಮುಖ ವೈಶಿಷ್ಟ್ಯಗಳು

Tata Safari Facelift

  •  ಕೋಷ್ಠಕದಲ್ಲಿ ಉಲ್ಲೇಖಿಸಿದ ಎಲ್ಲಾ SUV ಗಳ ಪೈಕಿ ಪರಿಷ್ಕೃತ ಟಾಟಾ ಸಫಾರಿಯ ಆರಂಭಿಕ ಬೆಲೆಯು ಅತ್ಯಂತ ಕಡಿಮೆ ಎನಿಸಿದೆ. ಇದರ ಬೇಸ್‌ ಸ್ಪೆಕ್‌ ವೇರಿಯಂಟ್‌ ನ ಬೆಲೆಯು ಮಹೀಂದ್ರಾ XUV700 AX3 7-ಸೀಟರ್‌ ಡೀಸೆಲ್‌ ವೇರಿಯಂಟ್‌ ನ ಬೆಲೆಗಿಂತ ರೂ. 1.58 ಲಕ್ಷದಷ್ಟು ಕಡಿಮೆ ಇದೆ.

  • ಹೋಲಿಸಲಾದ ಎಲ್ಲಾ SUV ಗಳ ಪೈಕಿ MG ಹೆಕ್ಟರ್‌ ಪ್ಲಸ್‌ ಡೀಸೆಲ್‌ ಕಾರು ಅತ್ಯಧಿಕ ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಟಾಟಾ ಸಫಾರಿ ಕಾರಿನ ಆರಂಭಿಕ ಬೆಲೆಗಿಂತ ರೂ. 3.37 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.

 ಇದನ್ನು ಸಹ ನೋಡಿರಿ: ಟಾಟಾ ಹ್ಯಾರಿಯರ್‌ ಅಥವಾ ಹ್ಯಾರಿಯರ್‌ ಪೆಟ್ರೋಲ್‌ - ಯಾವುದು ಮೊದಲಿಗೆ ಬಿಡುಗಡೆಯಾಗಲಿದೆ?

Updated Hyundai Alcazar

  •  ಟಾಪ್‌ ಸ್ಪೆಕ್‌, ಫುಲಿ ಲೋಡೆಡ್‌ ವೇರಿಯಂಟ್‌ ಕುರಿತು ಮಾತನಾಡುವಾಗ, ಹ್ಯುಂಡೈ ಅಲ್ಕಜಾರ್‌ ಕಾರು ಅತ್ಯಂತ ಅಗ್ಗದ ಆಯ್ಕೆ ಎನಿಸುತ್ತದೆ. ಸಫಾರಿ ಫೇಸ್‌ ಲಿಫ್ಟ್‌ ಮತ್ತು ಅಲ್ಕಜಾರ್‌ ಕಾರುಗಳ ಟಾಪ್‌ ಸ್ಪೆಕ್‌ ವೇರಿಯಂಟ್‌ ಗಳ ನಡುವೆ ಬೆಲೆಯಲ್ಲಿ ರೂ. 5.66 ಲಕ್ಷದಷ್ಟು ವ್ಯತ್ಯಾಸವಿದೆ.
  • ಇದೇ ವೇಳೆ ಟಾಪ್‌ ಸ್ಪೆಕ್ XUV700‌ ಕಾರು, ಟಾಪ್‌ ಸ್ಪೆಕ್‌ ಸಫಾರಿಗಿಂತ ಸುಮಾರು ರೂ. 2.5 ಲಕ್ಷದಷ್ಟು ಅಗ್ಗವಿದೆ.
  • ಟಾಟಾ ಸಫಾರಿ ಕಾರು, 170PS ಮತ್ತು 350Nm ಉಂಟು ಮಾಡುವ ಹಾಗೂ 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾದ 2 ಲೀಟರ್‌ ಡೀಸೆಲ್‌ ಎಂಜಿನ್‌ ಜೊತೆಗೆ ಬರುತ್ತದೆ. MG ಹೆಕ್ಟರ್‌ ಪ್ಲಸ್‌ ಕಾರು ಸಹ ಅದೇ ಎಂಜಿನ್‌ ಅನ್ನು ಬಳಸುತ್ತಿದ್ದು, ಅದೇ ಪ್ರಮಾಣದ ಪವರ್‌ ಔಟ್ಪುಟ್‌ ಅನ್ನು ಹೊಂದಿದೆ.
  • ಮಹೀಂದ್ರಾ XUV700 ಕಾರು ಇವುಗಳಲ್ಲಿ ಅತ್ಯಂತ ಶಕ್ತಿಶಾಲಿ ಡೀಸೆಲ್‌ ಎಂಜಿನ್‌ ಅನ್ನು ಹೊಂದಿದ್ದು, 6-ಸ್ಪೀಡ್‌ ಮ್ಯಾನುವಲ್‌ ಗೇರ್‌ ಬಾಕ್ಸ್‌ ಜೊತೆಗೆ ಹೊಂದಿಸಲಾದ 2.2-ಲೀಟರ್‌ ಡೀಸೆಲ್‌ ಎಂಜಿನ್ (185PS/450Nm)‌ ಜೊತೆಗೆ ಬರುತ್ತದೆ.
  • ಹೋಲಿಸಲಾದ ಕಾರುಗಳ ಪೈಕಿ ಹ್ಯುಂಡೈ ಅಲ್ಕಜಾರ್‌ ಕಾರು ಅತ್ಯಂತ ಕಡಿಮೆ ಶಕ್ತಿಶಾಲಿ ಡೀಸೆಲ್‌ ಮಾದರಿ ಎನಿಸಿದ್ದು, 1.5-ಡೀಸೆಲ್‌ ಎಂಜಿನ್‌ ಅನ್ನು (116PS/250Nm) ಬಳಸುತ್ತದೆ. ಅಲ್ಕಜಾರ್‌ ಕಾರಿನ ಮ್ಯಾನುವಲ್‌ ವೇರಿಯಂಟ್‌ ಅನ್ನು 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗಿದೆ.
  • ಭಾರತದಲ್ಲಿ ಮುಂಬರುವ ಟಾಟಾ SUV ಗಳು

  • ಟಾಟಾ ಸಫಾರಿ ಕಾರಿಗೆ ಸಂಬಂಧಿಸಿದ ವೀಡಿಯೋಗಳು

Tata Safari Facelift Interior

  •  ಎರಡನೇ ಸಾಲಿನ ವೆಂಟಿಲೇಟೆಡ್‌ ಸೀಟುಗಳು (6S), 7 ಏರ್‌ ಬ್ಯಾಗ್‌ ಗಳು ಮತ್ತು 10-ಸ್ಪೀಕರ್ JBL‌ ಸೌಂಡ್‌ ಸಿಸ್ಟಂ ಇತ್ಯಾದಿ ಅನುಕೂಲತೆಗಳನ್ನು ಒದಗಿಸುವ ಮೂಲಕ ಪರಿಷ್ಕೃತ ಟಾಟಾ ಸಫಾರಿಯು ಈ ವಿಭಾಗದಲ್ಲಿ ಅತ್ಯಂತ ಹೆಚ್ಚು ವೈಶಿಷ್ಟ್ಯಗಳನ್ನು ಒದಗಿಸುವ ಕಾರು ಎನಿಸಿದೆ. 

ಡೀಸೆಲ್‌ ಅಟೋಮ್ಯಾಟಿಕ್

  

ಟಾಟಾ ಸಫಾರಿ

ಮಹೀಂದ್ರಾ XUV700

ಹ್ಯುಂಡೈ ಅಲ್ಕಜಾರ್

   

ಪ್ರೆಸ್ಟೀಜ್ (O) 7S - ರೂ. 19.20 ಲಕ್ಷ

ಪ್ಯೂರ್+ - ರೂ. 20.69 ಲಕ್ಷ

‌AX5 - ರೂ. 20.92 ಲಕ್ಷ

ಪ್ಲಾಟಿನಂ (O) 6S/ 7S - ರೂ. 20.76 

   

ಸಿಗ್ನೇಚರ್ (O) 6S - ರೂ. 20.88 ಲಕ್ಷ

ಪ್ಯೂರ್+ S - ರೂ. 21.79 ಲಕ್ಷ/ ರೂ. 22.09 ಲಕ್ಷ (ಡಾರ್ಕ್)

 

ಸಿಗ್ನೇಚರ್ (O) ಅಡ್ವೆಂಚರ್ 7S - ರೂ. 21.24 ಲಕ್ಷ

ಅಡ್ವೆಂಚರ್+ - ರೂ. 23.89 ಲಕ್ಷ/ ರೂ. 24.44 ಲಕ್ಷ (ಡಾರ್ಕ್)

‌AX7 - ರೂ. 23.31 ಲಕ್ಷ

 

ಅಡ್ವೆಂಚರ್+ - ರೂ. 24.89 ಲಕ್ಷ

AX7 AWD - ರೂ. 24.78 ಲಕ್ಷ

 

ಅಕಂಪ್ಲಿಷ್ಡ್ - ರೂ. 25.39 ಲಕ್ಷ/ ರೂ. 25.74 ಲಕ್ಷ (ಡಾರ್ಕ್)

‌AX7 - ರೂ. 25.26 ಲಕ್ಷ

 

ಅಕಂಪ್ಲಿಷ್ಡ್+ - ರೂ. 26.89 ಲಕ್ಷ/ ರೂ. 27.24 ಲಕ್ಷ (ಡಾರ್ಕ್)

AX7 L AWD - ರೂ. 26.57 ಲಕ್ಷ

 

ಅಕಂಪ್ಲಿಷ್ಡ್+‌ 6S - ರೂ. 26.99 ಲಕ್ಷ/ ರೂ. 27.34 ಲಕ್ಷ (ಡಾರ್ಕ್)

   

ಪ್ರಮುಖ ವೈಶಿಷ್ಟ್ಯಗಳು

  •  ಡೀಸೆಲ್‌ ಅಟೋಮ್ಯಾಟಿಕ್‌ ಕಾರಿನ ವಿಚಾರ ಬಂದಾಗ ಹ್ಯುಂಡೈ ಅಲ್ಕಜಾರ್‌ ಕಾರು ಅತ್ಯಂತ ಅಗ್ಗದ ಕಾರು ಎನಿಸಿದ್ದು, ರೂ. 19.20 ಲಕ್ಷದಷ್ಟು ಆರಂಭಿಕ ಬೆಲೆಯನ್ನು ಹೊಂದಿದೆ. ಈ ಪಟ್ಟಿಯಲ್ಲಿರುವ ಇತರ ಎರಡು ಅಟೋಮ್ಯಾಟಿಕ್‌ SUV ಗಳಿಗೆ ಹೋಲಿಸಿದರೆ ರೂ. 1.72 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಟಾಪ್‌ ಸ್ಪೆಕ್‌ ಡೀಸೆಲ್‌ ಅಟೋಮ್ಯಾಟಿಕ್‌ ಹ್ಯುಂಡೈ ಅಲ್ಕಜಾರ್‌ ಕಾರಿಗಿಂತಲೂ ಟಾಟಾ SUV ಯ ಟಾಪ್‌ ಸ್ಪೆಕ್‌ ವೇರಿಯಂಟ್‌, ರೂ. 6.1 ಲಕ್ಷದಷ್ಟು ದುಬಾರಿ ಎನಿಸಿದೆ.

  •  ಮಹೀಂದ್ರಾ XUV700 ಡೀಸೆಲ್‌ ಅಟೋಮ್ಯಾಟಿಕ್‌ ಕಾರು ರೂ. 20.92 ಲಕ್ಷದಷ್ಟು ಆರಂಭಿಕ ಬೆಲೆಯ ಮೂಲಕ ಅತ್ಯಧಿಕ ಆರಂಭಿಕ ಬೆಲೆಯನ್ನು ಹೊಂದಿರುವ ಕಾರು ಎನಿಸಿದ್ದು, ಆರಂಭಿಕ ಹಂತದ ಟಾಟಾ ಸಫಾರಿ ಡೀಸೆಲ್‌ ಅಟೋಮ್ಯಾಟಿಕ್‌ ಗಿಂತ ರೂ. 23,000 ದಷ್ಟು ದುಬಾರಿ ಎನಿಸಿದೆ.
  • ಆದರೆ ಟಾಟಾ ಸಫಾರಿಯು ರೂ. 27.34 ಲಕ್ಷದ ಮೂಲಕ ಮುಂಚೂಣಿಯಲ್ಲಿದ್ದು, ಹೋಲಿಸಲಾದ ವಾಹನಗಳ ಪೈಕಿ ಅತ್ಯಂತ ದುಬಾರಿ SUV ಎನಿಸಿದೆ.  AWDಯ ಅನುಕೂಲತೆಯನ್ನೂ ಹೊಂದಿರುವ ಟಾಪ್‌ ಸ್ಪೆಕ್‌ ಮಹೀಂದ್ರಾ XUV700 AX7L ವಾಹನಕ್ಕೆ ಹೋಲಿಸಿದರೆ ಟಾಟಾ ಸಫಾರಿ ಅಕಂಪ್ಲಿಷ್ಡ್+‌ ಡಾರ್ಕ್‌ 6 ಸೀಟರ್‌ ಕಾರಿಗೆ ನೀವು ರೂ. 77,000 ದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕು. 
  • ಪಟ್ಟಿಯಲ್ಲಿರುವ ಎಲ್ಲಾ SUV ಗಳು 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರುತ್ತವೆ.
  • MG ಸಂಸ್ಥೆಯು ಹೆಕ್ಟರ್‌ ಡೀಸೆಲ್‌ ಜೊತೆಗೆ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಯನ್ನು ಒದಗಿಸುವುದಿಲ್ಲ ಎಂಬುದನ್ನು ಗಮನಿಸಿ.

ಒಂದು ವೇಳೆ ನೀವು ಟಾಟಾ ಸಫಾರಿ ಕಾರಿನ ಸಣ್ಣ ಆವೃತ್ತಿ ಎನಿಸಿರುವ  ಟಾಟಾ ಹ್ಯಾರಿಯರ್ ಅನ್ನು ಎದುರು ನೋಡುತ್ತಿದ್ದರೆ, ಈ ವಾಹನದ ಬೆಲೆಯನ್ನು ಸಹ ನಾವು ಇದರ ಸ್ಪರ್ಧಿಗಳೊಂದಿಗೆ ಹೋಲಿಸಿದ್ದೇವೆ. ಇದರಲ್ಲಿ ಮಹೀಂದ್ರಾ XUV700, MG ಹೆಕ್ಟರ್, ಹ್ಯುಂಡೈ ಕ್ರೆಟಾ, ಮತ್ತು ಕಿಯಾ ಸೆಲ್ಟೋಸ್ ಇತ್ಯಾದಿಗಳ 5 ಸೀಟರ್‌ ವೇರಿಯಂಟ್‌ ಗಳು ಒಳಗೊಂಡಿವೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಸಫಾರಿ ಡೀಸೆಲ್

was this article helpful ?

Write your Comment on Tata ಸಫಾರಿ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience