ವೀಕ್ಷಿಸಿ: ಐಡಿಯಾದಿಂದ ರಿಯಾಲಿಟಿ - Tata Curvvನ ಡಿಸೈನ್ ಪ್ರಾರಂಭದಿಂದ ಮುಕ್ತಾಯದವರೆಗೆ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ವಿವರ
ಟಾಟಾ ಕರ್ವ್ ಗಾಗಿ ಭಾನು ಮೂಲಕ ಜುಲೈ 31, 2024 11:10 am ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ಕಾರು ಡಿಸೈನ್ ಮಾಡುವ ಪ್ರಕ್ರಿಯೆಯು ಹಲವಾರು ಹಂತಗಳನ್ನು ಹೊಂದಿದೆ. ಇದು ಐಡಿಯಾ ಮತ್ತು ಡಿಸೈನ್ ನೊಂದಿಗೆ ಪ್ರಾರಂಭವಾಗುತ್ತದೆ, ನಂತರ ಕ್ಲೇ ಮಾಡೆಲ್ ಗಳನ್ನು ತಯಾರಿಸಲಾಗುತ್ತದೆ ಮತ್ತು ಕೊನೆಯಲ್ಲಿ ಡಿಸೈನ್ ಅನ್ನು ಅಂತಿಮಗೊಳಿಸಲಾಗುತ್ತದೆ
ಕಾರಿನ ಡಿಸೈನ್ ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ಪ್ರೊಡಕ್ಷನ್ ರೆಡಿಯಾಗಿ ಹೇಗೆ ತಯಾರಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕಲ್ಪನೆ ಮತ್ತು ಡಿಸೈನ್ ನ ಸುಧಾರಣೆ ಸೇರಿದಂತೆ ಇಲ್ಲಿ ಹಲವಾರು ಹಂತಗಳಿವೆ. ಇತ್ತೀಚೆಗೆ ಟಾಟಾ UKಯಲ್ಲಿರುವ ತಮ್ಮ ಡಿಸೈನ್ ಸೆಂಟರ್ ಗೆ ನಮ್ಮನ್ನು ಆಹ್ವಾನಿಸಿದಾಗ ಈ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡುವ ಅವಕಾಶ ನಮಗೆ ಸಿಕ್ಕಿತು. ಅಲ್ಲಿ, ಕರ್ವ್ ಗಾಗಿ ಡಿಸೈನ್ ಕೆಲಸವು ಹೇಗೆ ಪ್ರಾರಂಭವಾಯಿತು ಮತ್ತು ಅದು ಅಂತಿಮ ಪ್ರಾಡಕ್ಟ್ ಆಗಿ ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ನಮಗೆ ತೋರಿಸಲಾಯಿತು.
ಪ್ರಕ್ರಿಯೆಯು ಹೇಗೆ ಪ್ರಾರಂಭವಾಗುತ್ತದೆ?
-
ವೀಡಿಯೊದಲ್ಲಿ ತೋರಿಸಿರುವಂತೆ, ಕಾರಿನ ಬಾಡಿ ಸ್ಟೈಲ್ ಮತ್ತು ಆಕಾರವನ್ನು ಆಯ್ಕೆಮಾಡುವುದು ಸೇರಿದಂತೆ ಇಂತಹ ಕಲ್ಪನೆಗಳೊಂದಿಗೆ ಇದು ಪ್ರಾರಂಭವಾಗುತ್ತದೆ.
-
ಮುಂದಿನ ಹಂತದಲ್ಲಿ, ಕೈಯಿಂದ ಬರೆದು ಚಿತ್ರಿಸಿದ ಮತ್ತು ಕಂಪ್ಯೂಟರ್-ರಚಿಸಿದ ಚಿತ್ರಗಳನ್ನು ಬಳಸಿಕೊಂಡು ಡಿಸೈನ್ ರೇಖಾಚಿತ್ರಗಳನ್ನು ಮಾಡಲಾಗುತ್ತದೆ. ಡಿಸೈನ್ ಅನ್ನು ಸುಧಾರಣೆ ಮಾಡುತ್ತಾ ಅಂತಿಮಗೊಳಿಸುವವರೆಗೆ ಹಲವಾರು ರೇಖಾಚಿತ್ರಗಳನ್ನು ಮಾಡಲಾಗುತ್ತದೆ.
ಡಿಸೈನ್ ಮಾಡೆಲ್ ಗಳು
-
ಅಂತಿಮ ರೇಖಾಚಿತ್ರಗಳನ್ನು ನಂತರ 2D ಮತ್ತು 3D ಮಾಡೆಲ್ ಗಳಾಗಿ ಪರಿವರ್ತಿಸಲಾಗುತ್ತದೆ, ಇದು ಕಾರು ಹೇಗೆ ಕಾಣುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ನೀಡುತ್ತದೆ.
-
ಕಾರು ವಿವಿಧ ಕಲರ್ ಗಳಲ್ಲಿ ಹೇಗೆ ಕಾಣುತ್ತದೆ ಮತ್ತು ವಿವಿಧ ಮೇಲ್ಮೈಗಳು ಬೆಳಕಿಗೆ ಹೇಗೆ ಹೊಳೆಯುತ್ತವೆ ಎಂಬುದನ್ನು ಕೂಡ ಇದು ತೋರಿಸುತ್ತದೆ.
ವರ್ಚುವಲ್ ರಿಯಾಲಿಟಿ
-
ಡಿಸೈನ್ ಮಾಡೆಲ್ ಗಳನ್ನು ನಂತರ ವರ್ಚುವಲ್ ರಿಯಾಲಿಟಿ ಬಳಸಿ ಪರಿಶೀಲಿಸಲಾಗುತ್ತದೆ. ಇದು ಡಿಸೈನರ್ ಗಳಿಗೆ ಕಾರನ್ನು ಹೆಚ್ಚು ಸೂಕ್ಷ್ಮವಾಗಿ ಅನುಭವಿಸಲು ಮತ್ತು ಅದರ ಇಂಟೀರಿಯರ್ ಅನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.
-
ಸೀಟ್ ಗಳನ್ನು ಹೇಗೆ ಇರಿಸಲಾಗಿದೆ, ಸ್ಟೀರಿಂಗ್ ವೀಲ್ ಪ್ಲೇಸ್‌ಮೆಂಟ್ ಹೇಗಿದೆ ಮತ್ತು ಒಟ್ಟಾರೆ ಗೋಚರತೆ ಒಳಗೊಂಡಂತೆ ಕಾರಿನ ಆರಾಮದಾಯಕತೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಕ್ಲೇ ಮಾಡೆಲ್ ಗಳು
-
ಇದೆಲ್ಲ ಮಾಡಿದ ನಂತರ, ಈ ಕಲ್ಪನೆಯನ್ನು ಕ್ಲೇ ಮಾಡೆಲ್ ಮೂಲಕ ಫಿಸಿಕಲ್ ಮಾಡೆಲ್ ಆಗಿ ಪರಿವರ್ತಿಸಲಾಗುತ್ತದೆ. ಮೊದಲನೆಯದಾಗಿ, ಡಿಸೈನ್ ಉದ್ದೇಶಿಸಿದಂತೆ ಕಾರ್ಯನಿರ್ವಹಿಸುತ್ತದೆಯೇ ಎಂದು ನೋಡಲು ಸಣ್ಣ ಮಟ್ಟದ ಕ್ಲೇ ಮಾಡೆಲ್ ಗಳನ್ನು ತಯಾರಿಸಲಾಗುತ್ತದೆ. ಈ ಕ್ಲೇ ಮಾಡೆಲ್ ಗಳನ್ನು ಮಾಡಲು, ಮರದ ಬೇಸ್ ರಚನೆಯನ್ನು ಬಳಸಲಾಗುತ್ತದೆ, ಮತ್ತು ನಂತರ ಅದರ ಸುತ್ತಲೂ ಕ್ಲೇ ಮೌಲ್ಡ್ ಆಕಾರವನ್ನು ನೀಡಲಾಗುತ್ತದೆ.
-
ಈ ಕ್ಲೇ ಮಾಡೆಲ್ ಗಳನ್ನು ಮುಖ್ಯವಾಗಿ ಮಷೀನ್ ಗಳು ಮತ್ತು 3D ಮ್ಯಾಪಿಂಗ್ ಬಳಸಿ ತಯಾರಿಸಲಾಗುತ್ತದೆ, ಹಾಗಾಗಿ ಇದು ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಆದರೆ, ಅಂತಿಮ ರಚನೆ ಮತ್ತು ಮೇಲ್ಮೈ ವಿವರಗಳನ್ನು ಕೈಯಿಂದ ಮಾಡಲಾಗುತ್ತದೆ.
-
ಹಲವಾರು ಹೊಂದಾಣಿಕೆಗಳು ಮತ್ತು ಸುಧಾರಣೆಗಳ ನಂತರ, ಕಾರು ಹೇಗೆ ಕಾಣುತ್ತದೆ ಎಂಬುದನ್ನು ನಿಖರವಾಗಿ ತೋರಿಸಲು ಲೈಫ್ ಸೈಜ್ ಕ್ಲೇ ಮಾಡೆಲ್ ಗಳನ್ನು ತಯಾರಿಸಲಾಗುತ್ತದೆ. ಈ ಮಾದರಿಗಳನ್ನು ನಂತರ ಪೈಂಟ್ ಮಾಡಲಾಗುತ್ತದೆ ಮತ್ತು ಅಂತಿಮ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವರ್ಸಸ್ ಟಾಟಾ ಪಂಚ್ EV ಲಾಂಗ್ ರೇಂಜ್: ರಿಯಲ್ ವರ್ಲ್ಡ್ ಪರ್ಫಾರ್ಮೆನ್ಸ್ ಟೆಸ್ಟ್
ಟಾಟಾ ಕರ್ವ್ ಬಗ್ಗೆ ಇನ್ನಷ್ಟು ವಿವರಗಳು
ಟಾಟಾ ಕರ್ವ್ ಭಾರತದಲ್ಲಿ ಮಾಸ್-ಮಾರುಕಟ್ಟೆಗೆ ಲಭ್ಯವಿರುವ ಮೊದಲ SUV ಕೂಪ್‌ಗಳಲ್ಲಿ ಒಂದಾಗಿದೆ. ಅದರ ಕೂಪ್ ಡಿಸೈನ್ ನ ಜೊತೆಗೆ, ಕರ್ವ್ ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ ಮತ್ತು ಹ್ಯಾರಿಯರ್/ಸಫಾರಿಯಂತಹ ಇತರ ಟಾಟಾ ಮಾಡೆಲ್ ಗಳಿಂದ ಸ್ಫೂರ್ತಿ ಪಡೆದಿದೆ. ಟಾಟಾ ಇನ್ನೂ ಕರ್ವ್ ನ ಒಳಭಾಗವನ್ನು ತೋರಿಸದಿದ್ದರೂ, ಇದು ಟಾಟಾ ನೆಕ್ಸಾನ್ ನ ಒಳಭಾಗವನ್ನು ಹೋಲುವ ಸಾಧ್ಯತೆಯಿದೆ.
ಕರ್ವ್ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ AC, ಪನರೋಮಿಕ್ ಸನ್‌ರೂಫ್ ಮತ್ತು ಪವರ್ಡ್ ಟೈಲ್‌ಗೇಟ್‌ನಂತಹ ಫೀಚರ್ ಗಳೊಂದಿಗೆ ಬರಬಹುದು. ಸುರಕ್ಷತಾ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ವ್ಯೂ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುವ ಸಾಧ್ಯತೆಯಿದೆ.
ಎಂಜಿನ್ ನಲ್ಲಿ ಏನಿದೆ?
ಟಾಟಾ ಕರ್ವ್ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಡೈರೆಕ್ಟ್ ಇಂಜೆಕ್ಷನ್‌ನೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ ಮತ್ತು ಇದು ಟಾಟಾ ನೆಕ್ಸಾನ್‌ನಲ್ಲಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಪಡೆಯಬಹುದು:
ಇಂಜಿನ್ |
1.2-ಲೀಟರ್ T-GDi ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
125 PS |
115 PS |
ಟಾರ್ಕ್ |
225 Nm |
260 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ) |
6-ಸ್ಪೀಡ್ MT, DCT (ನಿರೀಕ್ಷಿಸಲಾಗಿದೆ) |
DCT: ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಕರ್ವ್ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ಯ ಪೆಟ್ರೋಲ್ ವೇರಿಯಂಟ್ ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 7-ಸ್ಪೀಡ್ DCT ಈ ಎರಡೂ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ. ಕೆಲವು ವರದಿಗಳು ಕರ್ವ್ ಡೀಸೆಲ್ DCT ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರಬಹುದು ಎಂದು ಹೇಳುತ್ತವೆ.
ಕರ್ವ್ ಆಲ್-ಎಲೆಕ್ಟ್ರಿಕ್ ವರ್ಷನ್ ನಲ್ಲಿ ಕೂಡ ಬರಲಿದೆ. ಟಾಟಾ ಇನ್ನೂ ಕರ್ವ್ EV ಯ ಬ್ಯಾಟರಿ ಮತ್ತು ಮೋಟಾರ್ ಕುರಿತು ವಿವರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಮತ್ತು 500 ಕಿಮೀ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ ಬೆಲೆಯು ರೂ. 10.50 ಲಕ್ಷಗಳಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ.
ಮತ್ತೊಂದೆಡೆ, ಕರ್ವ್ EV ಬೆಲೆಯು ರೂ. 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಮತ್ತು ಮಾರುತಿ eVX ಗೆ ಪ್ರತಿಸ್ಪರ್ಧಿಯಾಗಲಿದೆ.
ಟಾಟಾ ಕರ್ವ್ ಕುರಿತು ಹೆಚ್ಚಿನ ಅಪ್ಡೇಟ್ ಗಳಿಗಾಗಿ, ಕಾರ್ದೇಖೊ ವಾಟ್ಸ್ಅಪ್ ಚಾನಲ್ ಅನ್ನು ಫಾಲೋ ಮಾಡಿ