ರೂ 12.39 ಲಕ್ಷಕ್ಕೆ ನೀವು ಪಡೆಯಬಹುದು ಸ್ಕೋಡಾ ಕುಷಕ್ ಆನಿಕ್ಸ್ ಆವೃತ್ತಿ
ಈ ಕಾಂಪ್ಯಾಕ್ಟ್ SUVಯ ವಿಶೇಷ ಆವೃತ್ತಿಯನ್ನು ಕೇವಲ ಒಂದು ವೇರಿಯೆಂಟ್‌ನಲ್ಲಿ ಮಾತ್ರ ಪಡೆಯಬಹುದು.
- ಬೇಸ್-ವೇರಿಯೆಂಟ್ ಆಧರಿಸಿ, ಇದರ ಬೆಲೆಯನ್ನು ರೂ 12.39 ಲಕ್ಷಕ್ಕೆ (ಎಕ್ಸ್-ಶೋರೂಂ) ನಿಗದಿಪಡಿಸಲಾಗಿದೆ.
- ಹೊರಭಾಗದ ಸೈಡ್ ಪ್ರೊಫೈಲ್‌ನಲ್ಲಿ ಡಿಕಾಲ್‌ಗಳಂತಹ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದಿದೆ.
- ಆಟೋ AC ಮತ್ತು LED ಹೆಡ್‌ಲ್ಯಾಂಪ್‌ಗಳಂತಹ ಸಣ್ಣ ಮಟ್ಟಿನ ಫೀಚರ್ ಸೇರ್ಪಡೆಗಳನ್ನು ಪಡೆದಿದೆ.
- 1.0-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು 115PS ಮತ್ತು 178Nm ಅನ್ನು ಉತ್ಪಾದಿಸುತ್ತದೆ, ಆದರೆ ಇದು 6-ಸ್ಪೀಡ್ ಮ್ಯಾನುವಲ್ ಜೊತೆಗೆ ಮಾತ್ರ ಬರುತ್ತದೆ.
ಕುಶಕ್‌ಗಾಗಿ ಸ್ಕೋಡಾ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇತರ ವಿಶೇಷ ಆವೃತ್ತಿಗಳಿಗೆ ಭಿನ್ನವಾಗಿ ಈ ಆನಿಕ್ಸ್ ಆವೃತ್ತಿಯು ಬೇಸ್-ಸ್ಪೆಕ್ ಆ್ಯಕ್ಟಿವ್ ಮ್ಯಾನುವಲ್ ವೇರಿಯೆಂಟ್ ಅನ್ನು ಆಧರಿಸಿದೆ. ಕುಷಕ್ ಆನಿಕ್ಸ್ ಆವೃತ್ತಿಗೆ ಬುಕಿಂಗ್‌ಗಳು ತೆರೆದಿದ್ದು, ಇದರ ಬೆಲೆಗಳು ಈ ಕೆಳಗಿನಂತಿವೆ:
ಕುಷಕ್ ಆ್ಯಕ್ಟಿವ್ MT |
ಕುಷಕ್ ಆನಿಕ್ಸ್ ಆವೃತ್ತಿ MT |
ವ್ಯತ್ಯಾಸ |
ರೂ 11.59 ಲಕ್ಷ |
ರೂ 12.39 ಲಕ್ಷ |
+ 80,000 |
ಈ ವಿಶೇಷ ಆವೃತ್ತಿಯನ್ನು ಬೇಸ್ ಸ್ಪೆಕ್ ಆ್ಯಕ್ಟಿವ್ ಮತ್ತು ಮಿಡ್-ಸ್ಪೆಕ್ ಆ್ಯಂಬಿಷನ್ ಟ್ರಿಮ್‌ಗಳ ನಡುವೆ ಇರಿಸಲಾಗಿದ್ದು, ಇದು ಮೊದಲಿನದಕ್ಕಿಂತ ರೂ 80,000 ಪ್ರೀಮಿಯಂ ಅನ್ನು ಹೊಂದಿದೆ ಹಾಗೂ ನಂತರದಕ್ಕಿಂತ ರೂ 60,000 ಹೆಚ್ಚು ಕೈಗೆಟುಕುವಂತಿದೆ. ಪ್ರಸ್ತುತ, ಈ ವಿಶೇಷ ಆವೃತ್ತಿಯನ್ನು ಒಂದು ವೇರಿಯೆಂಟ್‌ನಲ್ಲಿ ಮಾತ್ರ ನೀಡಲಾಗುತ್ತಿದೆ.
ಇದರಲ್ಲಿ ಹೊಸತೇನಿದೆ
ಈ ವಿಶೇಷ ಆವೃತ್ತಯಲ್ಲಿ ಕಾಸ್ಮೆಟಿಕ್ ಬದಲಾವಣೆಗಳೇ ಹೆಚ್ಚಾಗಿ ಇವೆ. ಅಲಾಯ್ ವ್ಹೀಲ್‌ಗಳಿಗೆ ಹೊಸ ಡಿಸೈನ್‌ಗಳು, ಫ್ರಂಟ್ ಮತ್ತು ರಿಯರ್ ಡೋರ್‌ಗಳಾದ್ಯಂತ ಗ್ರೇ ಡೀಕಾಲ್‌ಗಳು ಮತ್ತು B ಪಿಲ್ಲರ್‌ಗಳಲ್ಲಿ “ಆನಿಕ್ಸ್” ಬ್ಯಾಡ್ಜಿಂಗ್ ಅನ್ನು ನೀವು ಪಡೆಯಬಹುದು.
ಫೀಚರ್‌ಗಳಲ್ಲಿ ಕೆಲವೊಂದು ಸೇರ್ಪಡೆಗಳನ್ನು ಮಾಡಲಾಗಿದೆ. ಆನಿಕ್ಸ್ ಆವೃತ್ತಿಯು ಬೇಸ್-ಸ್ಪೆಕ್ ಆ್ಯಕ್ಟಿವ್ ಟ್ರಿಮ್ ಆಧಾರಿತವಾದ್ದರಿಂದ ಹೆಚ್ಚು ಫೀಚರ್‌ಗಳನ್ನು ನೀಡಲಾಗಿಲ್ಲ. ಆದರೆ ಈ ವಿಶೇಷ ಆವೃತ್ತಿಯು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, DRLಗಳನ್ನು ಹೊಂದಿರುವ LED ಹೆಡ್‌ಲ್ಯಾಂಪ್‌ಗಳು, ಮೂಲೆಯಲ್ಲಿರುವ ಫಾಗ್ ಲ್ಯಾಂಪ್‌ಗಳು, ವಾಶರ್ ಹೊಂದಿರುವ ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಅನ್ನು ಹೊಂದಿದೆ.
ಒಂದು ಇಂಜಿನ್
ಈ ವಿಶೇಷ ಆವೃತ್ತಿಯು ಕುಷಕ್‌ನಲ್ಲಿ ಬರುವ ಎರಡು ಪೆಟ್ರೋಲ್ ಯೂನಿಟ್‌ಗಳಲ್ಲಿ 1.0-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (115PS ಮತ್ತು 178Nm) ಅನ್ನು ಬಳಸುತ್ತದೆ. ಈ ವಿಶೇಷ ಆವೃತ್ತಿಯಲ್ಲಿ ಈ ಯೂನಿಟ್ ಕೇವಲ 6-ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ ಆದರೆ ಈ ಕಾಂಪ್ಯಾಕ್ಟ್ SUVಯ ಟಾಪ್ ವೇರಿಯೆಂಟ್‌ಗಳು ಈ ಇಂಜಿನ್‌ನೊಂದಿಗೆ 6-ಸ್ಪೀಡ್ ಟಾರ್ಕ್ ಕನ್‌ವರ್ಟರ್ ಅನ್ನೂ ಪಡೆದಿದೆ.
ಈ ಕಾಂಪ್ಯಾಕ್ಟ್ SUV ಟಾಪ್ ವೇರಿಯೆಂಟ್‌ಗಳು 150PS ಮತ್ತು 250Nm ಅನ್ನು ಉತ್ಪಾದಿಸುವ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. ಈ ಯೂನಿಟ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ DCT ಜೊತೆಗೆ ಜೋಡಿಸಲಾಗಿದೆ.
ಪ್ರತಿಸ್ಪರ್ಧಿಗಳು
ರೂ 11.59 ಲಕ್ಷದಿಂದ 19.69 ಲಕ್ಷದ ತನಕ (ಎಕ್ಸ್-ಶೋರೂಂ) ಬೆಲೆ ಹೊಂದಿರುವ ಈ ಸ್ಕೋಡಾ ಕುಷಕ್ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವಾಗನ್ ಟೈಗನ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ : ಸ್ಕೋಡಾ ಕುಷಕ್‌ನ ಆನ್‌ರೋಡ್ ಬೆಲೆ