Login or Register ಅತ್ಯುತ್ತಮ CarDekho experience ಗೆ
Login

ಹೊಸ ಹೆಸರು ಮತ್ತು ಫೀಚರ್‌ಗಳ ಆಪ್‌ಡೇಟ್‌ನೊಂದಿಗೆ ಬಿಡುಗಡೆಯಾದ 2024 Citroen C3 Aircross

published on ಸೆಪ್ಟೆಂಬರ್ 30, 2024 07:52 pm by dipan for ಸಿಟ್ರೊನ್ aircross

ಆಪ್‌ಡೇಟ್‌ನೊಂದಿಗೆ, ಇದು ಹೊಸ ಹೆಸರು, ಹೊಸ ಫೀಚರ್‌ಗಳು ಮತ್ತು ಇನ್ನೊಂದು ಎಂಜಿನ್ ಆಯ್ಕೆಯನ್ನು ಹೊಂದಿದೆ

  • 2024 ಸಿಟ್ರೊಯೆನ್ ಏರ್‌ಕ್ರಾಸ್ ಈಗ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.

  • ಡ್ಯಾಶ್‌ಬೋರ್ಡ್ ಅದೇ ಕಪ್ಪು ಮತ್ತು ಗ್ರೇ ಥೀಮ್‌ನಲ್ಲಿ ಬರುತ್ತದೆ ಆದರೆ ಈಗ ಕೆಲವು ಸಾಫ್ಟ್-ಟಚ್ ಮೆಟಿರಿಯಲ್‌ಗಳನ್ನು ಒಳಗೊಂಡಿದೆ.

  • 10.25-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್‌ ಸೀಟಿನಂತಹ ಫೀಚರ್‌ಗಳನ್ನು ಇದರಲ್ಲಿಯು ಉಳಿಸಿಕೊಳ್ಳಲಾಗಿದೆ.

  • ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು TPMS ಅನ್ನು ಒಳಗೊಂಡಿದೆ.

  • ಸಿ3 ಹ್ಯಾಚ್‌ಬ್ಯಾಕ್‌ನೊಂದಿಗೆ ನೀಡಲಾದ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ಅನ್ನು (82 ಪಿಎಸ್‌/115 ಎನ್‌ಎಮ್‌), ಈಗ ಏರ್‌ಕ್ರಾಸ್‌ನೊಂದಿಗೆ ನೀಡಲಾಗುತ್ತಿದೆ.

ಆಪ್‌ಡೇಟ್‌ ಮಾಡಲಾದ ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಅನ್ನು ಭಾರತದಲ್ಲಿ ಬಸಾಲ್ಟ್ ಬಿಡುಗಡೆ ಸಮಯದಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಆರು ಏರ್‌ಬ್ಯಾಗ್‌ಗಳು ಮತ್ತು ಆಟೋ ಎಸಿಯಂತಹ ಹೊಸ ಫೀಚರ್‌ಗಳೊಂದಿಗೆ ಪ್ರದರ್ಶಿಸಲಾಗಿತ್ತು. ಫ್ರೆಂಚ್ ಕಾರು ತಯಾರಕರು ಈಗ ಇದನ್ನು ಏರ್‌ಕ್ರಾಸ್ ಎಸ್‌ಯುವಿ ಎಂದು ನಾಮಕರಣ ಮಾಡಿದ್ದಾರೆ ಮತ್ತು ಭಾರತದಾದ್ಯಂತ ಇದನ್ನು 8.49 ಲಕ್ಷ ರೂಪಾಯಿಗಳ ಎಕ್ಸ್-ಶೋರೂಮ್ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಆಪ್‌ಡೇಟ್‌ ಮಾಡಲಾದ ಏರ್‌ಕ್ರಾಸ್‌ನ ವಿವರವಾದ ಬೆಲೆ ಪಟ್ಟಿಯನ್ನು ನಾವು ತಿಳಿಯೋಣ:

ವೇರಿಯೆಂಟ್‌ಗಳು

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಯುು

8.49 ಲಕ್ಷ ರೂ.

ಹೊಸ ವೇರಿಯೆಂಟ್‌

ಪ್ಲಸ್

9.99 ಲಕ್ಷ ರೂ.

ಹೊಸ ವೇರಿಯೆಂಟ್‌

ಧೋನಿ ಎಡಿಷನ್

11.82 ಲಕ್ಷ ರೂ.

ಸ್ಥಗಿತಗೊಂಡಿದೆ

ಯು ಟರ್ಬೊ ಮ್ಯಾನುಯಲ್‌

9.99 ಲಕ್ಷ ರೂ.

ಸ್ಥಗಿತಗೊಂಡಿದೆ

ಪ್ಲಸ್ ಟರ್ಬೊ ಮ್ಯಾನುಯಲ್‌

11.61 ಲಕ್ಷ ರೂ.

11.95 ಲಕ್ಷ ರೂ.

+ 34,000 ರೂ.

ಪ್ಲಸ್ ಟರ್ಬೊ ಮ್ಯಾನುಯಲ್‌ (5+2 ಸೀಟರ್)

11.96 ಲಕ್ಷ ರೂ.

12.30 ಲಕ್ಷ ರೂ.

+34,000 ರೂ.

ಮ್ಯಾಕ್ಸ್ ಟರ್ಬೊ ಮ್ಯಾನುಯಲ್‌

12.26 ಲಕ್ಷ ರೂ.

12.70 ಲಕ್ಷ ರೂ.

+44,000 ರೂ.

ಮ್ಯಾಕ್ಸ್ ಟರ್ಬೊ ಮ್ಯಾನುಯಲ್‌ (5+2 ಸೀಟರ್)

12.61 ಲಕ್ಷ ರೂ.

13.05 ಲಕ್ಷ ರೂ.

+44,000 ರೂ.

ಪ್ಲಸ್ ಟರ್ಬೊ ಆಟೋಮ್ಯಾಟಿಕ್‌

12.91 ಲಕ್ಷ ರೂ.

13.25 ಲಕ್ಷ ರೂ.

+34,000 ರೂ.

ಮ್ಯಾಕ್ಸ್ ಟರ್ಬೊ ಆಟೋಮ್ಯಾಟಿಕ್‌

13.56 ಲಕ್ಷ ರೂ.

14 ಲಕ್ಷ ರೂ.

+44,000 ರೂ.

ಮ್ಯಾಕ್ಸ್ ಟರ್ಬೊ ಆಟೋಮ್ಯಾಟಿಕ್‌ (5+2 ಸೀಟರ್)

13.91 ಲಕ್ಷ ರೂ.

14.35 ಲಕ್ಷ ರೂ.

+44,000 ರೂ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್‌ಶೋರೂಮ್‌ ಬೆಲೆಗಳು

ಆಪ್‌ಡೇಟ್‌ ಮಾಡಲಾದ ಏರ್‌ಕ್ರಾಸ್ ಎಸ್‌ಯುವಿ ಏನು ಆಫರ್‌ ಅನ್ನು ಹೊಂದಿದೆ ಎಂಬುದನ್ನು ನಾವು ನೋಡೋಣ:

ಏನಿದೆ ಹೊಸತು ?

ಹೊಸ ಹೆಸರಿನ ಹೊರತಾಗಿ, ಇದು ಹಿಂದಿನ ರಿಫ್ಲೆಕ್ಟರ್‌ ಆಧಾರಿತ ಹ್ಯಾಲೊಜೆನ್ ಲೈಟ್‌ಗಳನ್ನು ಬದಲಿಸಿ ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಈ ಮೊಡೆಲ್‌ 17-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಮತ್ತು ಮೊದಲಿನಂತೆಯೇ ಅದೇ ಹೊರಭಾಗದ ವಿನ್ಯಾಸವನ್ನು ಹೊಂದಿದೆ.

ಡ್ಯಾಶ್‌ಬೋರ್ಡ್ ವಿನ್ಯಾಸವು ಒಂದೇ ಆಗಿರುತ್ತದೆ, ಆದರೆ ಅದು ಈಗ ಕೆಲವು ಸಾಫ್ಟ್-ಟಚ್ ಮೆಟಿರಿಯಲ್‌ಗಳನ್ನು ಹೊಂದಿದೆ. ಫೀಚರ್‌ಗಳ ವಿಷಯದಲ್ಲಿ, ಆಪ್‌ಡೇಟ್‌ 6 ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), ಹಿಂಬದಿಯ ದ್ವಾರಗಳೊಂದಿಗೆ ಆಟೋಮ್ಯಾಟಿಕ್‌ ಎಸಿ ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮತ್ತು ಮಡಿಸುವ ORVM ಗಳನ್ನು (ಔಟ್‌ಸೈಡ್‌ ರಿಯರ್‌ವ್ಯೂ ಮಿರನ್‌) ತರುತ್ತದೆ. ಹಿಂದಿನ ಸೀಟುಗಳಿಗೆ ಪವರ್ ವಿಂಡೋ ಸ್ವಿಚ್‌ಗಳನ್ನು ಸೆಂಟರ್ ಕನ್ಸೋಲ್‌ನಿಂದ ಡೋರ್ ಆರ್ಮ್‌ರೆಸ್ಟ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಸಿ3 ಹ್ಯಾಚ್‌ಬ್ಯಾಕ್‌ನೊಂದಿಗೆ ನೀಡಲಾಗುವ ಹೊಸ 1.2-ಲೀಟರ್ ನ್ಯಾಚರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ಅನ್ನು ಈಗ ಏರ್‌ಕ್ರಾಸ್ ಎಸ್‌ಯುವಿಯೊಂದಿಗೆ ನೀಡಲಾಗುತ್ತಿದೆ, ಅದರ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ.

ಈ ಆಪ್‌ಡೇಟ್‌ಗಳು ಹೆಚ್ಚು ಸ್ವಾಗತಾರ್ಹವಾಗಿಸುವುದರೊಂದಿಗೆ ಸಿ3 ಅನ್ನು ಹೆಚ್ಚು ಆಕರ್ಷಕವಾಗಿಸಿದರೂ, ಪುಶ್ ಬಟನ್ ಸ್ಟಾರ್ಟ್ ಮತ್ತು ಕ್ರೂಸ್ ಕಂಟ್ರೋಲ್‌ನೊಂದಿಗೆ ಕೀಲೆಸ್ ಎಂಟ್ರಿಯಂತಹ ಫೀಚರ್‌ಗಳನ್ನು ಇದರಲ್ಲಿ ಇನ್ನೂ ಲಭ್ಯವಿಲ್ಲ.

ಇದನ್ನೂ ಓದಿ: ಹಲವು ಹೊಸ ಫೀಚರ್‌ಗಳೊಂದಿಗೆ Citroen C3 ಆಟೋಮ್ಯಾಟಿಕ್‌ ವೇರಿಯೆಂಟ್‌ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?

ಇತರ ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

ಸಿಟ್ರೊಯೆನ್ ಏರ್‌ಕ್ರಾಸ್ ಎಸ್‌ಯುವಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಹಗಲು/ರಾತ್ರಿ IRVM ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟಿನಂತಹ ಪ್ರಮುಖ ಫೀಚರ್‌ಗಳನ್ನು ನೀಡುವುದನ್ನು ಮುಂದುವರೆಸಿದೆ. .

ಸುರಕ್ಷತೆಯ ವಿಷಯದಲ್ಲಿ, ಇದು ಈಗ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬರುತ್ತದೆ.

ಪವರ್‌ಟ್ರೈನ್‌ ಆಯ್ಕೆಗಳು

ಪವರ್‌ಟ್ರೇನ್ ಆಯ್ಕೆಗಳನ್ನು ಸಹ ಆಪ್‌ಡೇಟ್‌ ಮಾಡಲಾಗಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್‌ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್‌ ಎಂಜಿನ್‌

1.2-ಲೀಟರ್‌ ಟರ್ಬೋ ಪೆಟ್ರೋಲ್‌

ಪವರ್‌

82 ಪಿಎಸ್‌

110 ಪಿಎಸ್‌

ಟಾರ್ಕ್‌

115 ಎನ್‌ಎಮ್‌

205 ಎನ್‌ಎಮ್‌ ವರೆಗೆ*

ಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುವಲ್‌

6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್

*ಏರ್‌ಕ್ರಾಸ್‌ನ ಟರ್ಬೊ ವೇರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್‌ನೊಂದಿಗೆ 190 ಎನ್‌ಎಮ್‌ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 205 ಎನ್‌ಎಮ್‌ ಅನ್ನು ಉತ್ಪಾದಿಸುತ್ತವೆ.

ಪ್ರತಿಸ್ಪರ್ಧಿಗಳು

ಸಿಟ್ರೊಯೆನ್ ಏರ್‌ಕ್ರಾಸ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಟಾಟಾ ಕರ್ವ್‌ ಮತ್ತು ಸಿಟ್ರೊಯೆನ್ ಬಸಾಲ್ಟ್‌ ಎರಡನ್ನೂ ಏರ್‌ಕ್ರಾಸ್‌ಗೆ ಸೊಗಸಾದ ಮತ್ತು ಎಸ್‌ಯುವಿ-ಕೂಪ್ ಪರ್ಯಾಯವೆಂದು ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : C3 ಏರ್‌ಕ್ರಾಸ್‌ ಆನ್‌ರೋಡ್‌ ಬೆಲೆ

d
ಅವರಿಂದ ಪ್ರಕಟಿಸಲಾಗಿದೆ

dipan

  • 40 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Citroen Aircross

Read Full News

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ