ಹಲವು ಹೊಸ ಫೀಚರ್‌ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊನ್ ಸಿ3 ಗಾಗಿ dipan ಮೂಲಕ ಸೆಪ್ಟೆಂಬರ್ 30, 2024 03:51 pm ರಂದು ಪ್ರಕಟಿಸಲಾಗಿದೆ
- 142 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್‌ಗಳೊಂದಿಗೆ ಆಪ್‌ಡೇಟ್ ಮಾಡಲಾಗಿದೆ
-
ಸಿಟ್ರೊಯೆನ್ ಸಿ3 ಅನ್ನು ಟಾಪ್-ಮೊಡೆಲ್ ಶೈನ್ ಟರ್ಬೊ ವೇರಿಯೆಂಟ್‌ನಲ್ಲಿ ಮಾತ್ರ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ.
-
ಭಾರತದಾದ್ಯಂತ ಆಟೋಮ್ಯಾಟಿಕ್ ವೇರಿಯೆಂಟ್‌ನ ಎಕ್ಸ್ ಶೋರೂಂ ಬೆಲೆಗಳು 10 ಲಕ್ಷ ರೂ.ನಿಂದ 10.27 ಲಕ್ಷ ರೂ.ವರೆಗೆ ಇದೆ.
-
ಇದು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 15-ಇಂಚಿನ ಅಲಾಯ್ ವೀಲ್‌ಗಳು ಮತ್ತು ವಾಷರ್‌ನೊಂದಿಗೆ ಹಿಂಭಾಗದ ವೈಪರ್ ಅನ್ನು ಪಡೆಯುತ್ತದೆ.
-
ಫೀಚರ್‌ಗಳಲ್ಲಿ 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಟೋ ಎಸಿ ಸೇರಿವೆ.
-
ಸುರಕ್ಷತಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.
ಸಿಟ್ರೊಯೆನ್ C3 ಅನ್ನು ಇತ್ತೀಚೆಗೆ ಸಂಪೂರ್ಣವಾಗಿ ಲೋಡ್ ಮಾಡಲಾದ 'ಶೈನ್' ವೇರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಪ್‌ಡೇಟ್ ಮಾಡಲಾಗಿದೆ ಮತ್ತು ಇದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಹೊಸ ಆಪ್‌ಡೇಟ್ 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳಂತಹ ಫೀಚರ್‌ಗಳನ್ನು ಸೇರಿಸಿದೆ. ಆದರೆ, ಇಲ್ಲಿಯವರೆಗೆ ಆಟೋಮ್ಯಾಟಿಕ್ ಟ್ರಿಮ್‌ಗಳ ಬೆಲೆಗಳನ್ನು ಅನಾವರಣಗೊಳಿಸಲಾಗಿಲ್ಲ. ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಬೆಲೆಗಳನ್ನು ನಾವು ನೋಡೋಣ:
ವೇರಿಯೆಂಟ್ |
ಬೆಲೆ |
ಶೈನ್ ಟರ್ಬೋ ಆಟೋಮ್ಯಾಟಿಕ್ |
10 ಲಕ್ಷ ರೂ. |
ಶೈನ್ ಟರ್ಬೋ ಆಟೋಮ್ಯಾಟಿಕ್ ಡ್ಯುಯಲ್ ಟೋನ್ |
10.25 ಲಕ್ಷ ರೂ. |
ಶೈನ್ ಟರ್ಬೋ ಆಟೋಮ್ಯಾಟಿಕ್ ಡ್ಯುಯಲ್ ಟೋನ್ ವೈಬ್ ಪ್ಯಾಕ್* |
10.27 ಲಕ್ಷ ರೂ. |
ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳು
*ವೈಬ್ ಪ್ಯಾಕ್ ಫಾಗ್ ಲ್ಯಾಂಪ್‌ಗಳು ಮತ್ತು ರಿಯರ್ ರಿಫ್ಲೆಕ್ಟರ್‌ಗಳಲ್ಲಿ ಪೋಲಾರ್ ವೈಟ್, ಝೆಸ್ಟಿ ಆರೆಂಜ್, ಅಥವಾ ಪ್ಲಾಟಿನಂ ಗ್ರೇ ಬಣ್ಣದ ಸರೌಂಡ್‌ಗಳ ಆಯ್ಕೆಯನ್ನು ಹೊಂದಿದೆ. ಇದು ಬಾಗಿಲಿನ ಮೇಲೆ ಸೈಡ್ ಬಾಡಿ ಮೋಲ್ಡಿಂಗ್ ಅನ್ನು ಸಹ ಒಳಗೊಂಡಿದೆ. ಈ ಬಣ್ಣದ ಟ್ರಿಮ್‌ಗಳನ್ನು ಕ್ರೋಮ್ ಅಂಶಗಳೊಂದಿಗೆ ಬದಲಾಯಿಸುವ ಎಲಿಗನ್ಸ್ ಪ್ಯಾಕ್ ಕೂಡ ಇದೆ.
ಭಾರತದಾದ್ಯಂತ ಸಿ3ನ ಇತರ ವೇರಿಯೆಂಟ್‌ಗಳ ಎಕ್ಸ್-ಶೋರೂಮ್ ಬೆಲೆಗಳು (ಆಟೋಮ್ಯಾಟಿಕ್ ವೇರಿಯೆಂಟ್‌ಗಳನ್ನು ಒಳಗೊಂಡಂತೆ) 6.16 ಲಕ್ಷ ರೂ.ನಿಂದ 10.27 ಲಕ್ಷ ರೂ.ವರೆಗೆ ಇದೆ.
ಸಿಟ್ರೊಯೆನ್ C3 ಹ್ಯಾಚ್‌ಬ್ಯಾಕ್ ಆಫರ್‌ನಲ್ಲಿರುವ ಎಲ್ಲವನ್ನೂ ನಾವು ಈಗ ತಿಳಿಯೋಣ
ಇದನ್ನೂ ಓದಿ: Tata Nexon ಸಿಎನ್‌ಜಿ vs ಮಾರುತಿ Brezza CNG: ಸ್ಪೆಸಿಫಿಕೇಷನ್‌ಗಳ ಹೋಲಿಕೆ ಇಲ್ಲಿದೆ
ಸಿಟ್ರೊಯೆನ್ C3: ಒಂದು ನೋಟ
ಸಿಟ್ರೊಯೆನ್ ಸಿ3 ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಹೊರಗಿನ ರಿಯರ್‌ವ್ಯೂ ಮಿರರ್‌ಗಳು (ORVM ಗಳು) ಬಟನ್‌ನಲ್ಲಿ ಎಡ್ಜಸ್ಟ್ ಆಗಬಲ್ಲದು ಮತ್ತು ಮಡಚಬಲ್ಲವು ಮತ್ತು ಸೈಡ್ ಟರ್ನ್ ಇಂಡಿಕೇಟರ್‌ಗಳನ್ನು ಇದರಲ್ಲಿ ಹೊಂದಿದೆ. ಇದು ಹ್ಯಾಲೊಜೆನ್ ಟೈಲ್ ಲೈಟ್‌ಗಳನ್ನು ಮತ್ತು ವಾಷರ್‌ನೊಂದಿಗೆ ಹಿಂಭಾಗದ ವಿಂಡ್‌ಶೀಲ್ಡ್ ವೈಪರ್ ಅನ್ನು ಪಡೆಯುತ್ತದೆ.
ಒಳಭಾಗದಲ್ಲಿ, ಸಿ3 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇ ಮತ್ತು 10.2-ಇಂಚಿನ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ. ಇತರ ಫೀಚರ್‌ಗಳಲ್ಲಿ ಆಟೋಮ್ಯಾಟಿಕ್ ಎಸಿ, ರಿಮೋಟ್ ಲಾಕಿಂಗ್/ಅನ್‌ಲಾಕಿಂಗ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಸೇರಿವೆ. ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ.
ಸಿಟ್ರೊಯೆನ್ C3: ಪವರ್‌ಟ್ರೈನ್ ಆಯ್ಕೆಗಳು
ಸಿಟ್ರೊಯೆನ್ C3 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
82 ಪಿಎಸ್ |
110 ಪಿಎಸ್ |
ಟಾರ್ಕ್ |
115 ಎನ್ಎಂ |
205 ಎನ್ಎಂವರೆಗೆ* |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನುವಲ್ |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ ಆಟೋಮ್ಯಾಟಿಕ್ |
*ಸಿ3 ಟರ್ಬೊ ವೇರಿಯೆಂಟ್‌ಗಳು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ 190 ಎನ್‌ಎಮ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 205 ಎನ್‌ಎಮ್‌ಅನ್ನು ಉತ್ಪಾದಿಸುತ್ತವೆ.
ಪ್ರತಿಸ್ಪರ್ಧಿಗಳು
ಸಿಟ್ರೊಯೆನ್ C3 ಮಾರುತಿ ವ್ಯಾಗನ್ ಆರ್, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೊಗಳೊಂದಿಗೆ ಸ್ಪರ್ಧಿಸುತ್ತದೆ. ಅದರ ಬೆಲೆ ಮತ್ತು ಆಯಾಮಗಳನ್ನು ಗಮನಿಸುವಾಗ, ಇದು ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: Citroen C3 ಆನ್‌ರೋಡ್ ಬೆಲೆ
0 out of 0 found this helpful