6-ಸೀಟರ್ ವೇರಿಯೆಂಟ್‌ಗಳು ಮತ್ತು ಇನ್ನೂ ಅನೇಕ ಫೀಚರ್‌ಗಳನ್ನು ಪಡೆದ 2024ರ Mahindra XUV7000, ಬೆಲೆಗಳು 13.99 ಲಕ್ಷ ರೂ.ನಿಂದ ಪ್ರಾರಂಭ

modified on ಜನವರಿ 17, 2024 11:59 am by rohit for ಮಹೀಂದ್ರ ಎಕ್ಸ್‌ಯುವಿ 700

  • 115 Views
  • ಕಾಮೆಂಟ್‌ ಅನ್ನು ಬರೆಯಿರಿ

XUV700 ತನ್ನ ಟಾಪ್-ಸ್ಪೆಕ್ AX7 ಮತ್ತು AX7L ವೇರಿಯೆಂಟ್‌ಗಳು ಕೊನೆಗೂ  ವೆಂಟಿಲೇಟಡ್ ಮುಂಭಾಗದ ಸೀಟುಗಳು ಮತ್ತು ಹೊಸ ಬ್ಲ್ಯಾಕ್‌ಡ್-ಔಟ್ ಲುಕ್ ಪಡೆದಿವೆ

2024 Mahindra XUV700

  •  ಮಹೀಂದ್ರಾ XUV700 ಲೈನ್‌ ಅಪ್ ಪರಿಷ್ಕೃತ ದರ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ 2024 ಕ್ಕೆ ಅಪ್‌ಡೇಟ್ ಆಗಿದೆ.
  •  ಈ SUV ತನ್ನ ಟಾಪ್ ಸ್ಪೆಕ್ ಟ್ರಿಮ್‌ಗಳಿಗೆ (AX7 ಮತ್ತು AX7L)  ಈಗ ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ORVMಗಳಿಗೆ ಮೆಮೊರಿ ಫಂಕ್ಷನ್ ಪಡೆದಿವೆ.
  •  ಅಲ್ಲದೇ ಇದನ್ನು ಹೊಸ ನಪೋಲಿ ಬ್ಲ್ಯಾಕ್ ಪೈಂಟ್‌ನಲ್ಲೂ ಪಡೆಯಬಹುದು; ಟಾಪ್‌ ವೇರಿಯೆಂಟ್‌ಗಳು ಡ್ಯುಯಲ್-ಟೋನ್ ಆಯ್ಕೆಯಲ್ಲೂ ಲಭ್ಯ.
  •  ಅಲ್ಲದೇ ಮಹೀಂದ್ರಾ ಈ SUVಯ ಸಂಪರ್ಕಿತ ಕಾರ್ ಟೆಕ್ ಸೂಟ್‌ಗೆ 13 ಹೊಸ ಕಾರ್ಯಗಳನ್ನು ಪರಿಚಯಿಸುವ ಮೂಲಕ ಇದನ್ನು ಅಪ್‌ಡೇಟ್ ಮಾಡಿದೆ.
  •  ಪವರ್‌ಟ್ರೇನ್ ಆಯ್ಕೆಗಳು ಬದಲಾಗಿಲ್ಲ; ಪೆಟ್ರೋಲ್ ಮತ್ತು ಡೀಸೆಲ್ ಯೂನಿಟ್‌ಗಳೆರಡರಲ್ಲೂ ಲಭ್ಯವಿದ್ದು ಡೀಸೆಲ್ ಯೂನಿಟ್‌ಗೆ AWD ಆಯ್ಕೆಯನ್ನೂ ಪಡೆದಿದೆ.
  •  2024 XUV700 ಗೆ ಬುಕಿಂಗ್‌ಗಳು ತೆರೆದುಕೊಂಡಿದ್ದು, ಯೂನಿಟ್‌ಗಳು ಜನವರಿ 25 ರಿಂದ ಡೀಲರ್‌ಶಿಪ್‌ಗಳಿಗೆ ತಲುಪಲಾರಂಭಿಸುತ್ತವೆ.

 ವರ್ಷಾರಂಭದಲ್ಲಿ ನಾವು ಸಾಮಾನ್ಯವಾಗಿ ನೋಡುವಂತೆ, ಕಾರುತಯಾರಕರು ತಮ್ಮ ಕೆಲವು ಕಾರುಗಳಿಗೆ ಸರಿಯಾದ ನವೀಕರಣವನ್ನು ಪರಿಚಯಿಸುವ ಮೊದಲೇ ಮಾಡೆಲ್ ವರ್ಷ (MY) ಅಪ್‌ಡೇಟ್‌ಗಳನ್ನು ಬಹಿರಂಗಪಡಿಸುತ್ತಾರೆ. ಮಹೀಂದ್ರಾ XUV700 ಇದೇ ರೀತಿಯ ಪರಿಷ್ಕರಣೆಗೆ ಒಳಗಾಗಿದ್ದು, ಇದರಲ್ಲಿ ಕೆಲವು ಹೊಸ ವೇರಿಯೆಂಟ್‌ಗಳು ಫೀಚರ್‌ಗಳು ಮಾತ್ರವಲ್ಲದೇ ನವೀನ ಪೈಂಟ್ ಆಯ್ಕೆಯೂ ಒಳಗೊಂಡಿದೆ.

 

ಬೆಲೆ ಪರಿಶೀಲನೆ

 ಮಹೀಂದ್ರಾ 2024 XUV700ಗೆ ಬೆಲೆ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಪ್ರತಿ ವೇರಿಯೆಂಟ್‌ನ ಆರಂಭಿಕ ಬೆಲೆಯನ್ನು ಇಲ್ಲಿ ನೀಡಲಾಗಿದೆ:

ಹೊಸ ವೇರಿಯೆಂಟ್

ಎಕ್ಸ್-ಶೋರೂಂ ಬೆಲೆ

MX

ರೂ 13.99 ಲಕ್ಷ

AX3

ರೂ 16.39 ಲಕ್ಷ

AX5

ರೂ 17.69 ಲಕ್ಷ

AX7

ರೂ 21.29 ಲಕ್ಷ

AX7L

ರೂ 23.99 ಲಕ್ಷ

 ಅಪ್‌ಡೇಟ್ ಮಾಡಲಾದ ಲೈನ್‌ಅಪ್‌ ಅನ್ನು ಪರಿಚಯಿಸುವ ಮೂಲಕ, ಈ SUV ಯ ಬೆಲೆಯು ರೂ 4,000 ದಷ್ಟು ಅಗ್ಗವಾಗಿದೆ. MY2024 XUV700ಗೆ ಈಗ ಬುಕಿಂಗ್‌ಗಳು ತೆರೆದುಕೊಂಡಿವೆ ಆದರೆ ಇದು ಜನವರಿ 25ರಿಂದಷ್ಟೇ ಡೀಲರ್‌ಶಿಪ್‌ಗಳನ್ನು ತಲುಪಲಿದೆ.

 

2024 XUV700 ಬದಲಾವಣೆಗಳ ವಿವರ

2024 Mahindra XUV700 6-seater variant

 ಮೊತ್ತಮೊದಲನೆಯದಾಗಿ, XUV700 ಮಧ್ಯಮ ಗಾತ್ರದ SUV ಅಂತಿಮವಾಗಿ ಮಧ್ಯದ ಸಾಲಿನಲ್ಲಿ 6-ಸೀಟರ್ ಕಾನ್ಫಿಗರೇಶನ್ ಜೊತೆಗೆ ಕ್ಯಾಪ್ಟನ್ ಸೀಟುಗಳ ಆಯ್ಕೆಯನ್ನು ಪಡೆಯುತ್ತಿದೆ. ಇದು ಫೀಚರ್-ಲೋಡಡ್ AX7 ಮತ್ತು AX7L ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದೆ. ಈ ಕ್ಯಾಬಿನ್ ಲೇಔಟ್ ಆಯ್ಕೆಯನ್ನು XUV700ಯ ಪ್ರತಿಸ್ಪರ್ಧಿಗಳು ಬಿಡುಗಡೆಯಾದಂದಿನಿಂದಲೇ ನೀಡುತ್ತಿದ್ದವು ಆದರೆ ಮಹೀಂದ್ರಾದಲ್ಲಿ ಮಾತ್ರ ದೀರ್ಘ ಸಮಯದ ತನಕ ಬಾಕಿ ಉಳಿದಿತ್ತು.

 ಮಹೀಂದ್ರಾ SUVಯ ಟಾಪ್-ಶ್ರೇಣಿಯ AX7L ವೇರಿಯೆಂಟ್‌ನಲ್ಲಿ ವೆಂಟಿಲೇಟಡ್ ಮುಂಭಾಗದ ಸೀಟುಗಳನ್ನು ಒದಗಿಸಿರುವುದು ಪ್ರಮುಖ ಮತ್ತು ಫ್ರಶಂಸನೀಯ ಫೀಚರ್ ಅಪ್‌ಡೇಟ್‌ಗಳಲ್ಲಿ ಒಂದು. ಇದರೊಂದಿಗೆ, XUV700 ನ ಸಂಪರ್ಕಿತ ಕಾರು ತಂತ್ರಜ್ಞಾನವು  ಸಾಫ್ಟ್‌ವೇರ್ ಅಪ್‌ಡೇಟ್‌ನಿಂದಾಗಿ ಹೆಚ್ಚುವರಿ ಫೀಚರ್‌ಗಳನ್ನು ಇನ್ನಷ್ಟು ವೈಭವಯುತವಾಗಿಸಿದೆ. ಕೊನೆಯದಾಗಿ, ಟಾಪ್-ಸ್ಪೆಕ್ ವೇರಿಯೆಂಟ್‌ನಲ್ಲಿ ಡ್ರೈವರ್‌ ಸೀಟ್‌ನ ಮೆಮೊರಿ ಫಂಕ್ಷನ್ ORVMಗಳ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶ ಪಡೆದಿದ್ದು, ನಿಮ್ಮ ಕಾರನ್ನು ಇತರರಿಗೆ ನೀಡುವಾಗ ಈ ಫೀಚರ್ ಪ್ರಯೋಜನಕಾರಿಯಾಗಿದೆ.

2024 Mahindra XUV700 Napoli Black paint option

 XUV700 ಈಗ ನೆಪೋಲಿ ಬ್ಲ್ಯಾಕ್ ಕಲರ್‌ನಲ್ಲೂ ಲಭ್ಯವಿದೆ. ಈ ಪೈಂಟ್ ಆಯ್ಕೆಯು ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದರೂ, ಟಾಪ್ ಸ್ಪೆಕ್ AX7 ಮತ್ತು AX7L ವೇರಿಯೆಂಟ್‌ಗಳಿಗೆ ಈ ಶೇಡ್ ಅನ್ನು ಆಯ್ಕೆ ಮಾಡುವುದರಿಂದ ಗ್ರಿಲ್ ಮತ್ತು ಅಲಾಯ್ ವ್ಹೀಲ್‌ಗಳಿಗೂ ಸಂಪೂರ್ಣ ಬ್ಲ್ಯಾಕ್ ಫಿನಿಷಿಂಗ್ ದೊರೆತು SUVಗೆ ಆಕರ್ಷಕ ನೋಟವನ್ನು ನೀಡುತ್ತದೆ. ಮೇಲಾಗಿ, ಈ ವೇರಿಯೆಂಟ್‌ಗಳು AC ವೆಂಟ್‌ಗಳು ಮತ್ತು ಸೆಂಟ್ರಲ್ ಕನ್ಸೋಲ್ ಸುತ್ತಲೂ ಡಾರ್ಕ್ ಕ್ರೋಮ್ ಫಿನಿಷ್ ಅನ್ನೂ ಪಡೆದಿವೆ. ಬ್ಲ್ಯಾಕ್ ಹ್ಯೂ ನಿಮ್ಮ ಆದ್ಯತೆ ಅಲ್ಲದಿದ್ದರೆ, ಇನ್ನೊಂದು ಪರ್ಯಾಯ ಇದೆ, ಟಾಪ್ ಎಂಡ್ ವೇರಿಯೆಂಟ್‌ಗಳು ಈಗ ಸಂಪೂರ್ಣ ಬ್ಲ್ಯಾಕ್ ರೂಫ್‌ನೊಂದಿಗೆ ಡ್ಯುಯಲ್-ಟೋನ್ ಕಲರ್ ಆಯ್ಕೆಯನ್ನೂ ಹೊಂದಿದ್ದು, ಸ್ಪೋರ್ಟಿಯರ್ ಲುಕ್ ನೀಡುತ್ತದೆ. 

 

ಇಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ

 ಮಹೀಂದ್ರಾ ಬೊನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. XUV700 ಅನ್ನು ಮೊದಲಿನಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ ಆಯ್ಕೆ ಎರಡರಲ್ಲೂ ಮಾರಾಟ ಮಾಡಲಾಗುತ್ತದೆ. ವಿವರಗಳು ಈ ಕೆಳಗಿನಂತಿವೆ:

ನಿರ್ದಿಷ್ಟತೆ

2-ಲೀಟರ್ ಟರ್ಬೋ-ಪೆಟ್ರೋಲ್

2.2-ಲೀಟರ್ ಡೀಸೆಲ್

ಪವರ್

200 PS

Up to 185 PS

ಟಾರ್ಕ್

380 Nm

450 Nm

ಟ್ರಾನ್ಸ್‌ಮಿಷನ್

6-ಸ್ಪೀಡ್ MT, 6-ಸ್ಪೀಡ್ AT

6-ಸ್ಪೀಡ್ MT, 6-ಸ್ಪೀಡ್ AT

 ಟಾಪ್-ಸ್ಪೆಕ್ AX7 ಮತ್ತು AX7L ವೇರಿಯೆಂಟ್‌ಗಳು ಐಚ್ಛಿಕ ಆಲ್-ವ್ಹೀಲ್-ಡ್ರೈವ್ (AWD) ಸಿಸ್ಟಮ್‌ನೊಂದಿಗೂ ಲಭ್ಯವಿದೆ, ಆದರೆ ಇದು ಡೀಸೆಲ್-ಆಟೋಮ್ಯಾಟಿಕ್ ಯೂನಿಟ್‌ಗೆ ಮಾತ್ರ ಸೀಮಿತ.

 ಇದನ್ನೂ ಪರಿಶೀಲಿಸಿ: 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿವೆ ಈ 5 ಮಹೀಂದ್ರಾ SUVಗಳು

 

ಪ್ರತಿಸ್ಪರ್ಧಿಗಳು ಯಾರು?

 ಮಹೀಂದ್ರಾ XUV700 6- ಮತ್ತು 7-ಸೀಟರ್ ವೇರಿಯೆಂಟ್‌ಗಳು ಹ್ಯುಂಡೈ ಅಲ್ಕಾಝಾರ್, ಟಾಟಾ ಸಫಾರಿ ಮತ್ತು MG ಹೆಕ್ಟರ್ ಪ್ಲಸ್‌ಗೆ ಪೈಪೋಟಿ ನೀಡುತ್ತದೆ.ಇದರ 5-ಸೀಟು ಆವೃತ್ತಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮತ್ತು ಟಾಟಾ ಹ್ಯಾರಿಯರ್‌ನ ಟಾಪ್ ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧೆ ನೀಡುತ್ತದೆ.

 ಎಲ್ಲಾ ಬೆಲೆಗಳು, ದೆಹಲಿ ಎಕ್ಸ್‌ಶೋರೂಂ ಪ್ರಕಾರ

 ಇನ್ನಷ್ಟು ಓದಿ : XUV700 ಆನ್‌ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಎಕ್ಸ್‌ಯುವಿ 700

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience