Citroen Basalt ಇತ್ತೀಚಿನ ಇಂಟೀರಿಯರ್ ಟೀಸರ್ ಔಟ್, C3 Aircross ನಲ್ಲಿರುವ ಡ್ಯುಯಲ್ ಡಿಸ್‌ಪ್ಲೇಗಳು ಇದರಲ್ಲಿಯು ಲಭ್ಯ
ಸಿಟ್ರೊಯೆನ್ ಬಸಾಲ್ಟ್‌ನ ಹೊಸ ಟೀಸರ್ ಡ್ಯುಯಲ್ ಡಿಸ್‌ಪ್ಲೇಗಳು ಮತ್ತು AC ವೆಂಟ್ ಗಳೊಂದಿಗೆ C3 ಏರ್‌ಕ್ರಾಸ್‌ಗೆ ಹೋಲುವ ಒಳಭಾಗವನ್ನು ತೋರಿಸುತ್ತದೆ
- ಸಿಟ್ರೊಯೆನ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಐದನೇ ಕೊಡುಗೆಯಾಗಿ ಬಸಾಲ್ಟ್ SUV-ಕೂಪ್ ಅನ್ನು ಹೊರತರಲಿದೆ.
- ಹೊಸ ಟೀಸರ್ ಸಿಟ್ರೊಯೆನ್ ಬಸಾಲ್ಟ್‌ನ ಕೆಲವು ಒಳಭಾಗದ ಫೀಚರ್ ಗಳನ್ನು ನಮಗೆ ತೋರಿಸುತ್ತದೆ.
- ಇದು ಕೂಪ್ ತರಹದ ಸ್ಲೋಪಿಂಗ್ ರೂಫ್‌ಲೈನ್, ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ರಾಪ್ ಅರೌಂಡ್ LED ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.
- ಒಳಭಾಗದಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ C3 ಏರ್‌ಕ್ರಾಸ್‌ನಲ್ಲಿರುವ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ.
- ಇದು ಆಟೋಮ್ಯಾಟಿಕ್ AC ಅನ್ನು ಕೂಡ ಪಡೆಯುತ್ತದೆ, ಇದನ್ನು C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ ಎರಡರಲ್ಲೂ ನೀಡಲಾಗಿಲ್ಲ.
- ಇದರ ಸುರಕ್ಷತಾ ಕಿಟ್ ನಲ್ಲಿ 6 ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುವ ಸಾಧ್ಯತೆಯಿದೆ.
- ಬಸಾಲ್ಟ್, C3 ಏರ್‌ಕ್ರಾಸ್ ಮತ್ತು C3 ಯಲ್ಲಿರುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹುದು (110 PS/205 Nm ವರೆಗೆ).
- ಬಸಾಲ್ಟ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಬೆಲೆಯು ರೂ 10 ಲಕ್ಷದಿಂದ ಶುರುವಾಗುತ್ತವೆ (ಎಕ್ಸ್ ಶೋರೂಂ).
ಟಾಟಾದ ಪ್ರತಿಸ್ಪರ್ಧಿ SUV ಯಾಗಿರುವ ಕರ್ವ್ ನ ಹೊರಭಾಗದ ಡಿಸೈನ್ ಅನ್ನು ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ ಸಿಟ್ರೊಯೆನ್ ತನ್ನ ಬಸಾಲ್ಟ್‌ನ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ತೋರಿಸುವ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಟೀಸರ್ ಸಿಟ್ರೊಯೆನ್ C3 ಏರ್‌ಕ್ರಾಸ್ SUV ಯನ್ನು ಹೋಲುವ ಕ್ಯಾಬಿನ್ ಅನ್ನು ಬಹಿರಂಗಪಡಿಸುತ್ತದೆ ಮತ್ತು ಅದರ ಜೊತೆಗೆ ಕೆಲವು ಪ್ರೀಮಿಯಂ ಫೀಚರ್ ಗಳನ್ನು ಕೂಡ ದೃಢೀಕರಿಸುತ್ತದೆ.
ಇತ್ತೀಚಿನ ಟೀಸರ್ ವೀಡಿಯೊದಲ್ಲಿ ನಾವು ನೋಡಿರುವ ಎಲ್ಲಾ ಫೀಚರ್ ಗಳ ವಿವರ ಇಲ್ಲಿದೆ:
ಟೀಸರ್‌ನಲ್ಲಿ ಏನೇನಿದೆ
ಹೊಸ ಟೀಸರ್ ನ ವಿಶೇಷತೆಯೆಂದರೆ ಇದರಲ್ಲಿ ಒಳಭಾಗ ಮತ್ತು ಅದರ ಫೀಚರ್ ಗಳ ಒಂದು ಲುಕ್ ಅನ್ನು ನೀಡಲಾಗಿದೆ. ಟೀಸರ್‌ನಲ್ಲಿ, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಒಂದೇ ರೀತಿಯ ಸೆಂಟ್ರಲ್ AC ವೆಂಟ್‌ಗಳು ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ C3 ಏರ್‌ಕ್ರಾಸ್ ಅನ್ನು ಹೋಲುವ ಡ್ಯಾಶ್‌ಬೋರ್ಡ್ ಕಾಣುತ್ತದೆ.
ಇದರ ಜೊತೆಗೆ, ಈ ಟೀಸರ್‌ನಲ್ಲಿ ಆಟೋಮ್ಯಾಟಿಕ್ AC ಪ್ಯಾನೆಲ್ ಅನ್ನು ಕೂಡ ತೋರಿಸಲಾಗಿದೆ, ಇದು C3 ಏರ್‌ಕ್ರಾಸ್‌ನಲ್ಲಿ ಲಭ್ಯವಿಲ್ಲ.
ಇದಲ್ಲದೆ, ಇತ್ತೀಚಿನ ಟೀಸರ್‌ನಲ್ಲಿ ಹೊರಭಾಗದ ಡಿಸೈನ್ ಅನ್ನು ವಿಶೇಷವಾಗಿ ತೋರಿಸಲಾಗಿದ್ದು, ಅದು SUV-ಕೂಪ್ ಬಾಡಿ ಶೈಲಿಯನ್ನು ಸ್ಲೋಪಿಂಗ್ ರೂಫ್‌ಲೈನ್‌ನೊಂದಿಗೆ ಎತ್ತಿ ತೋರಿಸುತ್ತದೆ. V- ಆಕಾರದ LED DRL ಮತ್ತು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಸಿಟ್ರೊಯೆನ್ C3 ಏರ್‌ಕ್ರಾಸ್ SUV ಮತ್ತು C3 ಹ್ಯಾಚ್‌ಬ್ಯಾಕ್ ಅನ್ನು ಹೋಲುವ ಮುಂಭಾಗವನ್ನು ಕೂಡ ನೋಡಬಹುದು. ಸಿಟ್ರೊಯೆನ್ ಲೋಗೋ ಮತ್ತು 'ಬಸಾಲ್ಟ್' ಮಾನಿಕರ್ ಅನ್ನು ತೋರಿಸುವ ರಾಪ್ ಅರೌಂಡ್ LED ಟೈಲ್ ಲೈಟ್‌ಗಳು ಮತ್ತು ಮೇಲ್ಮಟ್ಟದಲ್ಲಿರುವ ಬೂಟ್ ಲೀಡ್ ಅನ್ನು ಕೂಡ ಬಸಾಲ್ಟ್ ಪಡೆಯಲಿದೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತೆ
ಈಗಾಗಲೇ ಇರುವ ಅದೇ ಟಚ್‌ಸ್ಕ್ರೀನ್ ಮತ್ತು ಡ್ರೈವರ್ ಡಿಸ್‌ಪ್ಲೇ ಜೊತೆಗೆ, ಬಸಾಲ್ಟ್ ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಕೂಡ ಪಡೆಯಬಹುದು.
ಸುರಕ್ಷತಾ ವಿಷಯದಲ್ಲಿ ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
C3 ಏರ್‌ಕ್ರಾಸ್ ಮತ್ತು C3 ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/205 Nm ವರೆಗೆ) ಅನ್ನು ಸಿಟ್ರೊಯೆನ್ ಬಸಾಲ್ಟ್ ನಲ್ಲಿ ಕೂಡ ಬಳಸುವ ಸಾಧ್ಯತೆಯಿದೆ. ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ (AT) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಲಾಂಚ್ ದಿನಾಂಕ ಮತ್ತು ಪ್ರತಿಸ್ಪರ್ಧಿಗಳು
ಸಿಟ್ರೊಯೆನ್ ಬಸಾಲ್ಟ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಬೆಲೆಯು ರೂ 10 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋ ರೂಂ). ಇದು ಇತ್ತೀಚಿಗೆ ಅನಾವರಣಗೊಂಡಿರುವ ಟಾಟಾ ಕರ್ವ್ ನೊಂದಿಗೆ ನೇರವಾಗಿ ಸ್ಪರ್ಧಿಸಲಿದೆ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು MG ಆಸ್ಟರ್ ನಂತಹ SUV ಗಳಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ.
ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ : ಸಿಟ್ರೊಯೆನ್ C3 ಏರ್ಕ್ರಾಸ್ ಆನ್ ರೋಡ್ ಬೆಲೆ