Login or Register ಅತ್ಯುತ್ತಮ CarDekho experience ಗೆ
Login

ಹೊಸ ಆಪ್‌ಡೇಟ್‌ನೊಂದಿಗೆ ಬಿಡುಗಡೆಯಾಗಿದೆ Citroen C3 : ಯಾವುದು ಆ ಹೊಸ ಫೀಚರ್‌ಗಳು ?

ಸಿಟ್ರೊನ್ ಸಿ3 ಗಾಗಿ dipan ಮೂಲಕ ಆಗಸ್ಟ್‌ 19, 2024 04:11 pm ರಂದು ಪ್ರಕಟಿಸಲಾಗಿದೆ

ಈ ಅಪ್‌ಡೇಟ್‌ನೊಂದಿಗೆ, C3 ಹ್ಯಾಚ್‌ಬ್ಯಾಕ್‌ನ ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ ಆಗಿದೆ

  • ಸಿಟ್ರೋಯೆನ್‌ ಸಿ3 ಟಾಪ್-ಸ್ಪೆಕ್ ಶೈನ್ ಟರ್ಬೊ ಆವೃತ್ತಿಯಲ್ಲಿ ಹೊಸ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ.
  • ನವೀಕರಿಸಿದ ಫೀಚರ್‌ಗಳ ಪಟ್ಟಿಯು ಎಲ್ಇಡಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, 7-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.
  • 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳಂತಹ ಫೀಚರ್‌ಗಳು ಆಫರ್‌ನಲ್ಲಿ ಮುಂದುವರಿಯುತ್ತವೆ.
  • ಆಟೋಮ್ಯಾಟಿಕ್‌ ಆವೃತ್ತಿಗಳ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ.

ಸಿಟ್ರೊಯೆನ್‌ ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿಟ್ರೊಯೆನ್‌ ಸಿ3 ಏರ್‌ಕ್ರಾಸ್‌ನ ಆಪ್‌ಡೇಟ್‌ ಮಾಡಲಾದ ಆವೃತ್ತಿಗಳನ್ನು ಸಿಟ್ರೊಯೆನ್ ಬಸಾಲ್ಟ್ ಅನಾವರಣದ ಸಮಯದಲ್ಲಿ ಪ್ರದರ್ಶಿಸಲಾಯಿತು. ಸಿ3 ಹ್ಯಾಚ್‌ಬ್ಯಾಕ್ ಅನ್ನು ಈಗ ಭಾರತದಲ್ಲಿ ಹೊಸ ಫೀಚರ್‌ಗಳು ಮತ್ತು ಪರಿಷ್ಕೃತ ಬೆಲೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ, ಸಿಟ್ರೊಯೆನ್ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಹ್ಯಾಚ್‌ಬ್ಯಾಕ್ ಅನ್ನು ಪರಿಚಯಿಸಿದೆ, ಆದರೆ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಹಾಗೆಯೇ, ನವೀಕರಿಸಿದ ಫೀಚರ್‌ಗಳೊಂದಿಗೆ ಹೊಸ ಆವೃತ್ತಿಗಳ ಬೆಲೆಗಳು ಈ ಕೆಳಗಿನಂತಿವೆ:

ವೇರಿಯೆಂಟ್‌

ಹೊಸ ಬೆಲೆ

ಹಳೆಯ ಬೆಲೆ

ಬೆಲೆ ವ್ಯತ್ಯಾಸ

ಲೈವ್‌

6.16 ಲಕ್ಷ ರೂ.

6.16 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಫೀಲ್‌

7.47 ಲಕ್ಷ ರೂ.

7.27 ಲಕ್ಷ ರೂ.

+ 20,000 ರೂ.

ಫೀಲ್‌ ಡ್ಯುಯಲ್‌ ಟೋನ್‌

ಸ್ಥಗಿತಗೊಂಡಿದೆ

7.42 ಲಕ್ಷ ರೂ.

N.A.

ಶೈನ್‌

8.10 ಲಕ್ಷ ರೂ.

7.80 ಲಕ್ಷ ರೂ.

+ 30,000 ರೂ.

ಶೈನ್‌ ಡ್ಯುಯಲ್‌ ಟೋನ್‌

8.25 ಲಕ್ಷ ರೂ.

7.95 ಲಕ್ಷ ರೂ.

+ 30,000 ರೂ.

ಫೀಲ್‌ ಟರ್ಬೋ

ಸ್ಥಗಿತಗೊಂಡಿದೆ

8.47 ಲಕ್ಷ ರೂ.

N.A.

ಶೈನ್‌ ಟರ್ಬೋ ಡ್ಯುಯಲ್‌ ಟೋನ್‌

9.30 ಲಕ್ಷ ರೂ.

9 ಲಕ್ಷ ರೂ.

+ 30,000 ರೂ.

ಶೈನ್‌ ಟರ್ಬೋ ಆಟೋಮ್ಯಾಟಿಕ್‌

ಇನ್ನೂ ಘೋಷಿಸಲಾಗಿಲ್ಲ

N.A.

N.A.

ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳು

ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಟಾಪ್-ಸ್ಪೆಕ್ ಶೈನ್ ಟರ್ಬೊ ಆವೃತ್ತಿಯ ಬೆಲೆಗಳನ್ನು ಇನ್ನೂ ಘೋಷಿಸಲಾಗಿಲ್ಲ. ಅಲ್ಲದೆ, ಫೀಲ್ ಟರ್ಬೊ ಆವೃತ್ತಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಈ ಸಿಟ್ರೊಯೆನ್ ಕಾರಿನಲ್ಲಿ ನೀಡಲಾಗುತ್ತಿರುವ ಹೊಸದನ್ನು ನಾವು ಈಗ ವಿವರವಾಗಿ ನೋಡೋಣ:

ಏನಿದೆ ಹೊಸತು ?

ಸಿಟ್ರೊಯೆನ್ ಸಿ3 ಹ್ಯಾಚ್‌ಬ್ಯಾಕ್ ಅದೇ ನ್ಯಾಚುರಲಿ ಎಸ್ಪಿರೇಟೆಡ್‌ 1.2-ಲೀಟರ್ ಎಂಜಿನ್‌ ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳಿಂದ ಚಾಲಿತವಾಗುವುದನ್ನು ಮುಂದುವರೆಸಿದೆ. ಹಾಗೆಯೇ, ಎರಡನೆಯದು ಈಗ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಹೆಚ್ಚುವರಿಯಾಗಿ ಒಪ್ಶನಲ್‌ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ.

ಆಪ್‌ಡೇಟ್‌ ಮಾಡಲಾದ C3 ಅದರ ಹೊರಭಾಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆಯುವುದಿಲ್ಲ, ಆದರೆ ಈಗ ಹಿಂದಿನ ಹ್ಯಾಲೊಜೆನ್ ಬದಲಿಗೆ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ. ಹೊರಗಿನ ರಿಯರ್‌ವ್ಯೂ ಮಿರರ್‌ಗಳು (ORVMs) ಈಗ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಸಜ್ಜುಗೊಂಡಿವೆ ಮತ್ತು ಈ ಹಿಂದೆ ಇಂಡಿಕೇಟರ್‌ಗಳು ಇದ್ದ ಮುಂಭಾಗದ ಫೆಂಡರ್‌ಗಳು ಈಗ ಹೊಸ ಸಿಟ್ರೊಯೆನ್ ಬ್ಯಾಡ್ಜ್ ಅನ್ನು ಹೊಂದಿವೆ. ಇದಲ್ಲದೆ, ORVM ಗಳನ್ನು ಈಗ ಬಟನ್‌ನಲ್ಲಿ ಎಡ್ಜಸ್ಟ್‌ ಮತ್ತು ಫೊಲ್ಡ್‌ ಮಾಡಬಹುದು. ವಾಷರ್‌ನೊಂದಿಗೆ ಹಿಂಭಾಗದ ವಿಂಡ್‌ಶೀಲ್ಡ್ ವೈಪರ್ ಅನ್ನು ಸೇರಿಸಲಾಗಿದೆ.

ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ವಿನ್ಯಾಸವು ಪರಿಚಿತವಾಗಿದೆ, ಆದರೆ ಸಿ3 ಈಗ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಹೊಂದಿದೆ, ಇದನ್ನು ಸಿ3 ಏರ್‌ಕ್ರಾಸ್ ಎಸ್‌ಯುವಿಯಿಂದ ಎರವಲು ಪಡೆಯಲಾಗಿದೆ. ಇದು ಆಟೋಮ್ಯಾಟಿಕ್‌ ಎಸಿಯೊಂದಿಗೆ ಬರುತ್ತದೆ ಮತ್ತು ಪವರ್ ವಿಂಡೋ ಸ್ವಿಚ್‌ಗಳನ್ನು ಸೆಂಟರ್ ಕನ್ಸೋಲ್‌ನಿಂದ ಡೋರ್ ಪ್ಯಾಡ್‌ಗಳಿಗೆ ಸ್ಥಳಾಂತರಿಸಲಾಗಿದೆ. ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಎರಡೂ ಸಿಟ್ರೊಯೆನ್ ಮೊಡೆಲ್‌ಗಳು ಈಗ ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ.

ಈ ಆಪ್‌ಡೇಟ್‌ಗಳು ಸ್ವಾಗತಾರ್ಹಕ್ಕಿಂತ ಹೆಚ್ಚು ಮತ್ತು C3 ಅನ್ನು ಹೆಚ್ಚು ಆಕರ್ಷಕವಾಗಿಸಿದರೂ, ಹಿಂದಿನ ಹೆಡ್‌ರೆಸ್ಟ್‌ಗಳು, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಇನ್ನೂ ಲಭ್ಯವಿರುವುದಿಲ್ಲ.

ಇದನ್ನೂ ಓದಿ: Citroen Basaltನ ವೇರಿಯೆಂಟ್‌-ವಾರು ಕೊಡುಗೆಗಳ ಸಂಪೂರ್ಣ ವಿವರ

ಇತರ ಫೀಚರ್‌ಗಳು ಮತ್ತು ಸುರಕ್ಷತಾ ತಂತ್ರಜ್ಞಾನ

ಸಿಟ್ರೋಯೆನ್‌ C3 ಹ್ಯಾಚ್‌ಬ್ಯಾಕ್ ವೈರ್‌ಲೆಸ್ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ರಿಮೋಟ್ ಲಾಕಿಂಗ್/ಅನ್‌ಲಾಕಿಂಗ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಪ್ರಮುಖ ಫೀಚರ್‌ಗಳನ್ನು ನೀಡುವುದನ್ನು ಮುಂದುವರೆಸಿದೆ.

ಸುರಕ್ಷತೆಯ ದೃಷ್ಟಿಯಿಂದ, ಸಿಟ್ರೊಯೆನ್ C3 ಅನ್ನು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸೆನ್ಸರ್‌ಗಳೊಂದಿಗೆ ಹಿಂಬದಿಯ ಪಾರ್ಕಿಂಗ್ ಕ್ಯಾಮೆರಾವನ್ನು ಸಜ್ಜುಗೊಳಿಸಿದೆ.

ಪವರ್‌ಟ್ರೈನ್‌ ಆಯ್ಕೆಗಳು

ಸಿಟ್ರೊಯೆನ್ C3 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲ ಆಯ್ಕೆಯು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್ 82 ಪಿಎಸ್‌ ಮತ್ತು 115 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ, ಇದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ.

ಎರಡನೆಯದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 110 ಪಿಎಸ್‌ ಮತ್ತು 205 ಎನ್‌ಎಮ್‌ವರೆಗೆ ಉತ್ಪಾದಿಸುತ್ತದೆ, ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಹೊಸ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಪ್ರತಿಸ್ಪರ್ಧಿಗಳು

ಸಿಟ್ರೊಯೆನ್ C3ಯು ಮಾರುತಿ ವ್ಯಾಗನ್ ಆರ್, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೊಗಳೊಂದಿಗೆ ಸ್ಪರ್ಧಿಸುತ್ತದೆ. ಅದರ ಬೆಲೆ ಮತ್ತು ಆಯಾಮಗಳನ್ನು ಗಮನಿಸುವಾಗ, ಇದು ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಮಿಸ್‌ ಮಾಡದೇ ಫಾಲೋ ಮಾಡಿ

ಇದರ ಬಗ್ಗೆ ಇನ್ನಷ್ಟು ಓದಿ : C3 ಆನ್‌ರೋಡ್‌ ಬೆಲೆ

d
ಅವರಿಂದ ಪ್ರಕಟಿಸಲಾಗಿದೆ

dipan

  • 48 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Citroen ಸಿ3

Read Full News

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ