Login or Register ಅತ್ಯುತ್ತಮ CarDekho experience ಗೆ
Login

ಸಿಟ್ರಾನ್ C3ಯ ಟರ್ಬೋ ವೇರಿಯೆಂಟ್‌ಗಳು ಪಡೆದಿವೆ ಹೊಸತಾದ, ಪೂರ್ಣ ಲೋಡ್‌ ಆದ ಶೈನ್ ಟ್ರಿಮ್‌ನೊಂದಿಗೆ BS6 ಹಂತ 2 ನವೀಕರಣ

published on ಮೇ 08, 2023 09:22 pm by rohit for ಸಿಟ್ರೊನ್ ಸಿ3

ಈ ನವೀಕರಣದೊಂದಿಗೆ, C3 ಬೆಲೆಯನ್ನು ರೂ 6.16 ಲಕ್ಷದಿಂದ ರೂ 8.92 ಲಕ್ಷದ (ಎಕ್ಸ್-ಶೋರೂಂ, ದೆಹಲಿ) ತನಕ ನಿಗದಿಪಡಿಸಲಾಗಿದೆ

  • ಈ C3 ಯ ಎಲ್ಲಾ ವೇರಿಯೆಂಟ್‌ಗಳು ಈಗ BS6 ಹಂತ 2 ಮಾನದಂಡಗಳಿಗೆ ಅನುಗುಣವಾಗಿವೆ.
  • C3 ಟರ್ಬೋ ಡೆಲಿವರಿಗಳು ಮೇ ಮಧ್ಯದಿಂದ ಪ್ರಾರಂಭವಾಗಲಿದೆ.
  • ಟರ್ಬೋ ವೇರಿಯೆಂಟ್‌ಗಳಿಗೆ ಸಿಟ್ರಾನ್ ESP ಮತ್ತು ಐಡ್ಲ್-ಇಂಜಿನ್ ಸ್ಟಾರ್ಟ್/ಸ್ಟಾಪ್‌ ಒಳಗೊಂಡ ಕೆಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿವೆ.
  • ಈ C3 ಎರಡು ಪೆಟ್ರೋಲ್ ಇಂಜಿನ್‌ಗಳೊಂದಿಗೆ ಲಭ್ಯವಿದೆ: 82PS 1.2-ಲೀಟರ್ N.A. ಮತ್ತು 110PS 1.2-ಲೀಟರ್ ಟರ್ಬೋ

ಸಿಟ್ರಾನ್ C3ಯ ಸ್ವಾಭಾವಿಕವಾಗಿ ಚೂಷಿಸಲ್ಪಡುವ ವೇರಿಯೆಂಟ್‌ಗಳೊಂದಿಗೆ ಹೊಸ ಟಾಪ್-ಸ್ಪೆಕ್ ಶೈನ್ ವೇರಿಯೆಂಟ್ ಅನ್ನು ಪರಿಚಯಿಸಿದ ನಂತರ, ಈ ಕಾರುತಯಾರಕರು ಈಗ ಈ ಹ್ಯಾಚ್‌ಬ್ಯಾಕ್‌ನ ಶೈನ್ ಟರ್ಬೋ ಟ್ರಿಮ್ ಅನ್ನು ಬಿಡುಗಡೆಗೊಳಿಸಿದೆ. ಈ ನವೀಕರಣದೊಂದಿಗೆ ಟರ್ಬೋ ವೇರಿಯೆಂಟ್‌ಗಳು ಈಗ BS6 ಹಂತ 2 ಅನುಸರಣೆಯನ್ನು ಪಡೆದಿರುವುದು ಗಮನಾರ್ಹ. ಈ C3 ಟರ್ಬೋ ಡೆಲಿವರಿಗಳು ಮೇ-ಮಧ್ಯದಿಂದ ಪ್ರಾರಂಭವಾಗುತ್ತದೆ ಎಂದು ಸಿಟ್ರಾನ್ ಹೇಳಿದೆ.

ಈ C3 ಹ್ಯಾಚ್‌ಬ್ಯಾಕ್‌ನ ಸಂಪೂರ್ಣ ಮತ್ತು ನವೀಕೃತ ಬೆಲೆ ಪಟ್ಟಿಯ ವಿವರವನ್ನು ಇಲ್ಲಿ ನೀಡಲಾಗಿದೆ:

ವೇರಿಯೆಂಟ್

ಬೆಲೆ (ಎಕ್ಸ್-ಶೋರೂಂ ದೆಹಲಿ)

ಲೈವ್

ರೂ 6.16 ಲಕ್ಷ

ಫೀಲ್

ರೂ 7.08 ಲಕ್ಷ

ಫೀಲ್ ವೈಬ್ ಪ್ಯಾಕ್

ರೂ 7.23 ಲಕ್ಷ

ಫೀಲ್ ಡ್ಯುಯಲ್ ಟೋನ್

ರೂ 7.23 ಲಕ್ಷ

ಫೀಲ್ ಡ್ಯುಯಲ್ ಟೋನ್ ವೈಬ್ ಪ್ಯಾಕ್

ರೂ 7.38 ಲಕ್ಷ

ಶೈನ್

ರೂ 7.60 ಲಕ್ಷ

ಶೈನ್ ವೈಬ್ ಪ್ಯಾಕ್

ರೂ 7.72 ಲಕ್ಷ

ಶೈನ್ ಡ್ಯುಯಲ್ ಟೋನ್

ರೂ 7.75 ಲಕ್ಷ

ಶೈನ್ ಡ್ಯುಯಲ್ ಟೋನ್‌ ವೈಬ್‌ ಪ್ಯಾಕ್

ರೂ 7.87 ಲಕ್ಷ

ಫೀಲ್ ಟರ್ಬೋ ಡ್ಯುಯಲ್ ಟೋನ್ (ನ್ಯೂ)

ರೂ 8.28 ಲಕ್ಷ

ಫೀಲ್ ಡ್ಯುಯಲ್ ಟೋನ್ ವೈಬ್ ಪ್ಯಾಕ್ (ನ್ಯೂ)

ರೂ 8.43 ಲಕ್ಷ

ಶೈನ್ ಟರ್ಬೋ ಡ್ಯುಯಲ್ ಟೋನ್ (ನ್ಯೂ)

ರೂ 8.80 ಲಕ್ಷ

ಶೈನ್ ಟರ್ಬೋ ಡ್ಯುಯಲ್ ಟೋನ್ ವೈಬ್ ಪ್ಯಾಕ್ (ನ್ಯೂ)

ರೂ 8.92 ಲಕ್ಷ

ಬೇರೆ ಬದಲಾವಣೆಗಳಿವೆಯೇ?

ಸಿಟ್ರಾನ್ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್ (ESP), ಹಿಲ್-ಹೋಲ್ಡ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಐಡ್ಲ್-ಇಂಜಿನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ವಿಶಿಷ್ಟವಾಗಿ ಸಜ್ಜುಗೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಶೈನ್ ಟ್ರಿಮ್ ವಿದ್ಯುತ್‌ಚಾಲಿತವಾಗಿ ಹೊಂದಿಸಬಲ್ಲ ORVMಗಳು, ಫಾಗ್ ಲ್ಯಾಂಪ್‌ಗಳು, 15-ಇಂಚಿನ ಡ್ಯುಯಲ್ ಟೋಲ್ ಅಲಾಯ್ ವ್ಹೀಲ್‌ಗಳು, 35 ಸಂಪರ್ಕಿತ ಕಾರ್ ಟೆಕ್ ಫೀಚರ್‌ಗಳು ಮತ್ತು ಹಗಲು/ರಾತ್ರಿ IRVM ಅನ್ನು ಹೊಂದಿದೆ. ಇದರ ಸುರಕ್ಷತಾ ಸಾಧನಗಳು ರಿವರ್ಸಿಂಗ್ ಕ್ಯಾಮರಾ, ರಿಯರ್ ಡಿಫಾಗರ್ ಮತ್ತು ರಿಯರ್ ವೈಪರ್ ಮತ್ತು ವಾಶರ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: ಇಲ್ಲಿದೆ ಸಿಟ್ರಾನ್ ಗ್ರಾಹಕರು ಈ ವರ್ಷದ ಸಮ್ಮರ್ ಸರ್ವೀಸ್ ಕ್ಯಾಂಪ್‌ನಲ್ಲಿ ಪಡೆಯಬಹುದಾದ ಎಲ್ಲಾ ಪ್ರಯೋಜನಗಳು

C3 ಇಂಜಿನ್‌ಗಳ ವಿವರ

ಈ C3 ಎರಡು ಪೆಟ್ರೋಲ್ ಇಂಜಿನ್‌ಗಳ ಆಯ್ಕೆಯನ್ನು ನೀಡುತ್ತದೆ: 5-ಸ್ಪೀಡ್ ಮ್ಯಾನುವಲ್ ಜೊತೆಗೆ 1.2-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್(82PS/115Nm) ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಮಾತ್ರ ಜೋಡಿಸಲಾದ 1.2-ಲೀಟರ್ ಟರ್ಬೋ ಚಾರ್ಜ್ ಯೂನಿಟ್ (110PS/190Nm)

ಇದನ್ನು ಓದಿ: ಸಿಟ್ರಾನ್ C3 ಮತ್ತು C3 ಏರ್‌ಕ್ರಾಸ್ ನಡುವೆ ನೀವು ಗಮನಿಸುವ 5 ಪ್ರಮುಖ ವ್ಯತ್ಯಾಸಗಳು

ಪ್ರತಿಸ್ಪರ್ಧಿಗಳ ವಿವರ

ಸಿಟ್ರಾನ್‌ನ ಹ್ಯಾಚ್‌ಬ್ಯಾಕ್ ಈಗ ಮಾರುತಿ ವ್ಯಾಗನ್ ಆರ್ ಮತ್ತು ಸಿಲೆರಿಯೋ ಹಾಗೂ ಟಾಟಾ ಟಿಯಾಗೋಗೆ ಪೈಪೋಟಿ ನೀಡಲು ಉತ್ತಮವಾಗಿ ಸಜ್ಜುಗೊಂಡಿದೆ. ತನ್ನ ಗಾತ್ರ ಮತ್ತು ಬೆಲೆಯಿಂದಾಗಿ ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಬಲೆನೋ, ಟಾಟಾ ಅಲ್ಟ್ರೋಝ್, ಹ್ಯುಂಡೈ i20 ಮತ್ತು ಸಬ್-4m SUVಗಳಾದ ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಫ್ರಾಂಕ್ಸ್ ಮತ್ತು ರೆನಾಲ್ಟ್ ಕೈಗರ್‌ಗಿಂತ ಮೇಲಿನ ಸ್ಥಾನದಲ್ಲಿದೆ.

ಇನ್ನಷ್ಟು ಓದಿ : ಸಿಟ್ರಾನ್ C3 ಆನ್‌ ರೋಡ್ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸಿಟ್ರೊನ್ ಸಿ3

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ