Tata Nexon, Harrier ಮತ್ತು Safari ಫೇಸ್‌ಲಿಫ್ಟ್‌ಗಳ ಪರಿಚಯಾತ್ಮಕ ಬೆಲೆಗಳು ಫೆಬ್ರವರಿಯಲ್ಲಿ ಬೆಲೆ ಏರಿಕೆಯೊಂದಿಗೆ ಅಂತ್ಯ
ಭಾರತೀಯ ಬ್ರಾಂಡ್ ಆಗಿರುವ ಟಾಟಾದ EV ಶ್ರೇಣಿಗಳು ಕೂಡ ಬೆಲೆ ಏರಿಕೆಗೆ ಒಳಗಾಗಲಿವೆ
- ವಿವಿಧ ಮಾಡೆಲ್ ಗಳು ಮತ್ತು ವೇರಿಯಂಟ್ ಗಳೊಂದಿಗೆ ಬೆಲೆ ಏರಿಕೆಗಳು ಬದಲಾಗುತ್ತವೆ.
- ಟಾಟಾದ ಸಂಪೂರ್ಣ ಶ್ರೇಣಿಯಾದ್ಯಂತ ಬೆಲೆಗಳನ್ನು ಶೇಕಡಾ 0.7 ರಷ್ಟು (ಸರಾಸರಿ) ಹೆಚ್ಚಿಸಲಾಗುವುದು.
- ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಇದಕ್ಕೆ ಕಾರಣ ಎಂದು ಹೇಳಲಾಗಿದೆ.
- ಟಾಟಾದ ಪ್ರಸ್ತುತ ಶ್ರೇಣಿಯು ಒಟ್ಟು 12 ಮಾಡೆಲ್ ಗಳನ್ನು ಒಳಗೊಂಡಿದೆ, ಇದರಲ್ಲಿ ನಾಲ್ಕು EV ಗಳು ಸೇರಿವೆ.
ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಹೆಚ್ಚಿನ ಕಾರು ತಯಾರಕರು ಈಗಾಗಲೇ 2024 ರಲ್ಲಿ ತಮ್ಮ ಕಾರುಗಳ ಬೆಲೆ ಏರಿಕೆಯನ್ನು ಮಾಡಿದ್ದಾರೆ, ಟಾಟಾ ಮೋಟಾರ್ಸ್ ಈಗ ಫೆಬ್ರವರಿ 2024 ರಿಂದ ತನ್ನ ಸಂಪೂರ್ಣ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರರ್ಥ, ಲಾಂಚ್ ಆದ ಸಮಯದಿಂದ ಸುಮಾರು ಮೂರರಿಂದ ನಾಲ್ಕು ತಿಂಗಳವರೆಗೆ ಕೊಡುಗೆಯಲ್ಲಿದ್ದ ಫೇಸ್‌ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಗಳ ಪರಿಚಯಾತ್ಮಕ ಬೆಲೆಗಳು ಈಗ ಕೊನೆಗೊಳ್ಳಲಿವೆ.
ಬೆಲೆ ಏರಿಕೆಗೆ ಕಾರಣ
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಈ ಬೆಲೆ ಏರಿಕೆಯ ಹಿಂದಿನ ಕಾರಣ ಎಂದು ಟಾಟಾ ಹೇಳಿದೆ. ಇದು EV ಗಳನ್ನು ಒಳಗೊಂಡಂತೆ ಅದರ ಇತರ ಶ್ರೇಣಿಯಾದ್ಯಂತ 0.7 ಪ್ರತಿಶತದಷ್ಟು (ಸರಾಸರಿ) ಬೆಲೆಗಳನ್ನು ಹೆಚ್ಚಿಸಲಿದೆ.
ಮಾಡೆಲ್ |
ಬೆಲೆ ಶ್ರೇಣಿ |
ಟಿಯಾಗೋ |
ರೂ. 5.60 ಲಕ್ಷದಿಂದ ರೂ. 8.20 ಲಕ್ಷದವರೆಗೆ |
ಟಿಯಾಗೋ NRG |
ರೂ. 6.70 ಲಕ್ಷದಿಂದ ರೂ. 8.10 ಲಕ್ಷದವರೆಗೆ |
ಪಂಚ್ |
ರೂ. 6 ಲಕ್ಷದಿಂದ ರೂ. 10.10 ಲಕ್ಷದವರೆಗೆ |
ಟಿಗೋರ್ |
ರೂ. 6.30 ಲಕ್ಷದಿಂದ ರೂ. 8.95 ಲಕ್ಷದವರೆಗೆ |
ಆಲ್ಟ್ರೋಜ್ |
ರೂ. 6.60 ಲಕ್ಷದಿಂದ ರೂ. 10.74 ಲಕ್ಷದವರೆಗೆ |
ನೆಕ್ಸಾನ್ |
ರೂ. 8.10 ಲಕ್ಷದಿಂದ ರೂ. 15.50 ಲಕ್ಷದವರೆಗೆ |
ಹ್ಯಾರಿಯರ್ |
ರೂ. 15.49 ಲಕ್ಷದಿಂದ ರೂ. 26.44 ಲಕ್ಷದವರೆಗೆ |
ಸಫಾರಿ |
ರೂ. 16.19 ಲಕ್ಷದಿಂದ ರೂ. 27.34 ಲಕ್ಷದವರೆಗೆ |
Tata.ev ಲೈನ್ಅಪ್ |
|
ಟಿಯಾಗೋ EV |
ರೂ. 8.69 ಲಕ್ಷದಿಂದ ರೂ. 12.04 ಲಕ್ಷದವರೆಗೆ |
ಟಿಗೋರ್ EV |
ರೂ. 12.49 ಲಕ್ಷದಿಂದ ರೂ. 13.75 ಲಕ್ಷದವರೆಗೆ |
ಪಂಚ್ EV |
ರೂ. 11 ಲಕ್ಷದಿಂದ ರೂ. 15.49 ಲಕ್ಷದವರೆಗೆ |
ನೆಕ್ಸಾನ್ EV |
ರೂ. 14.74 ಲಕ್ಷದಿಂದ ರೂ. 19.94 ಲಕ್ಷದವರೆಗೆ |
ಟಾಟಾದ ಪ್ರಸ್ತುತ ಲೈನ್ಅಪ್ ಒಟ್ಟು 12 ಮಾದರಿಗಳನ್ನು ಒಳಗೊಂಡಿದೆ, ಇದರಲ್ಲಿ ನಾಲ್ಕು EVಗಳು ಕೂಡ ಸೇರಿವೆ. ಟಾಟಾದ ಅತ್ಯಂತ ಕೈಗೆಟುಕುವ ಬೆಲೆಯ ಮಾಡೆಲ್ ಟಿಯಾಗೊ (ರೂ. 5.60 ಲಕ್ಷದಿಂದ ಆರಂಭವಾಗುತ್ತದೆ) ಆಗಿದ್ದು, ಹಾಗೆಯೇ ಸಫಾರಿಯು ಅತ್ಯಂತ ದುಬಾರಿ ಬೆಲೆಯ (ಟಾಪ್ ಎಂಡ್ ಗೆ ರೂ. 27.34 ಲಕ್ಷ) ಕಾರಾಗಿದೆ.
ಇನ್ನಷ್ಟು ಓದಿ: ಟಾಟಾ ಪಂಚ್ EV ವರ್ಸಸ್ ಟಾಟಾ ಟಿಯಾಗೊ EV ವರ್ಸಸ್ ಟಾಟಾ ಟಿಗೊರ್ EV ವರ್ಸಸ್ ಟಾಟಾ ನೆಕ್ಸಾನ್ EV: ಸ್ಪೆಸಿಫಿಕೇಷನ್ ಹೋಲಿಕೆ
ಟಾಟಾದ ಮುಂದಿನ ಯೋಜನೆಗಳು
ಟಾಟಾ 2024 ರಲ್ಲಿ ಏಳು ಹೊಸ ಕಾರುಗಳನ್ನು ಲಾಂಚ್ ಮಾಡಲಿದ್ದು, ಇದು ಇತ್ತೀಚಿನ ಪಂಚ್ EV ಯ ಲಾಂಚ್ ನ ಮೂಲಕ ಈಗಾಗಲೇ ಶುರುವಾಗಿದೆ. ಟಾಟಾ ಇತ್ತೀಚೆಗೆ ಹ್ಯಾರಿಯರ್ EV ಡಿಸೈನ್ ಅನ್ನು ಟ್ರೇಡ್‌ಮಾರ್ಕ್ ಮಾಡಿದೆ. ಇದು 2024 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT