• English
  • Login / Register

Mahindra XUV700 : ಶೀಘ್ರದಲ್ಲೇ ಬೇಸ್-ಸ್ಪೆಕ್ ಪೆಟ್ರೋಲ್ ಆಟೋಮ್ಯಾಟಿಕ್‌ ಆವೃತ್ತಿಯನ್ನು ಪಡೆಯುವ ಸಾಧ್ಯತೆ

ಮಹೀಂದ್ರ ಎಕ್ಸ್‌ಯುವಿ 700 ಗಾಗಿ ansh ಮೂಲಕ ಫೆಬ್ರವಾರಿ 14, 2024 08:53 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಆವೃತ್ತಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಬರಲಿದೆ ಮತ್ತು ಡೀಸೆಲ್ ಎಂಜಿನ್‌ ಇದರಲ್ಲಿ ಲಭ್ಯವಿರುವುದಿಲ್ಲ

Mahindra XUV700 To Get A Base-spec MX Petrol Automatic Variant

  • ಮಹೀಂದ್ರಾ ಎಕ್ಸ್‌ಯುವಿ700ವು MX, AX3, AX5, AX7, ಮತ್ತು AX7L ಎಂಬ 5 ವಿಶಾಲವಾದ ಆವೃತ್ತಿಗಳಲ್ಲಿ ಬರುತ್ತದೆ. 
  • ಬೇಸ್-ಸ್ಪೆಕ್ ಎಮ್‌ಎಕ್ಸ್‌ ಪೆಟ್ರೋಲ್ ವೇರಿಯೆಂಟ್‌ವು ಟಾಪ್‌-ಎಂಡ್‌ ಆವೃತ್ತಿಗಳಲ್ಲಿರುವ 6-ಸ್ಪೀಡ್  ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
  • ಇದರ ಹೊಸ ಆಟೋಮ್ಯಾಟಿಕ್‌ ಆವೃತ್ತಿಯು 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ.
  • ಅನುಗುಣವಾದ ಮ್ಯಾನುಯಲ್ ಆವೃತ್ತಿಗಿಂತ ಇದರ ಬೆಲೆಯು ಸುಮಾರು 1.6 ಲಕ್ಷ ರೂ. ವರೆಗೆ ಹೆಚ್ಚಿರಲಿದೆ. 
  • ಬೇಸ್-ಸ್ಪೆಕ್ ಎಮ್‌ಎಕ್ಸ್‌ ಆವೃತ್ತಿಯು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಮಹೀಂದ್ರಾ ಎಕ್ಸ್‌ಯುವಿ700 ಶೀಘ್ರದಲ್ಲೇ ಹೆಚ್ಚು ಕೈಗೆಟುಕುವ ಬೆಲೆಯೊಂದಿಗೆ ಪೆಟ್ರೋಲ್ -ಆಟೋಮ್ಯಾಟಿಕ್‌ ಆವೃತ್ತಿಯನ್ನು ಪಡೆಯಬಹುದು ಎಂದು ದೆಹಲಿಯ ಎನ್‌ಸಿಟಿ ಸರ್ಕಾರದ ಸಾರಿಗೆ ಇಲಾಖೆಯಲ್ಲಿ ಪತ್ತೆಯಾಗಿರುವ ಡಾಕ್ಯುಮೆಂಟ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ, ಇದು ಅದರ ಬೇಸ್‌-ಮೊಡೆಲ್‌ ಎಮ್‌ಎಕ್ಸ್ ಪೆಟ್ರೋಲ್ ಟ್ರಿಮ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ನ ಆಯ್ಕೆಯನ್ನು ಪಡೆಯುತ್ತದೆ ಎಂದು ಸೂಚಿಸುತ್ತದೆ. 

ಪವರ್‌ಟ್ರೇನ್‌ ಮಾಹಿತಿ

Mahindra XUV700 Engine

ಸದ್ಯಕ್ಕೆ, ಎಕ್ಸ್‌ಯುವಿ700 ನ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು ಬೇಸ್‌ ಮೊಡೆಲ್‌ಗಿಂತ ಒಂದು ಮೊಡೆಲ್‌ ಮೇಲಿರುವ ಎಎಕ್ಸ್‌3 ಆವೃತ್ತಿಯಿಂದ ಪ್ರಾರಂಭವಾಗುತ್ತವೆ. ಆದ್ದರಿಂದ ಬೇಸ್‌ ಮೊಡೆಲ್‌ಗಳಲ್ಲಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ನೀಡುವುದರಿಂದ 2-ಪೆಡಲ್ ಸೆಟಪ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್, ಹೆಚ್ಚಾಗಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ (200 PS/380 Nm) ನೀಡಲಾಗುತ್ತದೆ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ ಇರುವುದಿಲ್ಲ. 

ಬೇಸ್‌ ಮೊಡೆಲ್‌ ವೈಶಿಷ್ಟ್ಯಗಳು

Mahindra XUV700 Rear Type-C Charging Port

ಎಕ್ಸ್‌ಯುವಿ700ನ ಎಮ್‌ಎಕ್ಸ್‌ ಆವೃತ್ತಿಯು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಹಿಂದಿನ ಸೀಟ್‌ಗಳಿಗೆ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. 

 ಇದನ್ನು ಓದಿ: ಮರೆಮಾಚುವಿಕೆಯೊಂದಿಗೆ ಮತ್ತೆ ಪರೀಕ್ಷೆ ನಡೆಸುವಾಗ ಮತ್ತೆ ಪತ್ತೆಯಾದ 5-door Mahindra Thar, ಹಿಂಭಾಗದ ಪ್ರೊಫೈಲ್‌ನ ವಿವರಗಳು ಬಹಿರಂಗ

ಸುರಕ್ಷತೆಯ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ನೀಡುತ್ತದೆ. 

ನಿರೀಕ್ಷಿತ ಬೆಲೆ

Mahindra XUV700

 ಮಹೀಂದ್ರಾ ಎಕ್ಸ್‌ಯುವಿ700ನ ಬೇಸ್-ಸ್ಪೆಕ್ ಎಮ್‌ಎಕ್ಸ್‌ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯ ಎಕ್ಸ್-ಶೋ ರೂಂ ಬೆಲೆಯು 13.99 ಲಕ್ಷ ರೂ. ಆಗಿದೆ ಮತ್ತು ಆಟೋಮ್ಯಾಟಿಕ್‌ ಆವೃತ್ತಿಯು ಸುಮಾರು ರೂ 1.6 ಲಕ್ಷದ ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ. ಎಕ್ಸ್‌ಯುವಿ700ಗೆ ಸಂಬಂಧಿಸಿದಂತೆ, ಅದರ ಸಂಪೂರ್ಣ ಎಕ್ಸ್ ಶೋರೂಂ ಬೆಲೆಗಳು  13.99 ಲಕ್ಷ ರೂ.ನಿಂದ ಪ್ರಾರಂಭವಾಗಿ  26.99 ಲಕ್ಷ ರೂ.ವರೆಗೆ ಇರಲಿದೆ. ಮಾರುಕಟ್ಟೆಯಲ್ಲಿ ಇದು ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಇದರ 5-ಸೀಟರ್ ಆವೃತ್ತಿವು ಹುಂಡೈ ಕ್ರೆಟಾ, ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್ ವಿರುದ್ಧ ಪ್ರತಿಸ್ಪರ್ಧಿಯಾಗಿದೆ. 

ಇನ್ನಷ್ಟು ಓದಿ: ಎಕ್ಸ್‌ಯುವಿ700 ಆನ್‌ರೋಡ್‌ ಬೆಲೆ

was this article helpful ?

Write your Comment on Mahindra ಎಕ್ಸ್‌ಯುವಿ 700

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience