2 ಲಕ್ಷ ಉತ್ಪಾದನಾ ಮೈಲಿಗಲ್ಲು ದಾಟಿದ Mahindra XUV700, ಜೊತೆಗೆ ಎರಡು ಹೊಸ ಬಣ್ಣಗಳ ಸೇರ್ಪಡೆ
ಎಕ್ಸ್‌ಯುವಿ700 ಅನ್ನು ಈಗ ಬರ್ನ್ಟ್ ಸಿಯೆನ್ನಾ ಎಂಬ ವಿಶೇಷ ಬಾಡಿ ಕಲರ್‌ನಲ್ಲಿ ನೀಡಲಾಗುತ್ತದೆ ಅಥವಾ ಇದನ್ನು ಡೀಪ್ ಫಾರೆಸ್ಟ್‌ನ ಬಣ್ಣದ ಸ್ಕಾರ್ಪಿಯೋ ಎನ್‌ನೊಂದಿಗೆ ಹೊಂದಿಸಬಹುದು
- ಮಹೀಂದ್ರಾ XUV700 ಬಿಡುಗಡೆಯಾದ 3 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ.
- ಎಕ್ಸ್‌ಯುವಿ700 ಈಗ ಒಟ್ಟು 9 ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ ಮತ್ತು ಅವುಗಳಲ್ಲಿ ಕೆಲವು ಡ್ಯುಯಲ್-ಟೋನ್ ಕಪ್ಪು ರೂಫ್‌ನ ಆಯ್ಕೆಯನ್ನು ಹೊಂದಿದೆ
- ಇದು ಎಸ್‌ಯುವಿಯನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಇಂಜಿನ್‌ಗಳೊಂದಿಗೆ ಅವುಗಳ ಗೇರ್‌ಬಾಕ್ಸ್‌ನ ಸೆಟ್‌ಗಳೊಂದಿಗೆ ನೀಡಲಾಗುತ್ತದೆ.
- ಆವೃತ್ತಿಯನ್ನು ಅವಲಂಬಿಸಿ 5-, 6- ಮತ್ತು 7-ಸೀಟರ್‌ನ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ
- ಇದರ ಬೆಲೆಯು 13.99 ಲಕ್ಷ ರೂ.ನಿಂದ 26.99 ಲಕ್ಷ ರೂ.ಗಳ (ಎಕ್ಸ್ ಶೋ ರೂಂ, ದೆಹಲಿ) ನಡುವೆ ಇರಲಿದೆ.
ಮಹೀಂದ್ರಾ ಎಕ್ಸ್‌ಯುವಿ700 ಹೊಸ ಮೈಲಿಗಲ್ಲನ್ನು ತಲುಪಿದ್ದು, ಬಿಡುಗಡೆಯಾದ ಕೇವಲ 33 ತಿಂಗಳೊಳಗೆ 2 ಲಕ್ಷ ಕಾರುಗಳ ಉತ್ಪಾದನಾ ಮಾರ್ಕ್ ಅನ್ನು ಮೀರಿಸಿದೆ. ಈ ಮೈಲಿಗಲ್ಲನ್ನು ಆಚರಿಸಲು ಯಾವುದೇ ಲಿಮಿಟೆಡ್ ಎಡಿಷನ್‌ನ ಆವೃತ್ತಿಯಿಲ್ಲದಿದ್ದರೂ, ಮಹೀಂದ್ರಾ ತನ್ನ ಜನಪ್ರಿಯ ಮಧ್ಯಮ ಗಾತ್ರದ ಎಸ್‌ಯುವಿಗಾಗಿ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ. ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ:
ಎಕ್ಸ್‌ಯುವಿ700ಗಾಗಿ ಹೊಸ ಬಣ್ಣಗಳು
ಭಾರತೀಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ತನ್ನ ಎಕ್ಸ್‌ಯುವಿ700ಗಾಗಿ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ, ಅವುಗಳೆಂದರೆ ಡೀಪ್ ಫಾರೆಸ್ಟ್ ಗ್ರೀನ್ ಮತ್ತು ಬರ್ಂಟ್ ಸಿಯೆನ್ನಾ ಬ್ರೌನ್. ಇದರಲ್ಲಿ ಎರಡನೆಯದ್ದನ್ನು ಎಕ್ಸ್‌ಯುವಿ700ಗೆ ಎಕ್ಸ್‌ಕ್ಲೂಸಿವ್ ಆಗಿ ನೀಡಲಾಗುತ್ತಿದೆ. ಹಾಗೆಯೇ, ಥಾರ್, ಸ್ಕಾರ್ಪಿಯೋ ಎನ್ ಮತ್ತು ಎಕ್ಸ್‌ಯುವಿ 3ಎಕ್ಸ್‌ಒ ನಂತಹ ಇತರ ಮಹೀಂದ್ರ ಮಾದರಿಗಳಲ್ಲಿ ಸೇನೆಯಿಂದ ಪ್ರೇರಿತ ಹಸಿರು ಬಣ್ಣವನ್ನು ಕಾಣಬಹುದು.
ಮಹೀಂದ್ರಾ ಎಕ್ಸ್‌ಯುವಿ700ಗಾಗಿ ಲಭ್ಯವಿರುವ ಬಣ್ಣಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಎವೆರೆಸ್ಟ್ ವೈಟ್ |
ಮಿಡ್‌ನೈಟ್ ಬ್ಲ್ಯಾಕ್ |
ಡ್ಯಾಝ್ಲಿಂಗ್ ಸಿಲ್ವರ್ |
ರೆಡ್ ರೇಜ್ |
ಎಲೆಕ್ಟ್ರಿಕ್ ಬ್ಲೂ |
ನಪೋಲಿ ಬ್ಲ್ಯಾಕ್ |
ಬ್ಲೇಜ್ ರೆಡ್ |
ಡೀಪ್ ಫಾರೆಸ್ಟ್ (ಹೊಸ) |
ಬರ್‌ಂಟ್ ಸಿಯೆನ್ನಾ |
ಫೀಚರ್‌ಗಳು ಮತ್ತು ಸುರಕ್ಷತೆ
ಎಕ್ಸ್‌ಯುವಿ700 ಯಲ್ಲಿರುವ ಫೀಚರ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, 6-ವೇ ಎಲೆಕ್ಟ್ರಿಕಲಿ-ಎಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, 12 ಸ್ಪೀಕರ್ ಸೌಂಡ್ ಸಿಸ್ಟಮ್, ಪ್ಯಾನರೋಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಇನ್-ಬಿಲ್ಟ್ ಅಲೆಕ್ಸಾ ಕನೆಕ್ಟಿವಿಟಿಯನ್ನು ಒಳಗೊಂಡಿದೆ.
ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ, ವಾಹನವು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಆಂಕರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಟಾಪ್-ಎಂಡ್ ಆವೃತ್ತಿಯು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳೊಂದಿಗೆ (ADAS) ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ಗಳು ಒಟ್ಟಾರೆ ಸುರಕ್ಷತೆ ಮತ್ತು ಚಾಲಕ ಅನುಕೂಲತೆಯನ್ನು ಹೆಚ್ಚಿಸುತ್ತದೆ.
ಎಕ್ಸ್‌ಯುವಿ700 ಪವರ್‌ಟ್ರೈನ್‌ಗಳು
ಎಕ್ಸ್‌ಯುವಿ700 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಎರಡೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. . ಅವುಗಳ ವಿವರಗಳು ಮತ್ತು ವಿಶೇಷಣಗಳು ಕೆಳಕಂಡಂತಿವೆ:
|
2-ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
|
ಪವರ್ |
200 ಪಿಎಸ್ |
156 ಪಿಎಸ್ |
185 ಪಿಎಸ್ |
ಟಾರ್ಕ್ |
380 ಎನ್‌ಎಮ್ |
360 ಎನ್‌ಎಮ್ |
450 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್/ಆಟೋಮ್ಯಾಟಿಕ್ |
6-ಸ್ಪೀಡ್ ಮ್ಯಾನುಯಲ್ |
6-ಸ್ಪೀಡ್ ಮ್ಯಾನುಯಲ್/ಆಟೋಮ್ಯಾಟಿಕ್ |
ಡ್ರೈವ್‌ಟ್ರೈನ್ |
ಫ್ರಂಟ್ ವೀಲ್ ಡ್ರೈವ್ |
ಫ್ರಂಟ್ ವೀಲ್ ಡ್ರೈವ್ |
ಫ್ರಂಟ್- ಅಥವಾ ಆಲ್-ವೀಲ್ ಡ್ರೈವ್(ಆಟೋಮ್ಯಾಟಿಕ್ ಮಾತ್ರ) |
ಎಕ್ಸ್‌ಯುವಿ700 ನ ಲೋವರ್ ವೇರಿಯೆಂಟ್‌ಗಳು ಡೀಸೆಲ್ ಎಂಜಿನ್‌ನ ಕಡಿಮೆ ಟ್ಯೂನ್ ಅನ್ನು ಪಡೆಯುತ್ತವೆ ಮತ್ತು ಆಟೋಮ್ಯಾಟಿಕ್‌ನ ಆಯ್ಕೆ ಇರುವುದಿಲ್ಲ. ಹಾಗೆಯೇ, ಆಲ್‌ವೀಲ್ ಡ್ರೈವ್ ಆಯ್ಕೆಯು ಡೀಸೆಲ್-ಆಟೋಮ್ಯಾಟಿಕ್ ಪವರ್‌ಟ್ರೇನ್‌ಗೆ ಮಾತ್ರ ಸೀಮಿತವಾಗಿದೆ.
ಎಕ್ಸ್‌ಯುವಿ700ನ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಎಕ್ಸ್‌ಯುವಿ700ನ ಪ್ರಸ್ತುತ ಬೆಲೆಯು 13.99 ಲಕ್ಷ ರೂ.ನಿಂದ 26.99 ಲಕ್ಷ ರೂ.ಗಳ (ಎಕ್ಸ್ ಶೋರೂಂ, ದೆಹಲಿ) ನಡುವೆ ಇದೆ. ಇದು ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿಯೊಂದಿಗೆ ಸ್ಪರ್ಧಿಸುತ್ತದೆ. ಅದರ 5-ಸೀಟರ್ ಆವೃತ್ತಿಯು ಎಮ್‌ಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಹ್ಯುಂಡೈ ಕ್ರೆಟಾದಂತಹ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಮಹೀಂದ್ರಾವು 2024ರ ಅಂತ್ಯದ ವೇಳೆಗೆ XUV e8 ಎಂದು ಕರೆಯಲ್ಪಡುವ ಆಲ್-ಎಲೆಕ್ಟ್ರಿಕ್ ಎಕ್ಸ್‌ಯುವಿ700 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್‌ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಎಕ್ಸ್‌ಯುವಿ700 ಡೀಸೆಲ್