Mahindra XUV700 ವರ್ಸಸ್ Tata Safari ವರ್ಸಸ್ Hyundai Alcazar ವರ್ಸಸ್ MG Hector Plus: ಈ ಎಲ್ಲಾ 6-ಸೀಟರ್ SUVಗಳ ಬೆಲೆ ಹೋಲಿಕೆ ಇಲ್ಲಿದೆ
XUV700, ಅಲ್ಕಾಜರ್ ಮತ್ತು ಹೆಕ್ಟರ್ ಪ್ಲಸ್, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ, ಆದರೆ ಟಾಟಾ ಸಫಾರಿ ಡೀಸೆಲ್-ಮಾತ್ರ ಹೊಂದಿರುವ SUV ಆಗಿದೆ.
ಜನವರಿ 2024 ರಲ್ಲಿ, ಮಹೀಂದ್ರಾ XUV700 MY24 (ಮಾಡೆಲ್ ವರ್ಷ) ಅಪ್ಡೇಟ್ ಗಳನ್ನು ಪಡೆದುಕೊಂಡಿತು, ಅದರೊಂದಿಗೆ ಇದು ಹೊಸ ಫೀಚರ್ ಗಳನ್ನು ಮಾತ್ರವಲ್ಲದೆ 6-ಸೀಟ್ ಗಳ ವೇರಿಯಂಟ್ ಅನ್ನು ಕೂಡ ಪಡೆದುಕೊಂಡಿದೆ. XUV700 ಇಲ್ಲಿ ಟಾಟಾ ಸಫಾರಿ, MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್‌ಗೆ ನೇರ ಪ್ರತಿಸ್ಪರ್ಧಿಯಾಗಿ ನಿಂತಿದೆ, ಇದು ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ 6-ಸೀಟರ್ ಕಾನ್ಫಿಗರೇಶನ್‌ನ ಆಯ್ಕೆಯನ್ನು ಕೂಡ ನೀಡುತ್ತದೆ. ಹೊಸದಾಗಿ ಪರಿಚಯಿಸಲಾದ XUV700 6-ಸೀಟರ್ ವೇರಿಯಂಟ್ ಸಫಾರಿ, ಹೆಕ್ಟರ್ ಪ್ಲಸ್ ಮತ್ತು ಅಲ್ಕಾಜಾರ್‌ಗಳ ಬೆಲೆಗೆ ಹೋಲಿಸಿದರೆ ಹೇಗಿದೆ ಎಂದು ನೋಡೋಣ.
ಪೆಟ್ರೋಲ್ ನಲ್ಲಿ
ಮಹೀಂದ್ರ XUV700 |
ಹ್ಯುಂಡೈ ಅಲ್ಕಾಜರ್ |
MG ಹೆಕ್ಟರ್ ಪ್ಲಸ್ |
ಪ್ಲಾಟಿನಂ (O) DCT - ರೂ.19.99 ಲಕ್ಷ |
||
ಸಿಗ್ನೇಚರ್ (O) DCT - ರೂ. 20.28 ಲಕ್ಷ |
ಶಾರ್ಪ್ ಪ್ರೊ MT – ರೂ. 20.34 ಲಕ್ಷ |
|
AX7 MT - ರೂ. 21.44 ಲಕ್ಷ |
ರ್ಪ್ ಪ್ರೊ CVT – ರೂ. 21.73 ಲಕ್ಷ |
|
ಸ್ಯಾವಿ ಪ್ರೊ CVT- ರೂ. 22.68 ಲಕ್ಷ |
||
AX7 AT - ರೂ. 23.14 ಲಕ್ಷ |
||
AX L AT - ರೂ. 25.44 ಲಕ್ಷ |
- ಮಹೀಂದ್ರಾ, ಹ್ಯುಂಡೈ ಮತ್ತು MG ತಮ್ಮ ಆಯಾ SUVಗಳ 6-ಸೀಟರ್ ವೇರಿಯಂಟ್ ಅನ್ನು ಟಾಪ್ ಎರಡು ವೇರಿಯಂಟ್ ಗಳಲ್ಲಿ ನೀಡುತ್ತವೆ.
- XUV700 ಮತ್ತು ಹೆಕ್ಟರ್ ಪ್ಲಸ್ ಈ ಸೀಟ್ ಲೇಔಟ್ ಅನ್ನು ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ನೀಡುತ್ತವೆ, ಹಾಗೆಯೇ ಅಲ್ಕಾಜರ್ ಅದನ್ನು ಆಟೋಮ್ಯಾಟಿಕ್ ನಲ್ಲಿ ಮಾತ್ರ ನೀಡುತ್ತದೆ.
- ಆದರೆ, ಟಾಪ್-ಸ್ಪೆಕ್ ಹ್ಯುಂಡೈ ಅಲ್ಕಾಜರ್ 6-ಸೀಟರ್ ಇಲ್ಲಿ ಪಟ್ಟಿ ಮಾಡಲಾದ ಎರಡೂ ಎಂಟ್ರಿ ಲೆವೆಲ್ ಪ್ರತಿಸ್ಪರ್ಧಿಗಳ 6-ಸೀಟರ್ ಆಯ್ಕೆಗಳಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಇದು XUV700 ಪೆಟ್ರೋಲ್ ವೇರಿಯಂಟ್ ಗಳಿಗಿಂತ ಒಂದು ಲಕ್ಷಕ್ಕಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ದೊರಕುತ್ತದೆ ಆದರೆ 6 ಸೀಟರ್ ಮಹೀಂದ್ರಾ SUV ಯ ಟಾಪ್-ಸ್ಪೆಕ್ ಬೆಲೆಯು 5 ಲಕ್ಷಕ್ಕಿಂತ ಹೆಚ್ಚಾಗಿದೆ.
- MG ಹೆಕ್ಟರ್ ಪ್ಲಸ್ 6-ಸೀಟರ್ ಮ್ಯಾನ್ಯುವಲ್ ಆಯ್ಕೆಯು ಮಹೀಂದ್ರಾ XUV700 6-ಸೀಟರ್‌ನ ಪೆಟ್ರೋಲ್ ಮ್ಯಾನ್ಯುವಲ್ ವೇರಿಯಂಟ್ ಗಿಂತ 1.1 ಲಕ್ಷ ಕಡಿಮೆ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಹಾಗೆಯೇ, ಟಾಪ್-ಸ್ಪೆಕ್ ಹೆಕ್ಟರ್ ಪ್ಲಸ್ 6-ಸೀಟರ್ ಪೆಟ್ರೋಲ್-ಆಟೋ ಅದೇ ಪವರ್‌ಟ್ರೇನ್‌ನೊಂದಿಗೆ XUV700 6-ಸೀಟರ್‌ಗಿಂತ ಕನಿಷ್ಠ ರೂ. 46,000 ಕಡಿಮೆ ಬೆಲೆಯಲ್ಲಿ ಸಿಗುತ್ತದೆ.
- ಅಲ್ಕಾಜರ್ 6-ಸೀಟರ್‌ನ ಪೆಟ್ರೋಲ್ ವೇರಿಯಂಟ್ ಅನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಜೊತೆಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಮಾತ್ರ ಪಡೆಯಬಹುದು.
- ಹೆಕ್ಟರ್ ಪ್ಲಸ್ ಪೆಟ್ರೋಲ್ ಕೂಡ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143 PS / 250 Nm) ಅನ್ನು ಬಳಸುತ್ತದೆ, ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
- XUV700 ನ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (200 PS / 380 Nm) ಗಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯಂಟ್ ನೊಂದಿಗೆ 6-ಸೀಟರ್ ಡಿಸೈನ್ ಆಯ್ಕೆಯನ್ನು ಮಹೀಂದ್ರಾ ನೀಡುತ್ತದೆ.
- ಫೀಚರ್ ಗಳ ವಿಷಯದ ಬಗ್ಗೆ ನೋಡಿದರೆ, ಎರಡೂ SUV ಗಳು ಡ್ಯುಯಲ್ 10.25-ಇಂಚಿನ ಸ್ಕ್ರೀನ್ಸ್, ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನಾರೊಮಿಕ್ ಸನ್‌ರೂಫ್ ಅನ್ನು ಪಡೆಯುತ್ತವೆ.
- ಮಹೀಂದ್ರಾ ತನ್ನ XUV700 ಅನ್ನು ಡ್ಯುಯಲ್-ಝೋನ್ AC ಮತ್ತು ಅಲ್ಕಾಜರ್‌ನಲ್ಲಿ ಇಲ್ಲದ ಮೆಮೊರಿ ಸೀಟ್‌ಗಳೊಂದಿಗೆ ಸಜ್ಜುಗೊಳಿಸಿದೆ. ಆದರೆ, XUV700 6-ವೇ ಪವರ್ ಡ್ರೈವರ್ ಸೀಟ್ ಅನ್ನು ಪಡೆಯುತ್ತದೆ, ಮತ್ತು ಅಲ್ಕಾಜರ್ 8-ವೇ ಅಡ್ಜಸ್ಟ್ ಮಾಡಬಹುದಾದ ಪವರ್ ಡ್ರೈವರ್ ಸೀಟ್ ಅನ್ನು ಪಡೆಯುತ್ತದೆ. ಹಾಗೆಯೇ, ಹೆಕ್ಟರ್ ಪ್ಲಸ್ ಕೂಡ 6-ವೇ ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 4-ವೇ ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್ ಅನ್ನು ಪಡೆಯುತ್ತದೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಡಾರ್ಕ್ ವರ್ಷನ್ ಶೀಘ್ರದಲ್ಲೇ ಹಿಂತಿರುಗಲಿದೆ, ವೇರಿಯಂಟ್ ಗಳು ಲೀಕ್ ಆಗಿವೆ
-
ಇಲ್ಲಿ ನೀಡಿರುವ SUV ಗಳಲ್ಲಿ, ಹೆಕ್ಟರ್ ಪ್ಲಸ್ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಹೊಂದಿದೆ, ಇಲ್ಲಿ ಲಂಬವಾದ 14-ಇಂಚಿನ ಡಿಸ್ಪ್ಲೇ ಅನ್ನು ನೀಡಲಾಗಿದೆ. ಆದರೆ, ಡ್ರೈವರ್ ಡಿಸ್ಪ್ಲೇ ಸೈಜ್ 7-ಇಂಚಿನದ್ದಾಗಿದೆ, ಇದು XUV700 ಮತ್ತು ಅಲ್ಕಾಜರ್‌ನಲ್ಲಿ ಬರುವ 10.25-ಇಂಚಿನ ಸ್ಕ್ರೀನ್ ಗಿಂತ ಚಿಕ್ಕದಾಗಿದೆ.
-
ಸುರಕ್ಷತೆಯ ವಿಷಯದಲ್ಲಿ, ಎಲ್ಲಾ ಮೂರು SUV ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತವೆ. ಎಲ್ಲಾ ಮೂರು SUVಗಳು ತಮ್ಮ ಟಾಪ್-ಸ್ಪೆಕ್ ವೇರಿಯಂಟ್ ಗಳಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಕೂಡ ನೀಡಿದೆ.
-
XUV700 ಏಳು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ, ಆದರೆ ಅಲ್ಕಾಜರ್ ಮತ್ತು ಹೆಕ್ಟರ್ ಪ್ಲಸ್ ಕೇವಲ ಆರು ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಆದರೆ, ಅಲ್ಕಾಜರ್ ತನ್ನ ಎಲ್ಲಾ ವೇರಿಯಂಟ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ.
-
XUV700 ಮತ್ತು ಹೆಕ್ಟರ್ ಪ್ಲಸ್ ಅನ್ನು ಲೇನ್ ಕೀಪ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್ ಗಳನ್ನು ಒಳಗೊಂಡಿರುವ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಗಳೊಂದಿಗೆ ನೀಡಲಾಗುತ್ತದೆ.
ಡೀಸೆಲ್ ನಲ್ಲಿ
ಮಹೀಂದ್ರ XUV700 |
ಟಾಟಾ ಸಫಾರಿ |
ಹ್ಯುಂಡೈ ಅಲ್ಕಾಜರ್ |
MG ಹೆಕ್ಟರ್ ಪ್ಲಸ್ |
ಸಿಗ್ನೇಚರ್ MT - ರೂ. 20.18 ಲಕ್ಷ |
|||
ಪ್ಲಾಟಿನಂ (O) AT - ರೂ. 20.81 ಲಕ್ಷ |
|||
ಸಿಗ್ನೇಚರ್ (O) AT - ರೂ. 20.93 ಲಕ್ಷ |
ಸ್ಮಾರ್ಟ್ ಪ್ರೊ MT - ರೂ. 21 ಲಕ್ಷ |
||
AX7 MT - ರೂ. 22.04 ಲಕ್ಷ |
|||
ಸ್ಮಾರ್ಟ್ ಪ್ರೊ MT - ರೂ. 22.51 ಲಕ್ಷ |
|||
AX7 AT - ರೂ. 23.84 ಲಕ್ಷ |
|||
AX7 L MT - ರೂ. 24.14 ಲಕ್ಷ |
|||
AX7 L AT - ರೂ. 25.94 ಲಕ್ಷ |
ಅಕಂಪ್ಲೀಷಡ್ ಪ್ಲಸ್ MT – ರೂ. 25.59 ಲಕ್ಷ |
||
ಅಕಂಪ್ಲೀಷಡ್ ಪ್ಲಸ್ ಡಾರ್ಕ್ MT – ರೂ. 25.94 ಲಕ್ಷ |
|||
ಕಂಪ್ಲೀಷಡ್ ಪ್ಲಸ್ AT – ರೂ. 26.99 ಲಕ್ಷ |
|||
ಅಕಂಪ್ಲೀಷಡ್ ಪ್ಲಸ್ ಡಾರ್ಕ್ AT – ರೂ. 27.34 ಲಕ್ಷ |
-
ಡೀಸೆಲ್ ಎಂಜಿನ್‌ನಲ್ಲಿ ಕೂಡ, ಹುಂಡೈ ಅಲ್ಕಾಜರ್ ಇಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ 6-ಸೀಟರ್ SUV ಆಗಿದೆ, ಇದು XUV700 ನ 6-ಸೀಟರ್ ಡೀಸೆಲ್ ವೇರಿಯಂಟ್ ಗಳ ಆರಂಭಿಕ ಬೆಲೆಗಿಂತ 1.86 ಲಕ್ಷ ಕಡಿಮೆಯಿದೆ. ಇದು ಹೆಕ್ಟರ್ ಪ್ಲಸ್ ಮತ್ತು ಸಫಾರಿಯ 6 ಸೀಟರ್ ಡೀಸೆಲ್ ಆಯ್ಕೆಗಳಿಗಿಂತ ಕ್ರಮವಾಗಿ ರೂ. 92,000 ಮತ್ತು 5.41 ಲಕ್ಷ ಕಡಿಮೆಯಿದೆ
-
ಟಾಟಾ ಸಫಾರಿಯ 6-ಸೀಟರ್ ಕಾನ್ಫಿಗರೇಶನ್ ಅನ್ನು ಅದರ ಟಾಪ್-ಸ್ಪೆಕ್ ಅಕಂಪ್ಲೀಷಡ್ ಪ್ಲಸ್ ವೇರಿಯಂಟ್ ನೊಂದಿಗೆ ಮಾತ್ರ ನೀಡುವುದರಿಂದ, ಇದು 25.59 ಲಕ್ಷ ರೂಪಾಯಿಗಳ ಅತ್ಯಧಿಕ ಆರಂಭಿಕ ಬೆಲೆಯನ್ನು ಹೊಂದಿದೆ, ಇದು XUV700 6-ಸೀಟರ್ ಡೀಸೆಲ್‌ನ ಆರಂಭಿಕ ಬೆಲೆಗಿಂತ ರೂ. 3.55 ಲಕ್ಷ ಜಾಸ್ತಿಯಾಗಿದೆ.
-
ಮಹೀಂದ್ರಾ XUV700 ಇಲ್ಲಿ ಅತ್ಯಂತ ಶಕ್ತಿಶಾಲಿ ಡೀಸೆಲ್ ಆಯ್ಕೆಯಾಗಿದೆ, ಇದು 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ (185 PS / 450 Nm ವರೆಗೆ).
-
ಟಾಟಾ ಸಫಾರಿಯು 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುವ ಮೂಲಕ 170 PS ಮತ್ತು 350 Nm ಅನ್ನು ಉತ್ಪಾದಿಸುತ್ತದೆ, ಮತ್ತು MG ಹೆಕ್ಟರ್ ಪ್ಲಸ್ ಸಫಾರಿಯಲ್ಲಿರುವ ಅದೇ ಎಂಜಿನ್ ಅನ್ನು ನೀಡುತ್ತದೆ, ಆದರೆ ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸೀಮಿತವಾಗಿದೆ. ಸಫಾರಿಯನ್ನು ಕೂಡ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಪಡೆಯಬಹುದು.
-
ಹ್ಯುಂಡೈ ಅಲ್ಕಾಜರ್ ಇಲ್ಲಿ ಅತ್ಯಂತ ಕಡಿಮೆ ಶಕ್ತಿಶಾಲಿಯಾದ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಅದು 116 PS ಮತ್ತು 250 Nm ಅನ್ನು ಉತ್ಪಾದನೆ ಮಾಡುತ್ತದೆ.
-
ಮೇಲೆ ತಿಳಿಸಿದ ಎಲ್ಲಾ ಡೀಸೆಲ್ ಇಂಜಿನ್‌ಗಳು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ ಮತ್ತು XUV700, ಸಫಾರಿ ಮತ್ತು ಅಲ್ಕಾಜರ್ ಕೂಡ 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತವೆ.
-
ಟಾಟಾ ಸಫಾರಿ ಇಲ್ಲಿ ಅತ್ಯಂತ ದುಬಾರಿ ಆಯ್ಕೆಯಾಗಿದ್ದು, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಮೆಮೊರಿಯೊಂದಿಗೆ 6-ವೇ ಪವರ್ ಡ್ರೈವರ್ ಸೀಟ್‌ನಂತಹ ಪ್ರೀಮಿಯಂ
-
ಫೀಚರ್ ಗಳನ್ನು ಪಡೆಯುತ್ತದೆ ಮತ್ತು ಎಲೆಕ್ಟ್ರಿಕ್ ಬಾಸ್ ಮೋಡ್‌ನೊಂದಿಗೆ 4-ವೇ ಚಾಲಿತ ಕೋ-ಡ್ರೈವರ್ ಸೀಟ್, ವೆಂಟಿಲೇಟೆಡ್ ಮುಂಭಾಗ ಮತ್ತು ಹಿಂಭಾಗದ ಸೀಟ್ ಗಳು, ಮತ್ತು ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್ ಫೀಚರ್ ಗಳನ್ನು ಕೂಡ ನೀಡಲಾಗಿದೆ. ಇದು 6-ಸೀಟರ್ ಕಾನ್ಫಿಗರೇಶನ್ ನಲ್ಲಿ ಮೂರನೇ ಸೀಟಿನ ಸಾಲಿಗೆ ಹೋಗಲು ಸುಲಭವಾದ ಪ್ರವೇಶವನ್ನು ಹೊಂದಿದೆ.
-
ಇಲ್ಲಿ ನೀಡಲಾಗಿರುವ ಎಲ್ಲಾ ನಾಲ್ಕು SUV ಗಳು ಪನೋರಮಿಕ್ ಸನ್‌ರೂಫ್ ಅನ್ನು ಕೂಡ ಪಡೆಯುತ್ತವೆ.
-
XUV700 ಮತ್ತು ಹೆಕ್ಟರ್ ಪ್ಲಸ್‌ನಲ್ಲಿ ಇರುವಂತೆಯೇ, ಸಫಾರಿಯ ಸುರಕ್ಷತಾ ಕಿಟ್ ಕೂಡ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಒಳಗೊಂಡಿದೆ. ಆದರೆ, ಸಫಾರಿಯ ADAS ಕಿಟ್ ಪ್ರಸ್ತುತ ಲೇನ್ ಕೀಪ್ ಅಸಿಸ್ಟ್ ಫೀಚರ್ ಅನ್ನು ಪಡೆಯುವುದಿಲ್ಲ, ಇದನ್ನು ನಂತರ ನೀಡುವ ಅಪ್‌ಡೇಟ್ ಮೂಲಕ ಪರಿಚಯಿಸಲಾಗುತ್ತದೆ.
-
MG ಹೆಕ್ಟರ್ ಪ್ಲಸ್ ತನ್ನ ಟಾಪ್-ಸ್ಪೆಕ್ ಪೆಟ್ರೋಲ್-ಆಟೋಮ್ಯಾಟಿಕ್ ನಲ್ಲಿ ADAS ಅನ್ನು ನೀಡುತ್ತದೆ, ಆದರೆ ಆ ವೇರಿಯಂಟ್ ಮತ್ತು ಅದರ ಸುರಕ್ಷತಾ ಫೀಚರ್ ಗಳು ಡೀಸೆಲ್-ಎಂಜಿನ್‌ನೊಂದಿಗೆ ಲಭ್ಯವಿಲ್ಲ.
-
ಟಾಟಾ ಸಫಾರಿಯ ಟಾಪ್ ವೇರಿಯಂಟ್ ಪ್ರೀಮಿಯಂ ಮೊತ್ತಕ್ಕೆ ಡಾರ್ಕ್ ವರ್ಷನ್ ಆಯ್ಕೆಯನ್ನು ಪಡೆಯುತ್ತದೆ, ಇದು ಒಬೆರಾನ್ ಬ್ಲ್ಯಾಕ್ ಎಕ್ಸ್ಟಿರಿಯಾರ್ ಪೈಂಟ್ ಆಯ್ಕೆ, ಬ್ಲಾಕ್ ಅಲಾಯ್ ವೀಲ್ಸ್ ಮತ್ತು ಆಲ್ ಬ್ಲಾಕ್ ಇಂಟೀರಿಯರ್ ಅನ್ನು ಒಳಗೊಂಡಿವೆ.
-
MY 24 ಅಪ್‌ಡೇಟ್‌ನೊಂದಿಗೆ XUV700 ನಲ್ಲಿ ಹೊಸ ನಾಪೋಲಿ ಬ್ಲಾಕ್ ಎಕ್ಸ್ಟಿರಿಯಾರ್ ಕಲರ್ ಆಯ್ಕೆಯನ್ನು ಮಹೀಂದ್ರಾ ಪರಿಚಯಿಸಿತು, ಇದು ಕಪ್ಪು ಬಣ್ಣದ ಮುಂಭಾಗದ ಗ್ರಿಲ್ ಮತ್ತು ಅಲಾಯ್ ವೀಲ್ ಗಳನ್ನು ಪಡೆಯುತ್ತದೆ. ಆದರೆ, ಈ ಕಲರ್ ಆಯ್ಕೆಗೆ ಮಹೀಂದ್ರಾ ಹೆಚ್ಚುವರಿ ಹಣವನ್ನು ತೆಗೆದುಕೊಳ್ಳುವುದಿಲ್ಲ.
-
MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್ ಕೂಡ ಬ್ಲಾಕ್ ಎಕ್ಸ್ಟಿರಿಯಾರ್ ಕಲರ್ ಆಯ್ಕೆಗಳೊಂದಿಗೆ ಬರುತ್ತವೆ (ಆದರೆ 6-ಸೀಟರ್ ಲೇಔಟ್‌ನಲ್ಲಿ ಕಪ್ಪು ಬಣ್ಣದ ವೀಲ್ಸ್ ಅಥವಾ ಆಲ್ ಬ್ಲಾಕ್ ಇಂಟೀರಿಯರ್ ಲಭ್ಯವಿಲ್ಲ).
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮುಂಚೆ ಮತ್ತು ಈಗ
ಅಂತಿಮ ಟೇಕ್ಅವೇ
ಇಲ್ಲಿ ನೀಡಿರುವ ನಾಲ್ಕು SUV ಗಳಲ್ಲಿ, ಹ್ಯುಂಡೈ ಅಲ್ಕಾಜರ್ ಎಲ್ಲಾ ಅಗತ್ಯ ಫೀಚರ್ ಗಳೊಂದಿಗೆ 6-ಸೀಟರ್ ಅನ್ನು ಬಯಸುವವರಿಗೆ ಅತ್ಯಂತ ಉತ್ತಮ ಆಯ್ಕೆಯಾಗಿದೆ. ಆದರೆ, ಅಸ್ಥೆಟಿಕ್ಸ್, ಕ್ಯಾಬಿನ್ ಸೈಜ್ ಮತ್ತು ಪರ್ಫಾರ್ಮೆನ್ಸ್ ನಿಮ್ಮ ಪ್ರಮುಖ ಆದ್ಯತೆಗಳಾಗಿದ್ದರೆ, ಹೆಚ್ಚುವರಿ ಹಣವನ್ನು ಪಾವತಿಸಿ XUV700 ಅನ್ನು ಖರೀದಿಸಬಹುದು. MG ಹೆಕ್ಟರ್ ಪ್ಲಸ್ ಅನ್ನು ನೋಡಿದರೆ, ಅದರ ಪ್ರಭಾವಶಾಲಿ ಫೀಚರ್ ಗಳ ಪಟ್ಟಿಯೊಂದಿಗೆ XUV700 ನ ಪೆಟ್ರೋಲ್ ವೇರಿಯಂಟ್ ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ; ಆದರೆ, ಡೀಸೆಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿರದ ಕಾರಣ ಇದು ಡೀಸೆಲ್ ವಿಭಾಗದಲ್ಲಿ ನಿರೀಕ್ಷೆಯನ್ನು ಮುಟ್ಟುವುದಿಲ್ಲ.
ಮತ್ತೊಂದೆಡೆ, ಡೀಸೆಲ್-ಮಾತ್ರ ಇರುವ ಟಾಟಾ ಸಫಾರಿ ಇಲ್ಲಿ ಅತ್ಯಂತ ದುಬಾರಿ 6-ಸೀಟರ್ SUV ಆಗಿದೆ. ಈ ನೀಡಿರುವ ಆಯ್ಕೆಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಫೀಚರ್ ಗಳನ್ನು ಮತ್ತು ಹೆಚ್ಚಿನ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ, ಮತ್ತು ಬಹುಶಃ XUV700 ಗಿಂತ ಕಡಿಮೆ ಕಾಯುವ ಅವಧಿಯನ್ನು ಹೊಂದಿದೆ.
ಇವುಗಳಲ್ಲಿ ಯಾವ SUV ಗಳನ್ನು ನೀವು ಖರೀದಿಸಲು ಬಯಸುತ್ತೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಓದಿ: XUV700 ಆನ್ ರೋಡ್ ಬೆಲೆ