Login or Register ಅತ್ಯುತ್ತಮ CarDekho experience ಗೆ
Login

ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ 73,000 ರೂ. ವರೆಗೆ ಡಿಸ್ಕೌಂಟ್‌

ಜನವರಿ 16, 2025 05:53 pm ರಂದು yashika ಮೂಲಕ ಪ್ರಕಟಿಸಲಾಗಿದೆ
33 Views

ರೆನಾಲ್ಟ್ ಎಲ್ಲಾ ಮೂರು ಮೊಡೆಲ್‌ಗಳಾದ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಮೇಲೆ MY24 (ಮೊಡೆಲ್‌ ಇಯರ್‌) ಮತ್ತು MY25 ಎರಡರಲ್ಲೂ ಪ್ರಯೋಜನಗಳನ್ನು ನೀಡುತ್ತಿದೆ

  • ರೆನಾಲ್ಟ್ ಕಿಗರ್ ಅನ್ನು ಗರಿಷ್ಠ 73,000 ರೂ.ಗಳವರೆಗಿನ ಡಿಸ್ಕೌಂಟ್‌ಗಳೊಂದಿಗೆ ಪಡೆಯಬಹುದು.

  • ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ ಕಾರುಗಳಲ್ಲಿ ಗ್ರಾಹಕರು 63,000 ರೂ.ಗಳವರೆಗೆ ಉಳಿಸಬಹುದು.

  • ಎಲ್ಲಾ ಆಫರ್‌ಗಳು 2025ರ ಜನವರಿ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ನೀವು ಈ ತಿಂಗಳು ರೆನಾಲ್ಟ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೊಂದು ಸಿಹಿಸುದ್ದಿಯಿದೆ. ಹೌದು ಈ ಕಾರು ತಯಾರಕ ಕಂಪೆನಿಯು ತಮ್ಮ ಮಾಸಿಕ ಆಫರ್‌ಗಳೊಂದಿಗೆ ಹಿಂತಿರುಗಿದ್ದಾರೆ. ಈ ಬಾರಿ, ರೆನಾಲ್ಟ್ ತನ್ನ ಡಿಸ್ಕೌಂಟ್‌ಗಳನ್ನು MY24 ಮತ್ತು MY25 ಆವೃತ್ತಿಗಳ ಮೂರು ಕಾರುಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಮೇಲೆ ವಿಸ್ತರಿಸಿದೆ. ಮೊಡೆಲ್‌-ವಾರು ವಿವರಗಳನ್ನು ಗಮನಿಸೋಣ:

ಗಮನಿಸಿ: 2025 ರಲ್ಲಿ ತಯಾರಾದ ಮೊಡೆಲ್‌ಗಳಿಗೆ ಹೋಲಿಸಿದರೆ 2024 ರಲ್ಲಿ ತಯಾರಾದ ಮಾದರಿಗಳು ಕಡಿಮೆ ರಿ-ಸೇಲ್‌ ವ್ಯಾಲ್ಯೂವನ್ನು ಹೊಂದಿರಬಹುದು ಎಂಬುದನ್ನು ಗಮನಿಸಿ.

ರೆನಾಲ್ಟ್‌ ಕ್ವಿಡ್‌

ಆಫರ್‌ಗಳು

ಮೊತ್ತ

MY24

MY25

ಕ್ಯಾಶ್‌ ಡಿಸ್ಕೌಂಟ್‌

30000 ರೂ.ವರೆಗೆ

N/A

ಎಕ್ಸ್‌ಚೇಂಜ್‌ ಬೋನಸ್‌

15000 ರೂ.ವರೆಗೆ

15000 ರೂ.ವರೆಗೆ

ಲಾಯಲ್ಟಿ ಬೋನಸ್‌

10000 ರೂ.ವರೆಗೆ

10000 ರೂ.ವರೆಗೆ

ಕಾರ್ಪೋರೇಟ್‌

8000 ರೂ.ವರೆಗೆ

8000 ರೂ.ವರೆಗೆ

ಒಟ್ಟು ಲಾಭಗಳು

63000 ರೂ.ವರೆಗೆ

33000 ರೂ.ವರೆಗೆ

  • ಮೇಲಿನ ಡಿಸ್ಕೌಂಟ್‌ಗಳು ಕ್ವಿಡ್‌ನ ಬೇಸ್-ಸ್ಪೆಕ್ RXE ಮತ್ತು ಮಿಡ್-ಸ್ಪೆಕ್ RXL (O) ವೇರಿಯೆಂಟ್‌ಗಳನ್ನು ಹೊರತುಪಡಿಸಿ, ಎಲ್ಲಾ MY25 ಕ್ವಿಡ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತವೆ.

  • MY25 RXE ಮತ್ತು RXL (O) ವೇರಿಯೆಂಟ್‌ಗಳಿಗೆ, ಲಾಯಲ್ಟಿ ಪ್ರಯೋಜನಗಳು ಮಾತ್ರ ಅನ್ವಯಿಸುತ್ತವೆ.

  • MY24 ಗಾಗಿ, ಮೇಲೆ ತಿಳಿಸಲಾದ ಪ್ರಯೋಜನಗಳು ಹ್ಯಾಚ್‌ಬ್ಯಾಕ್‌ನ RXT, RXL(O) ಮತ್ತು ಕ್ಲೈಂಬರ್ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತವೆ. ಲೋವರ್‌-ಸ್ಪೆಕ್ ವೇರಿಯೆಂಟ್‌ಗಳನ್ನು ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ ಎಂಬುದನ್ನು ಗಮನಿಸಿ.

  • ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಬೆಲೆ 4.70 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 6.45 ಲಕ್ಷ ರೂ.ಗಳವರೆಗೆ ಇರುತ್ತದೆ.

ರೆನಾಲ್ಟ್‌ ಟ್ರೈಬರ್‌

ಆಫರ್‌ಗಳು

ಮೊತ್ತ

MY24

MY25

ಕ್ಯಾಶ್‌ ಡಿಸ್ಕೌಂಟ್‌

30000 ರೂ.ವರೆಗೆ

10000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15000 ರೂ.ವರೆಗೆ

15000 ರೂ.ವರೆಗೆ

ಲಾಯಲ್ಟಿ ಬೋನಸ್‌

10000 ರೂ.ವರೆಗೆ

10000 ರೂ.ವರೆಗೆ

ಕಾರ್ಪೋರೇಟ್‌

8000 ರೂ.ವರೆಗೆ

8000 ರೂ.ವರೆಗೆ

ಒಟ್ಟು ಲಾಭಗಳು

63000 ರೂ.ವರೆಗೆ

43000 ರೂ.ವರೆಗೆ

  • ಬೇಸ್-ಸ್ಪೆಕ್ RXE ವೇರಿಯೆಂಟ್‌ ಅನ್ನು ಹೊರತುಪಡಿಸಿ, ಗ್ರಾಹಕರು ಟ್ರೈಬರ್‌ನ ಎಲ್ಲಾ ವೇರಿಯೆಂಟ್‌ಗಳ ಮೇಲೆ ಮೇಲಿನ ರಿಯಾಯಿತಿಗಳನ್ನು ಪಡೆಯಬಹುದು.

  • RXE ವೇರಿಯೆಂಟ್‌ಗೆ ಕೇವಲ ಲಾಯಲ್ಟಿ ಬೋನಸ್‌(10,000 ರೂ.ವರೆಗೆ) ಲಭ್ಯವಿದೆ.

  • ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ 6 ಲಕ್ಷ ರೂ.ಗಳಿಂದ 8.98 ಲಕ್ಷ ರೂ.ಗಳವರೆಗೆ ಇರುತ್ತದೆ.

ರೆನಾಲ್ಟ್‌ ಕೈಗರ್‌

ಆಫರ್‌ಗಳು

ಮೊತ್ತ

MY24

MY25

ಕ್ಯಾಶ್‌ ಡಿಸ್ಕೌಂಟ್‌

40000 ರೂ.ವರೆಗೆ

10000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15000 ರೂ.ವರೆಗೆ

15000 ರೂ.ವರೆಗೆ

ಲಾಯಲ್ಟಿ ಬೋನಸ್‌

10000 ರೂ.ವರೆಗೆ

10000 ರೂ.ವರೆಗೆ

ಕಾರ್ಪೋರೇಟ್‌

8000 ರೂ.ವರೆಗೆ

8000 ರೂ.ವರೆಗೆ

ಒಟ್ಟು ಲಾಭಗಳು

73000 ರೂ.ವರೆಗೆ

43000 ರೂ.ವರೆಗೆ

  • ಮೇಲಿನ ಕ್ಯಾಶ್‌ ಡಿಸ್ಕೌಂಟ್‌ ಮತ್ತು ಎಕ್ಸ್‌ಚೇಂಜ್‌ ಬೋನಸ್ ಲೋವರ್‌-ಸ್ಪೆಕ್ RXE ಮತ್ತು RXL ವೇರಿಯೆಂಟ್‌ಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಕೈಗರ್‌ ವೇರಿಯೆಂಟ್‌ಗಳಿಗೆ ಅನ್ವಯಿಸುತ್ತದೆ.

  • ನೀವು ಕೈಗರ್‌ನ RXE ಅಥವಾ RXL (MY24 ಅಥವಾ MY25) ವೇರಿಯೆಂಟ್‌ ಅನ್ನು ಆಯ್ಕೆ ಮಾಡಲು ಬಯಸಿದರೆ, ಅದನ್ನು ಲಾಯಲ್ಟಿ ಬೋನಸ್‌ನೊಂದಿಗೆ ಮಾತ್ರ ಪಡೆಯಬಹುದು.

  • ಕಿಗರ್ ಬೆಲೆ 6 ಲಕ್ಷ ರೂ.ಗಳಿಂದ 11.23 ಲಕ್ಷ ರೂ.ಗಳವರೆಗೆ ಇರುತ್ತದೆ.

ಗಮನಿಸಿ:

  • ಗ್ರಾಹಕರು ಅಗತ್ಯವಿರುವ ಲಾಯಲ್ಟಿ ಪುರಾವೆಗಳನ್ನು ಸಲ್ಲಿಸಿದರೆ ನೀಡಲಾದ ಕೊಡುಗೆಗಿಂತ ಹೆಚ್ಚಿನ ಹೆಚ್ಚುವರಿ ಲಾಯಲ್ಟಿ ಆಫರ್‌ ಅನ್ನು ಪಡೆಯಬಹುದು.

  • ಆಯ್ದ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಉದ್ಯೋಗಿಗಳಿಗೆ ಎಲ್ಲಾ ರೆನಾಲ್ಟ್ ಆಫರ್‌ಗಳ ಮೇಲೆ ರೂ 8,000 ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು ಲಭ್ಯವಿದೆ.

  • ರೈತರು, ಸರಪಂಚ್ ಮತ್ತು ಗ್ರಾಮ ಪಂಚಾಯತ್ ಸದಸ್ಯರು 4,000 ರೂ.ಗಳ ಗ್ರಾಮೀಣ ರಿಯಾಯಿತಿಯನ್ನು ಪಡೆಯಬಹುದು. ಆದರೆ, ನೀವು ಈ ಗ್ರಾಮೀಣ ರಿಯಾಯಿತಿ ಅಥವಾ ಕಾರ್ಪೊರೇಟ್ ರಿಯಾಯಿತಿಯನ್ನು ಮಾತ್ರ ಬಳಸಬಹುದು, ಎರಡನ್ನೂ ಪಡೆಯಲು ಸಾಧ್ಯವಿಲ್ಲ.

  • ವಾಹನ ಸ್ಕ್ರ್ಯಾಪೇಜ್‌ಗೆ 'ರಿಲೈವ್' ರಿಯಾಯಿತಿ ಮತ್ತು ಎಲ್ಲಾ ಕಾರುಗಳಿಗೆ ಲಾಯಲ್ಟಿ ಬೋನಸ್ ಅನ್ನು ಸಹ ನೀಡಲಾಗುತ್ತಿದೆ.

  • ಮೇಲೆ ತಿಳಿಸಲಾದ ಡಿಸ್ಕೌಂಟ್‌ಗಳು ರಾಜ್ಯ ಮತ್ತು ನಗರವನ್ನು ಆಧರಿಸಿ ಭಿನ್ನವಾಗಿರಬಹುದು. ನಿಖರವಾದ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಶೋರೂಮ್‌ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ನವದೆಹಲಿಯ ಎಕ್ಸ್-ಶೋರೂಂ ಆಗಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Renault ಕ್ವಿಡ್

explore similar ಕಾರುಗಳು

ರೆನಾಲ್ಟ್ ಟ್ರೈಬರ್

4.31.1k ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್20 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ರೆನಾಲ್ಟ್ ಕೈಗರ್

4.2502 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್19.17 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ರೆನಾಲ್ಟ್ ಕ್ವಿಡ್

4.3882 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್21.46 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ