ಭಾರತದ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿಯಾಗಲಿರುವ Tata Curvv ಮತ್ತು Curvv EV: ಆಗಸ್ಟ್ 7ಕ್ಕೆ ದಿನಾಂಕ ಫಿಕ್ಸ್
ಟಾಟಾ ಕರ್ವ್ ಗಾಗಿ shreyash ಮೂಲಕ ಜುಲೈ 15, 2024 06:39 pm ರಂದು ಮಾರ್ಪಡಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಕರ್ವ್ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಎಸ್‌ಯುವಿ-ಕೂಪ್ ಆಗಲಿದೆ ಮತ್ತು ಇದು ಅತ್ಯಂತ ಜನಪ್ರಿಯವಾದ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ಗೆ ಫಿಟ್ ಆಗಲಿದೆ
- ಹೊರಭಾಗದಲ್ಲಿ ಕೂಪ್ ಶೈಲಿಯ ರೂಫ್‌ಲೈನ್ ಮತ್ತು ಕನೆಕ್ಟೆಡ್ LED DRL ಗಳು ಮತ್ತು ಟೈಲ್ ಲೈಟ್‌ಗಳನ್ನು ಒಳಗೊಂಡಿವೆ.
- ಕ್ಯಾಬಿನ್ ಒಳಗೆ ಇದು ಟಾಟಾ ನೆಕ್ಸಾನ್ EV ಯಲ್ಲಿರುವ ಡ್ಯಾಶ್‌ಬೋರ್ಡ್ ಅನ್ನು ಪಡೆಯಬಹುದು.
- 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಫೀಚರ್ ಗಳೊಂದಿಗೆ ಬರಬಹುದು.
- ಸುರಕ್ಷತೆಯ ವಿಷಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಪಡೆಯಬಹುದು.
- ಟಾಟಾ ಕರ್ವ್ EV ಅನ್ನು ಟಾಟಾ ಪಂಚ್ EV ಯಲ್ಲಿ ಕೂಡ ಬಳಸಲಾಗಿರುವ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.
- ICE-ಮಾಡೆಲ್ 1.2-ಲೀಟರ್ T-GDI ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಹೊಂದುವ ನಿರೀಕ್ಷೆಯಿದೆ.
- ICE ವರ್ಷನ್ ಬೆಲೆಯು ರೂ 11 ಲಕ್ಷ ಮತ್ತು EV ಬೆಲೆಯು ರೂ 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಹಲವು ಸ್ಪೈ ಶಾಟ್ ಗಳು ಮತ್ತು ಟೀಸರ್‌ಗಳ ನಂತರ, ಟಾಟಾ ಕರ್ವ್ ಈಗ ಆಗಸ್ಟ್ 7, 2024 ರಂದು ಮಾರುಕಟ್ಟೆಗೆ ಬರಲಿದೆ. ಟಾಟಾ ಕರ್ವ್ ಭಾರತದ ಮೊದಲ ಮಾಸ್-ಮಾರುಕಟ್ಟೆ SUV-ಕೂಪ್ ಆಗಿದೆ ಮತ್ತು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಮಾಡೆಲ್ ಗಳನ್ನು ಒಳಗೊಂಡಿರುವ ಜನಪ್ರಿಯ ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಫಿಟ್ ಆಗಲಿದೆ. ಟಾಟಾ ಈ ಕೂಪ್ SUV ಅನ್ನು ICE ಮತ್ತು EV ವರ್ಷನ್ ಗಳಲ್ಲಿ ಪರಿಚಯಿಸುತ್ತಿದೆ, ಈ ಎರಡೂ ವರ್ಷನ್ ಗಳು ಒಂದೇ ದಿನ ಲಾಂಚ್ ಆಗುವ ನಿರೀಕ್ಷೆಯಿದೆ.
ಡಿಸೈನ್
ಟಾಟಾ ಕರ್ವ್ ಇತ್ತೀಚೆಗೆ ಫೇಸ್‌ಲಿಫ್ಟ್ ಆಗಿರುವ ಟಾಟಾ SUVಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವ ಅನೇಕ ಡಿಸೈನ್ ಅಂಶಗಳನ್ನು ಪಡೆಯುತ್ತದೆ. ಮುಂಭಾಗದಲ್ಲಿ, ಇದು ಕನೆಕ್ಟೆಡ್ LED DRL ಸೆಟಪ್ ಅನ್ನು ಒಳಗೊಂಡಿದೆ, ಮುಂಭಾಗದ ಬಂಪರ್‌ನಲ್ಲಿ ಹೆಡ್‌ಲೈಟ್‌ಗಳನ್ನು ಇರಿಸಲಾಗಿದೆ ಮತ್ತು ICE ವರ್ಷನ್ ಗೆ ಗ್ರಿಲ್ ಅನ್ನು ನೀಡಲಾಗಿದೆ (ಇದು EV ಯಲ್ಲಿ ಕ್ಲೋಸ್ಡ್ ಆಫ್ ಆಗಿದೆ). ಸೈಡ್ ಗಳಲ್ಲಿ, ಕರ್ವ್ ಅದರ ಕೂಪ್-ಶೈಲಿಯ ರೂಫ್‌ಲೈನ್ ಅನ್ನು ತೋರಿಸುತ್ತದೆ, ಮತ್ತು ಟೀಸರ್‌ಗಳು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಇರುವುದನ್ನು ಖಚಿತಪಡಿಸುತ್ತದೆ (ಇದನ್ನು ಟಾಟಾದಲ್ಲಿ ಮೊದಲ ಬಾರಿಗೆ ನೀಡಲಾಗಿದೆ). ಇದು ವೆಲ್ಕಮ್ ಮತ್ತು ಗುಡ್ ಬೈ ಫಂಕ್ಷನ್ ನೊಂದಿಗೆ ಹಿಂಭಾಗದಲ್ಲಿ ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ಕೂಡ ಪಡೆಯುತ್ತದೆ.
ಕ್ಯಾಬಿನ್ ಮತ್ತು ನಿರೀಕ್ಷಿಸಲಾಗಿರುವ ಫೀಚರ್ ಗಳು
ಟಾಟಾ ತನ್ನ ಕರ್ವ್ ನ ಒಳಭಾಗವನ್ನು ಸಂಪೂರ್ಣವಾಗಿ ಇನ್ನೂ ತೋರಿಸಿಲ್ಲ, ಆದರೆ ಸ್ಪೈ ಫೋಟೋಗಳು ಮತ್ತು ಟೀಸರ್‌ಗಳು ಟಾಟಾ ನೆಕ್ಸಾನ್ ಮತ್ತು ಹ್ಯಾರಿಯರ್‌ನಿಂದ ಕೆಲವು ಫೀಚರ್ ಗಳನ್ನು ಪಡೆದುಕೊಂಡಿದೆ ಎಂದು ಸೂಚಿಸುತ್ತವೆ. ಇದು ಇಲ್ಯೂಮಿನೇಟ್ ಆಗುವ ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯಬಹುದು.
ಕರ್ವ್ ಟಾಟಾದ ಇತರ ಕಾರುಗಳಲ್ಲಿರುವ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪವರ್ಡ್ ಡ್ರೈವರ್ ಸೀಟ್, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಪನರೋಮಿಕ್ ಸನ್ರೂಫ್ ನಂತಹ ಫೀಚರ್ ಗಳನ್ನು ಪಡೆಯಬಹುದು. ಇದು ಸುರಕ್ಷತಾ ವಿಷಯದಲ್ಲಿ 6 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೇನ್ ಕೀಪ್ ಅಸಿಸ್ಟ್, ಆಟೊನೊಮಸ್ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿರುತ್ತದೆ.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಟಾಟಾ ಹೊಸ 1.2-ಲೀಟರ್ T-GDi ಟರ್ಬೊ-ಪೆಟ್ರೋಲ್ ಮತ್ತು ಈಗಾಗಲೇ ನೆಕ್ಸಾನ್ ನಲ್ಲಿರುವ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಕರ್ವ್ ನ ICE ವರ್ಷನ್ ಅನ್ನು ನೀಡಲಿದೆ. ಈ ಕೆಳಗಿನ ಟೇಬಲ್ ನಲ್ಲಿ ನಾವು ವಿವರವಾದ ಸ್ಪೆಸಿಫಿಕೇಷನ್ ಗಳನ್ನು ನೀಡಿದ್ದೇವೆ:
ಇಂಜಿನ್ |
1.2-ಲೀಟರ್ T-GDi ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
125 PS |
115 PS |
ಟಾರ್ಕ್ |
225 Nm |
260 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ) |
6-ಸ್ಪೀಡ್ MT |
ಕರ್ವ್ EV ಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟರ್ ಬಗ್ಗೆ ಟಾಟಾ ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ, ಮತ್ತು ಸುಮಾರು 500 ಕಿಮೀ ಗರಿಷ್ಠ ರೇಂಜ್ ಅನ್ನು ನೀಡಬಹುದು. ಟಾಟಾ ಕರ್ವ್ EV ಅನ್ನು ಟಾಟಾ ಪಂಚ್ EV ನಲ್ಲಿ ಕೂಡ ಬಳಸಲಾಗಿರುವ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು DC ಫಾಸ್ಟ್ ಚಾರ್ಜಿಂಗ್, V2L (ವೆಹಿಕಲ್ ಟು ಲೋಡ್) ಕ್ಯಾಪೆಬಿಲಿಟಿ, ವಿವಿಧ ಡ್ರೈವ್ ಮೋಡ್‌ಗಳು ಮತ್ತು ಅಡ್ಜಸ್ಟ್ ಮಾಡಬಹುದಾದ ಎನರ್ಜಿ ರೀಜೆನೆರೇಷನ್ ನಂತಹ ಫೀಚರ್ ಗಳನ್ನು ಸಪೋರ್ಟ್ ಮಾಡುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ EV ಮೊದಲು ಮಾರುಕಟ್ಟೆಗೆ ಬರಲಿದ್ದು, ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ). ಇದು ಭಾರತದಲ್ಲಿ MG ZS EV ಮತ್ತು ಮುಂಬರುವ ಹುಂಡೈ ಕ್ರೆಟಾ EV ಗೆ ಪ್ರತಿಸ್ಪರ್ಧಿಯಾಗಲಿದೆ. ಟಾಟಾ ಕರ್ವ್ ICE, ಕರ್ವ್ EV ಯ ಬಿಡುಗಡೆಯ ನಂತರ ಮಾರುಕಟ್ಟೆಗೆ ಬರಲಿದೆ, ಮತ್ತು ಇದರ ಬೆಲೆ ರೂ.10.50 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಕರ್ವ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, MG ಆಸ್ಟರ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ