Login or Register ಅತ್ಯುತ್ತಮ CarDekho experience ಗೆ
Login

2023ರಲ್ಲಿ ADAS ಹೊಂದಿರುವ ರೂ. 30 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಕಾರುಗಳಿವು

published on ಡಿಸೆಂಬರ್ 28, 2023 04:05 pm by rohit for ಎಂಜಿ ಹೆಕ್ಟರ್

ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ತಮ್ಮ ಫುಲಿ ಲೋಡೆಡ್‌ ಅಥವಾ ಹೈಯರ್‌ ಸ್ಪೆಕ್‌ ವೇರಿಯಂಟ್‌ ಗಳಲ್ಲಿ‌ ಮಾತ್ರವೇ ಈ ಸುರಕ್ಷಾ ತಂತ್ರಜ್ಞಾನವನ್ನು ಪಡೆದರೆ, ಹೋಂಡಾ ಸಿಟಿಯು ತನ್ನೆಲ್ಲ ಲೈನ್‌ ಅಪ್‌ ಗಳಲ್ಲಿ ಇದನ್ನು ಒದಗಿಸುತ್ತಿದೆ

ಕಾರು ಖರೀದಿಯ ನಿರ್ಧಾರದ ವಿಚಾರ ಬಂದಾಗ ಗ್ರಾಹಕರು ಸುರಕ್ಷತೆಗೂ ಹೆಚ್ಚಿನ ಗಮನವನ್ನು ನೀಡುತ್ತಿದ್ದು, ವರ್ಷಗಳು ಕಳೆದಂತೆ ಉತ್ಪಾದಕರು ತಮ್ಮ ನವೀನ ಮಾದರಿಗಳಲ್ಲಿ ಸುರಕ್ಷತೆಯ ವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಹೆಚ್ಚಿನ ಏರ್‌ ಬ್ಯಾಗ್‌ ಗಳು ಮತ್ತು 360 ಡಿಗ್ರಿ ಕ್ಯಾಮರಾದ ಜೊತೆಗೆ ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಸಹ ಮುಖ್ಯವಾಹಿನಿಯ ಭಾರತೀಯ ಅಟೋಮೋಟಿವ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ 2023ರಲ್ಲಿ ರೂ. 30 ಲಕ್ಷಕ್ಕಿಂತ (ಎಕ್ಸ್‌-ಶೋರೂಂ) ಕಡಿಮೆ ಬೆಲೆಯ ಯಾವೆಲ್ಲ ಕಾರುಗಳು ADAS ಸೌಲಭ್ಯಗಳನ್ನು ಪಡೆದಿವೆ ಎಂಬುದನ್ನು ನೀವು ತಿಳಿಯಲು ಬಯಸುವುದಾದರೆ ಆ ಪಟ್ಟಿಯು ಇಲ್ಲಿದೆ:

MG ಹೆಕ್ಟರ್/ಹೆಕ್ಟರ್‌ ಪ್ಲಸ್‌ ಫೇಸ್‌ ಲಿಫ್ಟ್‌ ಗಳು

  • MG ಹೆಕ್ಟರ್ ಮತ್ತು MG ಹೆಕ್ಟರ್‌ ಪ್ಲಸ್ ಇವೆರಡೂ ವಾಹನಗಳು 2023ರ ಆರಂಭದಲ್ಲಿ ಪರಿಷ್ಕರಣೆಗೆ ಒಳಗಾಗಿದ್ದು, ಇದು ಈ SUV ಗಳಿಗೆ ಹೊಸ ವಿನ್ಯಾಸವನ್ನು ಒದಗಿಸುವ ಜೊತೆಗೆ ಒಂದಷ್ಟು ಸುಧಾರಿತ ಅನುಕೂಲ ಮತ್ತು ADAS ಸೇರಿದಂತೆ ಸುರಕ್ಷತಾ ಸೌಲಭ್ಯಗಳನ್ನು ಒದಗಿಸಿದೆ.

  • SUVಯ ಎರಡೂ ಆವೃತ್ತಿಗಳಲ್ಲಿ, ಫುಲಿ ಲೋಡೆಡೆ ಸ್ಯಾವಿ ಪ್ರೊ ಟ್ರಿಮ್‌ ನಲ್ಲಿ ಮಾತ್ರವೇ ADAS ಅನ್ನು ನೀಡಲಾಗಿದೆ.

  • ಅವುಗಳ ಸುರಕ್ಷತಾ ಪಟ್ಟಿಯಲ್ಲಿ ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ಟ್ರಾಫಿಕ್‌ ಜಾಮ್‌ ಅಸಿಸ್ಟ್‌, ಮತ್ತು ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್ (AEB)‌ ಒಳಗೊಂಡಿದೆ.

ಹೋಂಡಾ ಸಿಟಿ ಫೇಸ್‌ ಲಿಫ್ಟ್

  • ಮಾರ್ಚ್‌ 2023ರಲ್ಲಿ ನಾವು ಪರಿಷ್ಕೃತ ಹೋಂಡಾ ಸಿಟಿಯನ್ನು ಪಡೆದಿದ್ದು, ಹೋಂಡಾ ಸಿಟಿ ಹೈಬ್ರೀಡ್‌ ಗೆ ಸೀಮಿತವಾಗಿದ್ದ ADAS ಅನ್ನು ಇದಕ್ಕೆ ಅಳವಡಿಸಲಾಗಿದೆ.

  • ಸೆಕೆಂಡ್‌ ಫ್ರಂ ಬೇಸ್ V‌ ವೇರಿಯಂಟ್‌ ನಿಂದ ಈ ಸೆಡಾನ್‌ ಆಧುನಿಕ ಸುರಕ್ಷಾ ಸಾಧನವನ್ನು ಪಡೆದಿದೆ.

  • ಇದರ ADAS ಘಟಕವು ಫಾರ್ವರ್ಡ್‌ ಕೊಲಿಶನ್‌ ಅವಾಯ್ಡೆನ್ಸ್,‌ ಲೇನ್‌ ಕೀಪ್‌ ಅಸಿಸ್ಟ್, ಮತ್ತು ಲೀಡ್‌ ಕಾರ್‌ ಡಿಪಾರ್ಚರ್‌ ಅಲರ್ಟ್‌ ಅನ್ನು ಹೊಂದಿದೆ.

ಆರನೇ ತಲೆಮಾರಿನ ಹ್ಯುಂಡೈ ವೆರ್ನಾ

  • ಹ್ಯುಂಡೈ ವೆರ್ನಾ ಕಾರಿಗೆ 2023ರಲ್ಲಿ ಹೊಸ ತಲೆಮಾರಿಗೆ ಸಂಬಂಧಿಸಿದ ಪರಿಷ್ಕರಣೆಯನ್ನು ನೀಡಲಾಗಿದ್ದು, ಭಾರತದಲ್ಲಿ ADAS ಪಡೆದ ಮೊದಲ ಹ್ಯುಂಡೈ ಕಾರು ಇದೆನಿಸಿದೆ.

  • ಹ್ಯುಂಡೈ ಸಂಸ್ಥೆಯು ADAS ಅನ್ನು ಕೇವಲ ಎರಡು ವೇರಿಯಂಟ್‌ ಮಟ್ಟದಲ್ಲಿ ನೀಡುತ್ತದೆ: CVT ಜೊತೆಗೆ SX (O) ಮತ್ತು SX (O) ಟರ್ಬೊ.

  • ಇದರ ADAS ತಂತ್ರಜ್ಞಾನವು ಫಾರ್ವರ್ಡ್‌ ಕೊಲಿಶನ್‌ ಅವಾಯ್ಡೆನ್ಸ್‌, ಲೇನ್‌ ಕೀಪ್‌ ಅಸಿಸ್ಟ್‌, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ಮತ್ತು ಹೈ ಬೀಮ್‌ ಅಸಿಸ್ಟ್‌ ಅನ್ನು ಒಳಗೊಂಡಿದೆ.

ಇದನ್ನು ಸಹ ನೋಡಿರಿ: ತನ್ನ ಮೊದಲ ಎಲೆಕ್ಟ್ರಿಕ್‌ ಕಾರ್‌ ಆಗಿ MG ಕೋಮೆಟ್ EV‌ ಯನ್ನು ಆರಿಸಿಕೊಂಡ ಸುನಿಲ್‌ ಶೆಟ್ಟಿ

ಹೋಂಡಾ ಎಲೆವೇಟ್

  • ಹೋಂಡಾ ಎಲೆವೇಟ್ ಕಾರು, ಈಗಾಗಲೇ ಕಿಕ್ಕಿರಿದು ಹೋಗಿರುವ ಕಾಂಪ್ಯಾಕ್ಟ್‌ SUV ವಿಭಾಗಕ್ಕೆ ಹೊಸ ಪ್ರವೇಶವೆನಿಸಿದೆ. ಇದು ADAS ಸೇರಿದಂತೆ ಈ ವಿಭಾಗದ ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.

  • ಹೋಂಡಾ ಸಂಸ್ಥೆಯು ಈ ಸುರಕ್ಷಾ ತಂತ್ರಜ್ಞಾನವನ್ನು SUV ಯ ಟಾಪ್‌ ಸ್ಪೆಕ್‌ ZX ನಲ್ಲಿ ಮಾತ್ರವೇ ಒದಗಿಸುತ್ತದೆ.

  • ಎಲೆವೇಟ್‌ ಕಾರಿನ ADAS ಪಟ್ಟಿಯು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌, ಲೇನ್‌ ಕೀಪ್‌ ಅಸಿಸ್ಟ್‌, ಮತ್ತು ಫಾರ್ವರ್ಡ್‌ ಕೊಲಿಶನ್‌ ಅವಾಯ್ಡೆನ್ಸ್‌ ಅನ್ನು ಹೊಂದಿದೆ.

ಹ್ಯುಂಡೈ ವೆನ್ಯು ಮತ್ತು ವೆನ್ಯು N ಲೈನ್

  • ಪರಿಷ್ಕೃತ ಹ್ಯುಂಡೈ ವೆನ್ಯು ಮತ್ತು ಹ್ಯುಂಡೈ ವೆನ್ಯು N ಲೈನ್ ಗಳನ್ನು 2022ರಲ್ಲಿ ಬಿಡುಗಡೆ ಮಾಡಲಾಗಿದ್ದರೂ, ಈ ಕಾರು ತಯಾರಕ ಸಂಸ್ಥೆಯು 2023ರಲ್ಲಿ ಇವುಗಳಲ್ಲಿ ADAS ಅನ್ನು ಅಳವಡಿಸಲು ನಿರ್ಧರಿಸಿತು.

  • ಹ್ಯುಂಡೈ ಸಬ್-4m SUV‌ ಯ ಎರಡೂ ಆವೃತ್ತಿಗಳಲ್ಲಿ, ಫುಲಿ ಲೋಡೆಡ್‌ ವೇರಿಯಂಟ್‌ ಗಳಾದ SX (O) ಮತ್ತು N8 ಗಳು ADAS ಅನ್ನು ಹೊಂದಿವೆ.

  • ಇದರ ADAS ತಂತ್ರಜ್ಞಾನವು ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್,‌ ಡ್ರೈವರ್‌ ಅಟೆಂಟಿವ್‌ ನೆಸ್‌ ಅಲರ್ಟ್,‌ ಮತ್ತು ಲೀಡ್‌ ವೆಹಿಕಲ್‌ ಡಿಪಾರ್ಚರ್‌ ವಾರ್ನಿಂಗ್‌ ಅನ್ನು ಹೊಂದಿದ್ದು, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಅನ್ನು ಹೊಂದಿಲ್ಲ.

ಕಿಯಾ ಸೆಲ್ಟೋಸ್ ಫೇಸ್‌‌ ಲಿಫ್ಟ್

  • ಪರಿಷ್ಕೃತ ಕಿಯಾ ಸೆಲ್ಟೋಸ್ ಅನ್ನು 2023ರಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದ್ದು, ADAS ಸೇರಿದಂತೆ ಅನೇಕ ಹೊಸತನಗಳೊಂದಿಗೆ ರಸ್ತೆಗಿಳಿದಿದೆ.

  • ನೀವು ADAS ತಂತ್ರಜ್ಞಾನವನ್ನು ಸೆಲ್ಟೋಸ್‌ ನ ಹೈಯರ್‌ ಸ್ಪೆಕ್ GTX+ ಮತ್ತು X-ಲೈನ್‌ ವೇರಿಯಂಟ್‌ ಗಳಲ್ಲಿ ಪಡೆಯಬಹುದು.

  • ಈ SUV ಯ ADAS ಪಟ್ಟಿಯು ಫಾರ್ವರ್ಡ್‌ ಕೊಲಿಶನ್‌ ವಾರ್ನಿಂಗ್‌ ಅಂಡ್‌ ಅವೋಯ್ಡೆನ್ಸ್‌, ಡ್ರೈವರ್‌ ಅಟೆಂಟಿವ್‌ ನೆಸ್‌ ಅಲರ್ಟ್‌, ರಿಯರ್‌ ಕ್ರಾಸ್‌ ಟ್ರಾಫಿಕ್‌ ಅಲರ್ಟ್‌, ಮತ್ತು ಹೈ ಬೀಮ್‌ ಅಸಿಸ್ಟ್‌ ಸೇರಿದಂತೆ 17 ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನು ಸಹ ಓದಿರಿ: 2023ರಲ್ಲಿ ಪರಿಷ್ಕರಣೆಗೆ ಒಳಗಾದ ರೂ. 30 ಲಕ್ಷದೊಳಗಿನ ಕಾರುಗಳು

ಟಾಟಾ ಹ್ಯಾರಿಯರ್‌ - ಸಫಾರಿ ಫೇಸ್‌ ಲಿಫ್ಟ್‌ ಗಳು

  • ಅಕ್ಟೋಬರ್ 2023‌ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ SUVಗಳಿಗೆ ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿದೆ. ಎರಡೂ ವಾಹನಗಳ ಒಳಗಡೆ ಮತ್ತು ಹೊರಗಡೆಯ ನೋಟದಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ಸಾಕಷ್ಟು ಹೊಸ ತಂತ್ರಜ್ಞಾನಗಳನ್ನು ಸಹ ಸೇರಿಸಲಾಗಿದೆ. ಆದರೆ, ಅಟೋ ಎಕ್ಸ್ಪೊ 2023ರಲ್ಲಿ ರೆಡ್‌ ಡಾರ್ಕ್‌ ಎಡಿಷನ್‌ ಗಳನ್ನು ಬಹಿರಂಗಗೊಳಿಸಿದ ಸಂದರ್ಭದಲ್ಲಿ ಅವುಗಳಲ್ಲಿ ಆಗಲೇ ADAS ತಂತ್ರಜ್ಞಾನವನ್ನು ನೀಡಲಾಗಿತ್ತು.

  • ಎರಡೂ SUV ಗಳು ಈಗ ತಮ್ಮ ಹೈಯರ್‌ ಸ್ಪೆಕ್‌ ಅಡ್ವೆಂಚರ್+A ವೇರಿಯಂಟ್‌ ನಿಂದ ಆರಂಭಗೊಂಡು ADAS ಅನ್ನು ಪಡೆದಿವೆ.

  • ಅವುಗಳ ADAS ಘಟಕವು ಅಟೋನೋಮಸ್‌ ಎಮರ್ಜೆನ್ಸಿ ಬ್ರೇಕಿಂಗ್ (AEB),‌ ರಿಯರ್‌ ಕ್ರಾಸ್‌ ಟ್ರಾಫಿಕ್‌ ಅಲರ್ಟ್,‌ ಟ್ರಾಫಿಕ್‌ ಸಂಕೇತ ಗುರುತಿಸುವುದು ಮತ್ತು ಲೇನ್‌ ಡಿಪಾರ್ಚರ್‌ ವಾರ್ನಿಂಗ್‌ ಅನ್ನು ಒಳಗೊಂಡಿದೆ. ಎರಡೂ SUVಗಳು ಸದ್ಯವೇ ಇನ್ನಷ್ಟು ಹೊಸತನವನ್ನು ಪಡೆಯಲಿದ್ದು, ಲೇನ್‌ ಕೀಪ್‌ ಅಸಿಸ್ಟ್‌ ಮತ್ತು ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಇತ್ಯಾದಿಗಳನ್ನು ಸಹ ಪಡೆಯಲಿವೆ.

ಭಾರತದಲ್ಲಿ 2023ರಲ್ಲಿ ADAS ತಂತ್ರಜ್ಞಾನವನ್ನು ಪಡೆದ ರೂ. 30 ಲಕ್ಷದೊಳಗಿನ ಕಾರುಗಳಿವು. ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: MG ಹೆಕ್ಟರ್ ಆನ್‌ ರೋಡ್‌ ಬೆಲೆ

r
ಅವರಿಂದ ಪ್ರಕಟಿಸಲಾಗಿದೆ

rohit

  • 63 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ ಹೆಕ್ಟರ್

Read Full News

explore similar ಕಾರುಗಳು

ಎಂಜಿ ಹೆಕ್ಟರ್ ಪ್ಲಸ್

ಡೀಸಲ್15.58 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಎಂಜಿ ಹೆಕ್ಟರ್

ಡೀಸಲ್13.79 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ