ಟಾಟಾ ನೆಕ್ಸಾನ್ ಇವಿ

Rs.12.49 - 17.19 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
TATA celebrates ‘Festival of Cars’ with offers upto ₹2 Lakh.

ಟಾಟಾ ನೆಕ್ಸಾನ್ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್390 - 489 km
ಪವರ್127 - 148 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ40.5 - 46.08 kwh
ಚಾರ್ಜಿಂಗ್‌ time ಡಿಸಿ40min-(10-100%)-60kw
ಚಾರ್ಜಿಂಗ್‌ time ಎಸಿ6h 36min-(10-100%)-7.2kw
ಬೂಟ್‌ನ ಸಾಮರ್ಥ್ಯ350 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ನೆಕ್ಸಾನ್ ಇವಿ ಇತ್ತೀಚಿನ ಅಪ್ಡೇಟ್

ಟಾಟಾ ನೆಕ್ಸಾನ್‌ ಇವಿ  ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಟಾಟಾ ನೆಕ್ಸಾನ್ ಇವಿ ಇದೀಗ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಒಂದೆರಡು ಹೊಸ ಫೀಚರ್‌ಗಳನ್ನು ಪಡೆದುಕೊಂಡಿದೆ. ಟಾಟಾ ಈ ಸಂಪೂರ್ಣ-ಎಲೆಕ್ಟ್ರಿಕ್ ಸಬ್-4ಎಮ್‌ ಎಸ್‌ಯುವಿಯ ರೆಡ್ ಡಾರ್ಕ್ ಎಡಿಷನ್‌ ಅನ್ನು ಸಹ ಬಿಡುಗಡೆ ಮಾಡಿದೆ.

ಟಾಟಾ ನೆಕ್ಸಾನ್ ಇವಿಯ ಬೆಲೆ ಎಷ್ಟು?

ಟಾಟಾ ನೆಕ್ಸಾನ್‌ನ ಎಂಟ್ರಿ-ಲೆವೆಲ್ ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್ (ಎಂಆರ್) ವೇರಿಯೆಂಟ್‌ 12.49 ಲಕ್ಷ ರೂ.ನಿಂದ(ಪರಿಚಯಾತ್ಮಕ ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ ಮತ್ತು ಇದರ ಟಾಪ್‌ ಮೊಡೆಲ್‌ ಆಗಿರುವ ಎಂಪವರ್ಡ್ ಪ್ಲಸ್ 45 ನ ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ 16.99 ಲಕ್ಷ ರೂ.ನಷ್ಟಿದೆ. ಟಾಟಾ ವಿಸ್ತೃತ ಬ್ಯಾಟರಿ ಪ್ಯಾಕ್‌ನೊಂದಿಗೆ (45 ಕಿ.ವ್ಯಾಟ್‌) ಎರಡು ಹೊಸ ವೇರಿಯೆಂಟ್‌ಗಳನ್ನು ಸೇರಿಸಿದೆ, ಅವುಗಳೆಂದರೆ ಎಂಪವರ್ಡ್ ಪ್ಲಸ್ 45 ರೆಡ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45.

ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಟಾಟಾ ನೆಕ್ಸಾನ್ ಇವಿ ಒಟ್ಟು 12 ವೇರಿಯೆಂಟ್‌ಗಳಲ್ಲಿ ಬರುತ್ತದೆ. ವೇರಿಯೆಂಟ್‌ಗಳನ್ನು ಕ್ರೀಯೆಟಿವ್‌, ಫಿಯರ್‌ಲೆಸ್‌ ಮತ್ತು ಎಂಪವರ್ಡ್‌ ಎಂದು ವರ್ಗೀಕರಿಸಲಾಗಿದೆ. ಕೊನೆಯ ಎರಡು ವೇರಿಯೆಂಟ್‌ಗಳಾದ ಎಂಪವರ್ಡ್ ಪ್ಲಸ್ ಎಲ್ಆರ್ ಡಾರ್ಕ್ ಮತ್ತು ಎಂಪವರ್ಡ್ ಪ್ಲಸ್ 45 ಹೆಚ್ಚು ರೇಂಜ್‌ ಮತ್ತು ಫೀಚರ್‌ಗಳನ್ನು ಹೊಂದಿದೆ. 

ಟಾಟಾ ನೆಕ್ಸಾನ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಫೀಚರ್‌ ಕುರಿತ ದೊಡ್ಡ ಅಪ್‌ಡೇಟ್ ಏನೆಂದರೆ, ನೆಕ್ಸಾನ್‌ ಇವಿ ಈಗ ಪನರೋಮಿಕ್‌ ಸನ್‌ರೂಫ್ ಅನ್ನು ಮತ್ತು ಟಾಟಾ ನೆಕ್ಸಾನ್ ಇವಿಯಲ್ಲಿ ಹೆಚ್ಚಿನ ಕಂಫರ್ಟ್ ಮತ್ತು ಅನುಕೂಲತೆಯ ಫೀಚರ್‌ಗಳಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕನೆಕ್ಟೆಡ್‌ ಕಾರ್ ಟೆಕ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್‌ನೊಂದಿಗೆ ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಟಾಟಾ ನೆಕ್ಸಾನ್ ಇವಿ ಎಷ್ಟು ವಿಶಾಲವಾಗಿದೆ?

ಟಾಟಾ ನೆಕ್ಸಾನ್‌ ಇವಿಯಲ್ಲಿ ಐದು ಜನರಿರುವ ಸರಾಸರಿ ಗಾತ್ರದ ಕುಟುಂಬವು ಪ್ರಯಾಣಿಸಬಹುದು. ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಮೊಣಕಾಲು ಇಡುವಲ್ಲಿ ಸಾಕಷ್ಟು ಹೆಚ್ಚಿನ ಜಾಗ ಮತ್ತು ಸೀಟ್‌ನ ಕುಶನ್‌ ಸಹ  ಸಮರ್ಪಕವಾಗಿದೆ. ಬ್ಯಾಟರಿ ಪ್ಯಾಕ್ ಅನ್ನು ಕಾರಿನ ಕೆಳಭಾಗದಲ್ಲಿ ಇರಿಸುವುದರಿಂದ ನೀವು ಮೊಣಕಾಲುಗಳ ಮೇಲೆ ಕುಳಿತುಕೊಂಡಂತೆ ಭಾಸವಾಗುವುದು ಇದರ ಅನಾನುಕೂಲತೆಗಳಲ್ಲಿ ಒಂದಾಗಿದೆ. ಇದು ವಿಶೇಷವಾಗಿ ಲಾಂಗ್ ರೇಂಜ್ (LR) ಆವೃತ್ತಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಟಾಟಾ ನೆಕ್ಸಾನ್ ಇವಿಯು ಉತ್ತಮ ಆಕಾರವನ್ನು ಹೊಂದಿರುವ 350-ಲೀಟರ್ ಬೂಟ್‌ನೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಫ್ರಂಕ್ ಅನ್ನು ಕೂಡ ಪಡೆಯುತ್ತದೆ. ನೀವು ಅದರಲ್ಲಿ ನಾಲ್ಕು ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಇಡಬಹುದು. ಇದಲ್ಲದೆ, ಹಿಂಭಾಗದ ಸೀಟುಗಳನ್ನು 60:40 ಅನುಪಾತದಲ್ಲಿ ಮಡಚಬಹುದು, ಹಿಗಾಗಿ ಹೆಚ್ಚಿನ ಬೂಟ್ ಜಾಗ ಬೇಕಾಗುವ ಸೀಟ್‌ಗಳನ್ನು ಮಡಚಬಹುದು. 

ಟಾಟಾ ನೆಕ್ಸಾನ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಟಾಟಾ ನೆಕ್ಸಾನ್ ಇವಿಯನ್ನು ಮಿಡಿಯಮ್‌ ರೇಂಜ್‌ ಮತ್ತು ಲಾಂಗ್‌ ರೇಂಜ್‌ ಎಂಬ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

  • ಮಿಡಿಯಮ್‌ ರೇಂಜ್‌(MR): ಈ ಆವೃತ್ತಿಯು 129 ಪಿಎಸ್‌/215 ಎನ್‌ಎಮ್‌ ಇ-ಮೋಟಾರ್ ಅನ್ನು ಚಾಲನೆ ಮಾಡುವ 30 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಪ್ಯಾಕ್ ಮಾಡುತ್ತದೆ. ನೀವು ವೇಗವನ್ನು ಹೆಚ್ಚಿಸಲು ಬಯಸಿದಂತೆ, ಈ ಆವೃತ್ತಿಯು 0-100 kmph ಅನ್ನು 9.2 ಸೆಕೆಂಡುಗಳಲ್ಲಿ ಮಾಡುತ್ತದೆ. 

  • ಲಾಂಗ್ ರೇಂಜ್ (ಎಲ್‌ಆರ್‌): ಎಲೆಕ್ಟ್ರಿಕ್ ಎಸ್‌ಯುವಿಯ ಈ ಮೊಡೆಲ್‌ ಈಗ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ, ಅವುಗಳೆಂದರೆ, 40.5 ಕಿ.ವ್ಯಾಟ್‌ ಮತ್ತು ಹೊಸ 45 ಕಿ.ವ್ಯಾಟ್‌. ಎರಡೂ ಬ್ಯಾಟರಿ ಪ್ಯಾಕ್‌ಗಳು 143 ಪಿಎಸ್‌/215 ಎನ್‌ಎಮ್‌ ಔಟ್‌ಪುಟ್‌ನೊಂದಿಗೆ ಫ್ರಂಟ್-ವೀಲ್ ಡ್ರೈವ್ ಇ-ಮೋಟರ್‌ನೊಂದಿಗೆ ಬರುತ್ತವೆ. ಹೆಚ್ಚುವರಿ ಶಕ್ತಿಯಿಂದಾಗಿ, ಈ ವೇರಿಯೆಂಟ್‌ MR ಆವೃತ್ತಿಗಿಂತ ಸ್ವಲ್ಪ ವೇಗವಾಗಿದ್ದು, ಕೇವಲ 8.9 ಸೆಕೆಂಡುಗಳಲ್ಲಿ 100 kmph ಅನ್ನು ಮುಟ್ಟುತ್ತದೆ.

ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ, ಎರಡೂ ಆವೃತ್ತಿಗಳು ಸಿಂಗಲ್‌-ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತವೆ.

ಒಮ್ಮೆ ಫುಲ್‌ ಚಾರ್ಜ್‌ ಮಾಡಿದಾಗ ಟಾಟಾ ನೆಕ್ಸಾನ್ ಇವಿಯ ರೇಂಜ್‌ ಎಷ್ಟು ?

ಟಾಟಾ ನೆಕ್ಸಾನ್‌ಗಾಗಿ 30 ಕಿ.ವ್ಯಾಟ್‌ ಬ್ಯಾಟರಿಯ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಮಿಡ್‌ ರೇಂಜ್‌ಗಾಗಿ 325 ಕಿಮೀ ಎಂದು ರೇಟ್ ಮಾಡಲಾಗಿದೆ. 40.5 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಾಗಿ, ಕ್ಲೈಮ್ ಮಾಡಲಾದ ರೇಂಜ್‌ 465 ಕಿಮೀ, ಮತ್ತು 45 ಕಿ.ವ್ಯಾಟ್‌ ಬ್ಯಾಟರಿಗೆ ಕ್ಲೈಮ್ ಮಾಡಲಾದ ರೇಂಜ್‌ 489 ಕಿಮೀ. ಆಗಿದೆ. ಭಾರತೀಯ ರಸ್ತೆಯಲ್ಲಿ, MR ಆವೃತ್ತಿಯು ಸುಮಾರು 200 ಕಿ.ಮೀ ನಿಂದ 220 ಕಿ.ಮೀ ವರೆಗೆ ಸಾಗುತ್ತದೆ ಎಂದು ನೀವು ನಿರೀಕ್ಷಿಸಬಹುದು, ಆದರೆ ನೆಕ್ಸಾನ್ ಇವಿ ಎಲ್‌ಆರ್‌ 350 ಕಿಮೀ ನಿಂದ 370 ಕಿಮೀ ದೂರದವರೆಗೆ ತಲುಪುತ್ತದೆ. ಚಾಲನಾ ಶೈಲಿ, ಸುತ್ತುವರಿದ ತಾಪಮಾನ ಮತ್ತು ಬ್ರೇಕ್ ಶಕ್ತಿಯ ಪುನರುತ್ಪಾದನೆಯ ಮಟ್ಟವನ್ನು ಆಧರಿಸಿ ನಿಜವಾದ ನೈಜ ಪ್ರಪಂಚದ ರೇಂಜ್‌ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. 

ಟಾಟಾ ನೆಕ್ಸಾನ್ ಇವಿ ಎಷ್ಟು ಸುರಕ್ಷಿತವಾಗಿದೆ?

ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನಂತಹ ಸುರಕ್ಷತಾ ಪ್ಯಾಕೇಜ್‌ಗಳೊಂದಿಗೆ ಟಾಟಾ ನೆಕ್ಸಾನ್ ಇವಿ ಲೋಡ್ ಆಗುತ್ತದೆ.

ಭಾರತ್ ಎನ್‌ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್ ಮಾಡಿದ ನಂತರ ಟಾಟಾ ನೆಕ್ಸಾನ್ ಇವಿ ಪೂರ್ಣ ಫೈವ್‌ ಸ್ಟಾರ್‌ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ತಿಳಿಯುವುದು ಸಮಾಧಾನಕರವಾಗಿದೆ.

ಟಾಟಾ ನೆಕ್ಸಾನ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?

ಟಾಟಾ ನೆಕ್ಸಾನ್‌ ಇವಿ ಏಳು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಕ್ರಿಯೇಟಿವ್ ಓಷನ್, ಫಿಯರ್‌ಲೆಸ್ ಪರ್ಪಲ್, ಎಂಪವರ್ಡ್ ಆಕ್ಸೈಡ್ ಮತ್ತು ಓನಿಕ್ಸ್ ಬ್ಲಾಕ್.

ಕ್ರಿಯೇಟಿವ್ ಓಷನ್, ಎಂಪವರ್ಡ್ ಆಕ್ಸೈಡ್ ಮತ್ತು ಫಿಯರ್‌ಲೆಸ್ ಪರ್ಪಲ್‌ನಂತಹ ಬಣ್ಣಗಳು ವೇರಿಯೆಂಟ್‌ಗಳಿಗೆ ನಿರ್ದಿಷ್ಟವಾಗಿವೆ ಎಂಬುದನ್ನು ಗಮನಿಸಿ. ಓನಿಕ್ಸ್ ಬ್ಲ್ಯಾಕ್ ಅನ್ನು #ಡಾರ್ಕ್ ವೇರಿಯೆಂಟ್‌ ಆಗಿ ಮಾರಾಟ ಮಾಡಲಾಗಿದೆ ಮತ್ತು ಇದು ಟಾಪ್‌-ಎಂಡ್‌ ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ.

ನಾವು ವಿಶೇಷವಾಗಿ ಇಷ್ಟಪಟ್ಟದ್ದು:

ಎಂಪವರ್ಡ್ ಆಕ್ಸೈಡ್: ಈ ವರ್ಣವು ಆಫ್-ವೈಟ್ ಮತ್ತು ಗ್ರೇ ನಡುವಿನ ಮಧ್ಯದ ಬಣ್ಣವಾಗಿದೆ. ಅದರಲ್ಲಿರುವ ಮುತ್ತಿನ ಚುಕ್ಕೆಗಳು ಹೆಚ್ಚುವರಿ ಹೊಳಪನ್ನು ನೀಡುತ್ತದೆ.

ಓನಿಕ್ಸ್ ಬ್ಲ್ಯಾಕ್: ನಿಮಗೆ ಸ್ಟೆಲ್ತ್ ಜೊತೆಗೆ ಸ್ಪೋರ್ಟಿ ಏನಾದರೂ ಬೇಕಾದರೆ, ಇದನ್ನು ಆಯ್ಕೆ ಮಾಡಬಹುದು. ಈ ಬಣ್ಣವನ್ನು ಆರಿಸಿಕೊಂಡರೆ ನೀವು ಸಂಪೂರ್ಣವಾಗಿ ಕಪ್ಪು ಬಣ್ಣದ ಇಂಟಿರಿಯರ್‌ ಅನ್ನು ಪಡೆಯುತ್ತೀರಿ ಎಂದರ್ಥ! ಅದು ತುಂಬಾ ಸೊಗಸಾಗಿ ಕಾಣುತ್ತದೆ!

ನಾವು ಟಾಟಾ ನೆಕ್ಸಾನ್‌ ಇವಿಯನ್ನು ಖರೀದಿಸಬಹುದೇ ? 

ಉತ್ತರ ಹೌದು! ನಿಮ್ಮ ದೈನಂದಿನ ಬಳಕೆಯ ಮಿತಿಯ ಬಗ್ಗೆ ಮೊದಲೇ ಪ್ಲ್ಯಾನ್‌ ಆಗಿದ್ದರೆ ಮತ್ತು ಮನೆಯಲ್ಲಿ ಚಾರ್ಜರ್ ಅನ್ನು ಫಿಕ್ಸ್‌ ಮಾಡುವ ಆಯ್ಕೆಯನ್ನು ಹೊಂದಿದ್ದರೆ ನೀವು ಟಾಟಾ ನೆಕ್ಸಾನ್‌ ಇವಿಯನ್ನು ಪರಿಗಣಿಸಬಹುದು. ಚಾಲನೆಯು ಇದರ ರಿಯಲ್‌ ಟೈಮ್‌ ರೇಂಜ್‌ನಷ್ಟು ಉತ್ತಮವಾಗಿದ್ದರೆ ಪ್ರತಿ ಕಿಲೋಮೀಟರ್ ಡ್ರೈವಿಂಗ್ ವೆಚ್ಚದ ಉಳಿತಾಯವನ್ನು ಬಹುಬೇಗನೇ ಮರುಪಡೆಯಬಹುದು. ಅಲ್ಲದೆ, ನೆಕ್ಸಾನ್ ಅದರ ಬೆಲೆಗೆ ಸಾಕಷ್ಟು ಫೀಚರ್‌ಗಳನ್ನು ಪ್ಯಾಕ್ ಮಾಡುತ್ತದೆ, ಐದು ಜನರಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ ಮತ್ತು ಆರಾಮದಾಯಕವಾಗಿದೆ.

ಇದಕ್ಕೆ ಪ್ರತಿಸ್ಪರ್ಧಿಗಳು ಯಾರು ?

 ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿಯ ಯ ಏಕೈಕ ನೇರ ಪ್ರತಿಸ್ಪರ್ಧಿ ಎಂದರೆ ಅದು ಮಹೀಂದ್ರಾ ಎಕ್ಸ್‌ಯುವಿ400 ಇವಿ ಆಗಿದೆ, ಇದು ದೊಡ್ಡದಾಗಿದೆ ಮತ್ತು ಉತ್ತಮ ಸ್ಥಳಾವಕಾಶ ಮತ್ತು ಬೂಟ್ ಸ್ಥಳವನ್ನು ನೀಡುತ್ತದೆ. ಆದರೆ, ಮಹೀಂದ್ರಾವು ಫೀಚರ್‌ ಅನ್ನು ಲೋಡ್ ಮಾಡಿಲ್ಲ ಮತ್ತು ಟಾಟಾದಂತೆ ಫ್ಯೂಚರಿಸ್ಟಿಕ್ ಆಗಿ ಕಾಣುತ್ತಿಲ್ಲ. ನಿಮ್ಮ ಬಜೆಟ್ ಅನ್ನು ನೀವು ವಿಸ್ತರಿಸಬಹುದಾದರೆ, ನೀವು ಎಮ್‌ಜಿ ಜೆಡ್‌ಎಸ್‌ ಇವಿಯನ್ನು ಸಹ ಪರಿಗಣಿಸಬಹುದು.

 ಇದೇ ಬೆಲೆಗೆ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹೋಂಡಾ ಎಲಿವೇಟ್, ವೋಕ್ಸ್‌ವ್ಯಾಗನ್‌ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳ ICE ಆವೃತ್ತಿಗಳನ್ನು ಪರಿಗಣಿಸಬಹುದು.

ಮತ್ತಷ್ಟು ಓದು
ಟಾಟಾ ನೆಕ್ಸಾನ್ ಇವಿ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ನೆಕ್ಸಾನ್‌ ಇವಿ ಕ್ರಿಯೇಟಿವ್ ಪ್ಲಸ್ mr(ಬೇಸ್ ಮಾಡೆಲ್)30 kwh, 275 km, 127 ಬಿಹೆಚ್ ಪಿ2 months waitingRs.12.49 ಲಕ್ಷ*view ಫೆಬ್ರವಾರಿ offer
ನೆಕ್ಸಾನ್‌ ಇವಿ ಫಿಯರ್‌ಲೆಸ್ mr30 kwh, 275 km, 127 ಬಿಹೆಚ್ ಪಿ2 months waitingRs.13.29 ಲಕ್ಷ*view ಫೆಬ್ರವಾರಿ offer
ನೆಕ್ಸಾನ್‌ ಇವಿ ಫಿಯರ್‌ಲೆಸ್ ಪ್ಲಸ್ mr30 kwh, 275 km, 127 ಬಿಹೆಚ್ ಪಿ2 months waitingRs.13.79 ಲಕ್ಷ*view ಫೆಬ್ರವಾರಿ offer
ನೆಕ್ಸಾನ್‌ ಇವಿ ಕ್ರಿಯೇಟಿವ್ 4546.08 kwh, 489 km, 148 ಬಿಹೆಚ್ ಪಿ2 months waitingRs.13.99 ಲಕ್ಷ*view ಫೆಬ್ರವಾರಿ offer
ನೆಕ್ಸಾನ್‌ ಇವಿ ಫಿಯರ್‌ಲೆಸ್ ಪ್ಲಸ್ ಎಸ್‌ mr30 kwh, 275 km, 127 ಬಿಹೆಚ್ ಪಿ2 months waitingRs.14.29 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ನೆಕ್ಸಾನ್ ಇವಿ comparison with similar cars

ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಮಹೀಂದ್ರ XUV400 EV
Rs.16.74 - 17.69 ಲಕ್ಷ*
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.14 - 19.99 ಲಕ್ಷ*
Rating4.4172 ವಿರ್ಮಶೆಗಳುRating4.3114 ವಿರ್ಮಶೆಗಳುRating4.776 ವಿರ್ಮಶೆಗಳುRating4.7115 ವಿರ್ಮಶೆಗಳುRating4.5255 ವಿರ್ಮಶೆಗಳುRating4.286 ವಿರ್ಮಶೆಗಳುRating4.6648 ವಿರ್ಮಶೆಗಳುRating4.4373 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Battery Capacity40.5 - 46.08 kWhBattery Capacity25 - 35 kWhBattery Capacity38 kWhBattery Capacity45 - 55 kWhBattery Capacity34.5 - 39.4 kWhBattery Capacity29.2 kWhBattery CapacityNot ApplicableBattery CapacityNot Applicable
Range390 - 489 kmRange315 - 421 kmRange331 kmRange502 - 585 kmRange375 - 456 kmRange320 kmRangeNot ApplicableRangeNot Applicable
Charging Time56Min-(10-80%)-50kWCharging Time56 Min-50 kW(10-80%)Charging Time55 Min-DC-50kW (0-80%)Charging Time40Min-60kW-(10-80%)Charging Time6H 30 Min-AC-7.2 kW (0-100%)Charging Time57minCharging TimeNot ApplicableCharging TimeNot Applicable
Power127 - 148 ಬಿಹೆಚ್ ಪಿPower80.46 - 120.69 ಬಿಹೆಚ್ ಪಿPower134 ಬಿಹೆಚ್ ಪಿPower148 - 165 ಬಿಹೆಚ್ ಪಿPower147.51 - 149.55 ಬಿಹೆಚ್ ಪಿPower56.21 ಬಿಹೆಚ್ ಪಿPower99 - 118.27 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Airbags6Airbags6Airbags6Airbags6Airbags6Airbags2Airbags6Airbags2-6
GNCAP Safety Ratings5 StarGNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-
Currently Viewingನೆಕ್ಸಾನ್ ಇವಿ vs ಪಂಚ್‌ ಇವಿನೆಕ್ಸಾನ್ ಇವಿ vs ವಿಂಡ್ಸರ್‌ ಇವಿನೆಕ್ಸಾನ್ ಇವಿ vs ಕರ್ವ್‌ ಇವಿನೆಕ್ಸಾನ್ ಇವಿ vs XUV400 EVನೆಕ್ಸಾನ್ ಇವಿ vs ಇಸಿ3ನೆಕ್ಸಾನ್ ಇವಿ vs ನೆಕ್ಸಾನ್‌ನೆಕ್ಸಾನ್ ಇವಿ vs ಅರ್ಬನ್ ಕ್ರೂಸರ್ ಹೈ ರೈಡರ್
ಇಎಮ್‌ಐ ಆರಂಭ
Your monthly EMI
Rs.31,247Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

Recommended used Tata Nexon EV cars in New Delhi

ಟಾಟಾ ನೆಕ್ಸಾನ್ ಇವಿ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ದೊಡ್ಡದಾದ 12.3 "ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವಾಹನದಿಂದ ಲೋಡ್ ಚಾರ್ಜಿಂಗ್ ನಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ.
  • ಅತ್ಯುತ್ತಮ ಡ್ರೈವ್ ಅನುಭವ: ಹೆಚ್ಚು ಹೊಸ EV ಖರೀದಿದಾರ ಸ್ನೇಹಿ
  • ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳು: 30 ಕಿ.ವ್ಯಾಟ್ ಮತ್ತು 40.5 ಕಿ.ವ್ಯಾಟ್

ಟಾಟಾ ನೆಕ್ಸಾನ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ

ನೆಕ್ಸಾನ್ ಸಿಎನ್‌ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

By shreyash Jan 27, 2025
ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್‌ನ ಅನಾವರಣ

ನೆಕ್ಸಾನ್ ಇವಿ ಬಂಡೀಪುರ ಎಡಿಷನ್‌ ಈ ಎಸ್‌ಯುವಿಯ ಮತ್ತೊಂದು ರಾಷ್ಟ್ರೀಯ ಉದ್ಯಾನವನ ಆವೃತ್ತಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಹುಲಿಗಳಂತಹ ವನ್ಯಜೀವಿ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ

By shreyash Jan 17, 2025
ಟಾಟಾ Curvv EV ವರ್ಸಸ್‌ ಟಾಟಾ Nexon EV: ಯಾವುದು ವೇಗವಾಗಿ ಚಾರ್ಜ್‌ ಆಗುತ್ತದೆ ? ಇಲ್ಲಿದೆ ಉತ್ತರ..

ಕರ್ವ್‌ ಇವಿಯು ದೊಡ್ಡ 55 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಹಾಗೆಯೇ ನಾವು ಪರೀಕ್ಷಿಸಿದ ನೆಕ್ಸಾನ್‌ ಇವಿಯು 40.5 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು

By shreyash Oct 14, 2024
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಹೊಸ ಫೀಚರ್‌ಗಳನ್ನು ಪಡೆಯಲಿರುವ Tata Nexon EV

ಟಾಟಾ ನೆಕ್ಸಾನ್ ಇವಿಯನ್ನು ದೊಡ್ಡದಾದ 45 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್‌ ಅನ್ನು ಕ್ಲೈಮ್‌ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್‌ ಅನ್ನು ಸಹ ಬಿಡುಗಡೆ ಮಾ

By rohit Sep 24, 2024
ಭಾರತದಲ್ಲಿನ ಹೊಸ ಇವಿಗಳ ಮೈಲೇಜ್‌ನ ನಿಯಮಗಳ ವಿವರ, ಪ್ರಮುಖವಾಗಿ Tata ಇವಿಗಳ

ಕಾರು ತಯಾರಕರು ಈಗ ಪರಿಷ್ಕೃತ ರೇಂಜ್-ಟೆಸ್ಟ್ ಮಾನದಂಡಗಳ ಪ್ರಕಾರ ಸಿಟಿ ಮತ್ತು ಹೈವೇ ಟೆಸ್ಟ್ ಗಳಿಗೆ ಡ್ರೈವಿಂಗ್ ರೇಂಜ್ ಅನ್ನು ವರದಿ ಮಾಡಬೇಕಾಗುತ್ತದೆ.

By shreyash Sep 06, 2024

ಟಾಟಾ ನೆಕ್ಸಾನ್ ಇವಿ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಟಾಟಾ ನೆಕ್ಸಾನ್ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 390 - 489 km

ಟಾಟಾ ನೆಕ್ಸಾನ್ ಇವಿ ವೀಡಿಯೊಗಳು

  • Shorts
  • Full ವೀಡಿಯೊಗಳು
  • Nexon EV vs XUV 400 Hill climb test
    5 ತಿಂಗಳುಗಳು ago | 4 Views
  • Nexon EV Vs XUV 400 hill climb
    5 ತಿಂಗಳುಗಳು ago | 2 Views
  • Nexon EV Vs XUV 400 EV
    5 ತಿಂಗಳುಗಳು ago | 2 Views
  • Driver vs Fully loaded
    5 ತಿಂಗಳುಗಳು ago | 1 View

ಟಾಟಾ ನೆಕ್ಸಾನ್ ಇವಿ ಬಣ್ಣಗಳು

ಟಾಟಾ ನೆಕ್ಸಾನ್ ಇವಿ ಚಿತ್ರಗಳು

ಟಾಟಾ ನೆಕ್ಸಾನ್‌ ಇವಿ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

BabyCt asked on 5 Oct 2024
Q ) Tatta Nixan EV wone road prase at Ernakulam (kerala state)
Anmol asked on 24 Jun 2024
Q ) What is the ground clearance of Tata Nexon EV?
Devyani asked on 8 Jun 2024
Q ) What is the maximum torque of Tata Nexon EV?
Anmol asked on 5 Jun 2024
Q ) What are the available colour options in Tata Nexon EV?
Anmol asked on 28 Apr 2024
Q ) Is it available in Jodhpur?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ