Login or Register ಅತ್ಯುತ್ತಮ CarDekho experience ಗೆ
Login

2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು

published on ಡಿಸೆಂಬರ್ 22, 2023 10:02 am by anonymous for ಆಡಿ ಕ್ಯೂ3 ಸ್ಪೋರ್ಟ್ಬ್ಯಾಕ್

ಮಾರುತಿ ಆಫ್‌ ರೋಡರ್‌ ನಿಂದ ಹೋಂಡಾದ ಮೊದಲ ಕಾಂಪ್ಯಾಕ್ಟ್‌ SUV ಯ ತನಕ ಈ ವರ್ಷದಲ್ಲಿ ನಮ್ಮ ದೇಶದಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಹೊಸ ಕಾರುಗಳ ಪಟ್ಟಿ ಇಲ್ಲಿದೆ

2023 ಕೊನೆಯಾಗುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳತ್ತ ಒಮ್ಮೆ ದೃಷ್ಟಿ ಹಾಯಿಸೋಣ. ಕಳೆದ 12 ತಿಂಗಳುಗಳಲ್ಲಿ ಭಾರತದಲ್ಲಿ ಅನೇಕ ಕಾರುಗಳು ಬಿಡುಗಡೆಯಾಗಿದ್ದು, ಇವುಗಳಲ್ಲಿ ವಿವಿಧ ವಿಭಾಗಗಳಿಗೆ ಸೇರಿದ ಅನೇಕ ಮಾದರಿಗಳು ಒಳಗೊಂಡಿವೆ. ಅವುಗಳಲ್ಲಿ ಸಬ್-ಕಾಂಪ್ಯಾಕ್ಟ್ SUVಗಳು, ಪೀಪಲ್-ಮೂವರ್ MPVಗಳು, ಎಲೆಕ್ಟ್ರಿಕ್‌ ಕಾರುಗಳು, ಕೆಪೆಬಲ್‌ ಆಫ್‌ ರೋಡರ್‌ ಗಳು, ಸ್ಪೋರ್ಟ್ಸ್‌ ಕಾರುಗಳು ಇತ್ಯಾದಿಗಳು ಒಳಗೊಂಡಿವೆ. ಮಾರುಕಟ್ಟೆಗೆ ಮೊದಲ ಬಾರಿಗೆ ಪ್ರವೇಶಗೊಂಡ ಅಥವಾ ತಲೆಮಾರಿನ ನವೀಕರಣವನ್ನು ಕಂಡಿರುವ ಮಾದರಿಗಳನ್ನು ಮಾತ್ರವೇ ಪರಿಗಣಿಸಿದ್ದೇವೆ. ಹೀಗಾಗಿ ಪರಿಷ್ಕೃತ ವಾಹನಗಳನ್ನು ಪಡಿಗಣಿಸಿಲ್ಲ. ಇವುಗಳನ್ನು ಬೇರೆಯೇ ಪಟ್ಟಿಯಲ್ಲಿ ಚರ್ಚಿಸಲಾಗುವುದು.

2023ರಲ್ಲಿ ಬಿಡುಗಡೆಯಾದ ಹೊಸ ಕಾರುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಆಡಿ Q3 ಸ್ಪೋರ್ಟ್‌ ಬ್ಯಾಕ್‌

ಬೆಲೆ: ರೂ 52.97 ಲಕ್ಷ

ಆಡಿ Q3 ಸ್ಪೋರ್ಟ್‌ ಬ್ಯಾಕ್ ಮೂಲತಃ Q3 ಆಗಿದ್ದು ಹೊರಾಂಗಣದ ನೋಟದ ವಿಷಯದಲ್ಲಿ ಕೆಲವೊಂದು ವಿಶೇಷತೆಗಳನ್ನು ಹೊಂದಿದೆ. Q3 ಸ್ಪೋರ್ಟ್‌ ಬ್ಯಾಕ್‌ ಕಾರು ಪ್ರಮಾಣಿತ SUVಯ ಕೂಪೆ ಆವೃತ್ತಿಯಾಗಿದ್ದು, ಇದನ್ನು ಸಿಂಗಲ್‌ ವೇರಿಯಂಟ್‌ ನಲ್ಲಿ ನೀಡಲಾಗುತ್ತದೆ. ಇದು 2 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಮೂಲಕ ಬರುತ್ತಿದ್ದು, ಕ್ವಾಟ್ರೊ ಆಲ್‌ ವೀಲ್‌ ಡ್ರೈವ್‌ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿ ಒದಗಿಸುತ್ತದೆ. ಆಡಿ Q3 ಸ್ಪೋರ್ಟ್‌ ಬ್ಯಾಕ್‌ ಕುರಿತು ಇಲ್ಲಿ ಸಾಕಷ್ಟು ಮಾಹಿತಿ ಪಡೆಯಿರಿ.

BMW 7 ಸೀರೀಸ್ ಮತ್ತು i7

ಬೆಲೆ (BMW 7 ಸೀರೀಸ್) ರೂ. 1.78 ಕೋಟಿಯಿಂದ ರೂ. 1.81 ಕೋಟಿ

ಬೆಲೆ (BMW i7) ರೂ. 2.03 ಕೋಟಿಯಿಂದ ರೂ. 2.50 ಕೋಟಿ

BMW 7 ಸೀರೀಸ್ ಮತ್ತು BMW i7 ಇವೆರಡೂ ಕಾರುಗಳು ಐಷಾರಾಮಕ್ಕೆ ಸಂಬಂಧಿಸಿವೆ. i7 ವಾಹನವು ಎದ್ದು ಕಾಣುವ ಹೊರಾಂಗಣ ಶೈಲಿ, ಐಷಾರಾಮಿ ಒಳಾಂಗಣ ಮತ್ತು ಡ್ಯಾಶ್‌ ಬೋರ್ಡ್‌ ನಲ್ಲಿ ದೊಡ್ಡದಾದ ವಕ್ರಾಕಾರದ ಡಿಸ್ಪ್ಲೇಯನ್ನು ಹೊಂದಿದೆ. ಹಿಂಭಾಗದ ಪ್ರಯಾಣಿಕರಿಗಾಗಿ 31.3 ಇಂಚಿನ 8K ಡಿಸ್ಪ್ಲೇಯನ್ನು ಒದಗಿಸಲಾಗಿದ್ದು ಇದು ಮೇಲ್ಗಡೆಯಿಂದ ಕೆಳಗಡೆಗೆ ಸರಿಯುತ್ತದೆ ಮಾತ್ರವಲ್ಲದೆ ಥಿಯೇಟರ್‌ ನಂತಹ ಅನುಭವವನ್ನು ನೀಡುತ್ತದೆ. ಹೊಸ BMW 7 ಸೀರೀಸ್‌ ಕುರಿತು ಇದರ ಬಿಡುಗಡೆಯ ವರದಿಯನ್ನು ಓದಿರಿ.

BMW M2

ಬೆಲೆ: ರೂ 99.90 ಲಕ್ಷ

ಎರಡನೇ ತಲೆಮಾರಿನ BMW M2 ಅನ್ನು ಇದರ ಜಾಗತಿಕ ಬಿಡುಗಡೆಯ ತಕ್ಷಣವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಎರಡು ಬಾಗಿಲುಗಳ ಈ ಸ್ಪೋರ್ಟ್‌ ಕಾರು, M3 ಮತ್ತು M4 ಜೊತೆಗೆ ಹಂಚಿಕೊಳ್ಳಲಾದ 3 ಲೀಟರ್‌ ಇನ್‌ ಲೈನ್‌ -6 ಎಂಜಿನ್‌ ಅನ್ನು ಹೊಂದಿದ್ದು, ಇದು ಸ್ವಲ್ಪ ಕಡಿಮೆ ಪ್ರಮಾಣದ ಸ್ಟೇಟ್‌ ಆಫ್‌ ಟ್ಯೂನ್‌ ಅನ್ನು ಹೊಂದಿದೆ. ಆದರೆ ಈ M2 ವಾಹನದ ವಿಶೇಷತೆ ಎಂದರೆ ನೀವು ಇದನ್ನು 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಆರ್ಡರ್‌ ಮಾಡಬಹುದು. BMW M2 ಕುರಿತು ಇನ್ನಷ್ಟು ಮಾಹಿತಿ ಪಡೆಯುವುದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿರಿ.

BMW X1, iX1

ಬೆಲೆ (BMW X1) ರೂ. 48.90 ಲಕ್ಷದಿಂದ ರೂ. 51.60 ಲಕ್ಷ

ಬೆಲೆ (BMW iX1) ರೂ 66.90 ಲಕ್ಷ

ಮೂರನೇ ತಲೆಮಾರಿನ BMW X1 ವಾಹನವು ಜಾಗತಿಕ ಬಿಡುಗಡೆಯ ನಂತರ ನಮ್ಮ ದೇಶಕ್ಕೆ ಕಾಲಿಟ್ಟಿದೆ. ಆರಂಭಿಕ ಹಂತದ ಐಷಾರಾಮಿ SUV ಯು ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವುದರಿಂದ ಜರ್ಮನ್‌ ಕಾರು ತಯಾರಕ ಸಂಸ್ಥೆಗೆ ಅತ್ಯಂತ ಪ್ರಮುಖವೆನಿಸಿದೆ. ಇದು ಸಾಕಷ್ಟು ವಿಕಸಿತ ಹೊರಾಂಗಣಗಳು ಮತ್ತು ಸಂಪೂರ್ಣ ಹೊಸ ಒಳಾಂಗಣಗಳೊಂದಿಗೆ ಬರಲಿದೆ. ಇದೇ ವರ್ಷದಲ್ಲಿ ನಂತರ BMW iX1 ಅನ್ನು ಬಿಡುಗಡೆ ಮಾಡಲಾಗಿದ್ದು - ಇದು X1 ನ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯಾಗಿದ್ದು ಅದೇ ರೀತಿಯ ಶೈಲಿಯನ್ನು ಹೊಂದಿದೆ. X1 ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿರಿ.

ಸಿಟ್ರಾನ್ C3 ಏರ್‌ ಕ್ರಾಸ್‌

ಬೆಲೆ: ರೂ. 9.99 ಲಕ್ಷದಿಂದ ರೂ. 12.54 ಲಕ್ಷ

ಸಿಟ್ರಾನ್‌ C3 ಏರ್‌ ಕ್ರಾಸ್ ವಾಹನವು ಕಾಂಪ್ಯಾಕ್ಟ್‌ SUV ವಿಭಾಗದಲ್ಲಿ ಮೊದಲ 3 ಸಾಲುಗಳ ಆಸನ ವ್ಯವಸ್ಥೆ ಹೊಂದಿರುವ ಮೊದಲ ಮಾದರಿ ಎನಿಸಿದೆ. ಅಲ್ಲದೆ ಅಗತ್ಯವಿಲ್ಲದಿದ್ದಾಗ ಕೊನೆಯ ಸಾಲಿನ ಸೀಟುಗಳನ್ನು ತೆಗೆದು ಹೆಚ್ಚಿನ ಬೂಟ್‌ ಸ್ಥಳವನ್ನು ಸೃಷ್ಟಿಸಿಕೊಳ್ಳಬಹುದು ಅಥವಾ 5 ಸೀಟುಗಳ ವಾಹನವಾಗಿಯೂ ಇದನ್ನು ಪರಿವರ್ತಿಸಬಹುದು. ಅಲ್ಲದೆ ಫ್ರೆಂಚ್‌ ಕಾರು ತಯಾರಕ ಸಂಸ್ಥೆಯು C3 ಏರ್‌ ಕ್ರಾಸ್‌ ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ 3 ಸಾಲುಗಳ SUV ಯಾಗಿ ಪರಿಚಯಿಸಿದೆ. ಹೆಚ್ಚಿನ ವಿವರಗಳಿಗಾಗಿ C3 ಏರ್‌ ಕ್ರಾಸ್‌ ಕುರಿತ ವಿಸ್ತೃತ ಅವಲೋಕನವನ್ನು ಇಲ್ಲಿ ಓದಿರಿ.

ಸಿಟ್ರಾನ್ eC3

ಬೆಲೆ: ರೂ. 11.61 ಲಕ್ಷದಿಂದ ರೂ. 12.79 ಲಕ್ಷ

eC3 ವಾಹನವು ಭಾರತದಲ್ಲಿ ಸಿಟ್ರಾನ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್‌ ಕಾರು ಎನಿಸಿದ್ದು ಮೊದಲ ಮಿಡ್‌ ಸೈಜ್‌ ಎಲೆಕ್ಟ್ರಿಕ್‌ ಹ್ಯಾಚ್‌ ಬ್ಯಾಕ್‌ ಎನಿಸಿದೆ. ಇದು ತನ್ನ ICE ಚಾಲಿತ ಆವೃತ್ತಿಯಂತೆಯೇ ಕಾಣುತ್ತಿದ್ದು 57 PS ಎಲೆಕ್ಟ್ರಿಕ್‌ ಮೋಟಾರ್‌ ಮತ್ತು 29.2 kWh ಬ್ಯಾಟರಿ ಪ್ಯಾಕ್‌ ಜೊತೆಗೆ ಬರುತ್ತದೆ. ಆದರೆ eC3 ವಾಹನವು ದೊಡ್ಡದಾದ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ ಹೊರತುಪಡಿಸಿ ಹೆಚ್ಚಿನ ಪ್ರೀಮಿಯಂ ಕ್ಯಾಬಿನ್‌ ಅನುಕೂಲತೆಗಳನ್ನು ಒದಗಿಸುವುದಿಲ್ಲ. eC3 ವಾಹನವು 320 km ನಷ್ಟು ಶ್ರೇಣಿಯನ್ನು ಒದಗಿಸಲಿದೆ. ಸಿಟ್ರಾನ್‌ eC3 ಕುರಿತು ವಿಸ್ತೃತವಾಗಿ ನೀವಿಲ್ಲಿ ಅರಿತುಕೊಳ್ಳಬಹುದು.

ಮಹೀಂದ್ರಾ XUV400

ಬೆಲೆ: ರೂ. 15.99 ಲಕ್ಷದಿಂದ ರೂ. 19.39 ಲಕ್ಷ

XUV400 ವಾಹನವು ಭಾರತೀಯ ಕಾರು ತಯಾರಕ ಸಂಸ್ಥೆಯ ದೀರ್ಘ ಶ್ರೇಣಿಯ ಮೊದಲ EV ಯಾಗಿದೆ. ಇದು ಅತ್ಯಂತ ಜನಪ್ರಿಯ ಟಾಟಾ ನೆಕ್ಸನ್‌ EV ವಿರುದ್ಧ ಸ್ಪರ್ಧಿಸುತ್ತಿದೆ. ಆದರೆ ನೆಕ್ಸನ್ EV‌ ಗಿಂತ ಸ್ವಲ್ಪ ಭಿನ್ನತೆಯನ್ನು ಹೊಂದಿರುವ XUV400 ವಾಹನವು ಇದರ ಮೂಲ ವಾಹನಕ್ಕಿಂತ (XUV300) ಸ್ವಲ್ಪ ದೊಡ್ಡದಾಗಿದೆ. ಅಲ್ಲದೆ ಇದು EV ಗೆ ಅಗತ್ಯವಿರುವ ಕೆಲವೊಂದು ಬದಲಾವಣೆಗಳನ್ನು ಕಂಡಿದ್ದು ತನ್ನ ಕಂಬಷನ್‌ ಎಂಜಿನ್‌ ದಾಯಾದಿಯಿಂದ ಭಿನ್ನವಾಗಿ ಕಾಣುತ್ತದೆ. ಹೆಚ್ಚಿನ ವಿವರಗಳಿಗಾಗಿ ಮಹೀಂದ್ರಾ XUV400 ನ ಬಿಡುಗಡೆಯ ವರದಿಯನ್ನು ಇಲ್ಲಿ ಓದಿರಿ.

ಮಾರು‌ತಿ ಸುಜುಕಿ ಫ್ರಾಂಕ್ಸ್

ಬೆಲೆ: ರೂ. 7.46 ಲಕ್ಷದಿಂದ ರೂ. 13.13 ಲಕ್ಷ

ಮಾರುತಿ ಫ್ರಾಂಕ್ಸ್ ಕಾರು ಬಲೇನೊ ಹ್ಯಾಚ್‌ ಬ್ಯಾಕ್‌ ಅನ್ನು ಆಧರಿಸಿದ್ದು, ಹೊರಾಂಗಣದಲ್ಲಿ ಆಕರ್ಷಕ ವಿನ್ಯಾಸವನ್ನು ನೀಡಲಾಗಿದೆ ಹಾಗೂ SUV ಗಳ ಕೆಳಗಿನ ಸ್ತರದಲ್ಲಿ ಕ್ರಾಸ್‌ ಓವರ್‌ ಸ್ಥಾನವನ್ನು ಇದಕ್ಕೆ ನೀಡಲಾಗಿದೆ. ಈ ಕ್ರಾಸ್‌ ಓವರ್‌ ಕಾರಿನ ವಿನ್ಯಾಸವು ಮಾರುತಿ ಗ್ರಾಂಡ್‌ ವಿಟಾರ ಕಾಂಪ್ಯಾಕ್ಟ್‌ SUVಯಿಂದ ಪ್ರೇರಣೆ ಪಡೆದಿದೆ. ಅಲ್ಲದೆ ಫ್ರಾಂಕ್ಸ್‌ ನಲ್ಲಿರುವ 100 PS / 138 Nm 1-ಲೀಟರ್‌ ಬೂಸ್ಟರ್‌ ಜೆಟ್‌ ಎಂಜಿನ್‌ ಇದರ ಅತ್ಯಂತ ಆಸಕ್ತಿದಾಯಕ ಅಂಶವೆನಿಸಿದೆ. ಮಾರುತಿ ಫ್ರಾಂಕ್ಸ್‌ ಕುರಿತು ನಮ್ಮ ಚಾಲನಾ ವರದಿಯನ್ನು ಇಲ್ಲಿ ಓದಿರಿ.

ಮಾರು‌ತಿ ಸುಜುಕಿ ಇನ್ವಿಕ್ಟೊ

ಬೆಲೆ: ರೂ. 24.82 ಲಕ್ಷದಿಂದ ರೂ. 28.42 ಲಕ್ಷ

ಮಾರುತಿ ಇನ್ವಿಕ್ಟೊ ವಾಹನವು ಟೊಯೊಟಾ - ಸುಜುಕಿ ಸಹಭಾಗಿತ್ವದ ಅಂಗವೆನಿಸಿದ್ದು ಭಾರತೀಯ ಮಾರುಕಟ್ಟೆಯ ಪಾಲಿಗೆ ಅತ್ಯಂತ ದುಬಾರಿ ಮಾದರಿ ಎನಿಸಿದೆ. ಇದು ಮೂಲತಃ ಇನೋವಾ ಹೈಕ್ರಾಸ್‌ ನ ಹೊಸ ನಾಮಾಂಕಿತ ಆವೃತ್ತಿಯಾಗಿದೆ. ಇದರ ಮೂಲಕ ಮಾರುತಿ ಸಂಸ್ಥೆಯು, ಉತ್ಪನ್ನದ ಅಭಿವೃದ್ಧಿಗೆ ಹೆಚ್ಚಿನ ವೆಚ್ಚವನ್ನು ಖರ್ಚು ಮಾಡದೆಯೇ ತನ್ನ ಗ್ರಾಹಕರಲ್ಲಿ ಪ್ರೀಮಿಯಂ ವರ್ಗವನ್ನು ಆಕರ್ಷಿಸಲು ಯತ್ನಿಸಬಹುದು. ಮಾರುತಿ ಇನ್ವಿಕ್ಟೊ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕಾಗಿ ಈ ವರದಿಯನ್ನು ಓದಿರಿ.

ಮಾರು‌ತಿ ಸುಜುಕಿ ಜಿಮ್ನಿ

ಬೆಲೆ: ರೂ. 12.74 ಲಕ್ಷದಿಂದ ರೂ. 15.05 ಲಕ್ಷ

ಜಿಮ್ನಿ 5-ಡೋರ್‌ ವಾಹನವು 2023ರ ಜನವರಿ ತಿಂಗಳಿನಲ್ಲಿ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಜಾಗತಿಕವಾಗಿ ಬಿಡುಗಡೆಯಾದ ನಂತರ ಇಲ್ಲಿ ರಸ್ತೆಗಿಳಿದ ಅತ್ಯಂತ ಪ್ರಮುಖ ಮಾದರಿ ಎನಿಸಿದೆ. ಸೈಡ್‌ ಪ್ರೊಫೈಲ್‌ ಮಾತ್ರವಲ್ಲದೆ ಇದರ ಒಟ್ಟಾರೆ ವಿನ್ಯಾಸವು 3 ಬಾಗಿಲುಗಳ ಆವೃತ್ತಿಯನ್ನೇ ಹೋಲುತ್ತಿದ್ದು, ಇದರ ವೈಶಿಷ್ಟ್ಯಗಳು, ಪವರ್‌ ಟ್ರೇನ್‌ ಗಳು ಮತ್ತು ಆಫ್‌ ರೋಡ್‌ ಹಾರ್ಡ್‌ ವೇರ್‌ ನಲ್ಲಿಯೂ ಯಾವುದೇ ವ್ಯತ್ಯಾಸವಿಲ್ಲ. ಮಾರುತಿ ಜಿಮ್ನಿಯ ಆಫ್‌ ರೋಡ್‌ ಸಾಮರ್ಥ್ಯದ ಕುರಿತು ಇಲ್ಲಿ ಓದಿರಿ.

ಮರ್ಸಿಡಿಸ್-ಬೆಂಜ್ GLC

ಬೆಲೆ: ರೂ. 73.50 ಲಕ್ಷದಿಂದ ರೂ. 74.50 ಲಕ್ಷ

ಮರ್ಸಿಡಿಸ್‌-ಬೆಂಜ್ GLC ವಾಹನವು ಈ ವರ್ಷದಲ್ಲಿ ತಲೆಮಾರಿನ ನವೀಕರಣವನ್ನು ಪಡೆದಿದ್ದು, ಆಗಸ್ಟ್‌ ತಿಂಗಳಿನಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಪರಿಷ್ಕೃತ GLC ಯ ದೊಡ್ಡದಾದ ಗ್ರಿಲ್‌, ನುಣುಪಾದ ಹೆಡ್‌ ಲೈಟ್‌ ಗಳು ಮತ್ತು C-ಕ್ಲಾಸ್‌ ನಿಂದ ಪಡೆದ ಡ್ಯಾಶ್‌ ಬೋರ್ಡ್‌ ಸೇರಿದಂತೆ ಇದು ಹೊರಾಂಗಣ ಹಾಗೂ ಒಳಾಂಗಣದಲ್ಲಿ ಬದಲಾವಣೆಗಳನ್ನು ಕಂಡಿದೆ. ಇದು ಮೈಲ್ಡ್‌ ಹೈಬ್ರೀಡ್‌ ಅಸಿಸ್ಟ್‌ ಮತ್ತು 9 ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜತೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳೊಂದಿಗೆ ಬರುತ್ತದೆ. ಮರ್ಸಿಡಿಸ್-ಬೆಂಜ್ GLC ಕುರಿತು ಇನ್ನಷ್ಟು ಮಾಹಿತಿಯನ್ನು ಇದರ ಬಿಡುಗಡೆಯ ಕುರಿತ ವರದಿಯಲ್ಲಿ ಪಡೆಯಿರಿ.

ಮರ್ಸಿಡಿಸ್-AMG SL55

ಬೆಲೆ: ರೂ 2.35 ಕೋಟಿ

ಏಳನೇ ತಲೆಮಾರಿನ ಮರ್ಸಿಡಿಸ್‌-ಬೆಂಜ್‌ SL ವಾಹನವು ಭಾರತಕ್ಕೆ ಕಂಪ್ಲೀಟ್ಲಿ ಬಿಲ್ಟ್‌ ಅಪ್‌ ಯೂನಿಟ್ (CBU)‌ ಆಗಿ ಭಾರತಕ್ಕೆ ಕಾಲಿಡಲಿದೆ. ಈ 2 ಡೋರ್‌ ಕನ್ವರ್ಟಿಬಲ್‌ ವಾಹನವು ಒಳಕ್ಕೆಳೆದುಕೊಳ್ಳಬಲ್ಲ ಫ್ಯಾಬ್ರಿಕ್‌ ಛಾವಣಿಯನ್ನು ಹೊಂದಿದ್ದು, ಚಲಿಸುತ್ತಿರುವಾಗಲೇ ಇದನ್ನು ಅಪರೇಟ್‌ ಮಾಡಬಹುದಾಗಿದೆ. AMG ಶೈಲಿಯ ವಾಹನವಾಗಿರುವ ಈ SL55 ಅನ್ನು 4-ಲೀಟರ್‌ ಟ್ವಿನ್‌ ಟರ್ಬೊ V8 ಎಂಜಿನ್‌ ಮೂಲಕ ಚಲಾಯಿಸಲಾಗುತ್ತದೆ. ಇದು ಕೇವಲ 3.9 ಸೆಕೆಂಡುಗಳಲ್ಲಿ ಕಾರಿಗೆ 0-100 kmph ವೇಗವನ್ನು ನೀಡಬಲ್ಲದು ಮಾತ್ರವಲ್ಲದೆ 295 kmph ನಷ್ಟು ಗರಿಷ್ಠ ವೇಗವನ್ನು ಈ ಕಾರು ಹೊಂದಿದೆ. ಈ AMG ಕನ್ವರ್ಟಿಬಲ್‌ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ.

MG ಕೋಮೆಟ್ EV

ಬೆಲೆ: ರೂ. 7.98 ಲಕ್ಷದಿಂದ ರೂ. 9.98 ಲಕ್ಷ

ಹೊಸ ವಿಧಾನಗಳ ಕುರಿತು ಮಾತನಾಡುವುದಾದರೆ ನಾವು ಖಂಡಿತವಾಗಿಯೂ MG ಯನ್ನು ಹೊಗಳಲೇ ಬೇಕು. ಏಕೆಂದರೆ ಇದು ಚಮತ್ಕಾರಿ ಮತ್ತು ಆಫ್‌ ಬೀಟ್‌ EV ಗಳನ್ನು ನಮ್ಮ ದೇಶದಲ್ಲಿ ಪರಿಚಯಿಸಿದೆ.

ಕೇವಲ 3 ಮೀಟರ್‌ ಉದ್ದದ ಕೋಮೆಟ್‌ EV ಯು 2 ದೊಡ್ಡದಾದ ಬಾಗಿಲುಗಳೊಂದಿಗೆ 4 ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಹೊಂದಿದ್ದು 230 km ವರೆಗಿನ ಶ್ರೇಣಿಯನ್ನು ಹೊಂದಿದೆ. ಈ ಅಲ್ಟ್ರಾ ಕಾಂಪ್ಯಾಕ್ಟ್‌ ಎಲೆಕ್ಟ್ರಿಕ್‌ ವಾಹನವು ನಗರದ ಬಳಕೆಗಾಗಿ ಎರಡನೇ ವಾಹನವಾಗಿ ಕಾಣಿಸಿಕೊಳ್ಳುವ ಗುರಿಯನ್ನು ಹೊಂದಿದೆ. MG ಕೋಮೆಟ್ EV‌ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಹೋಂಡಾ ಎಲೆವೇಟ್

ಬೆಲೆ: ರೂ. 11 ಲಕ್ಷದಿಂದ ರೂ. 16.20 ಲಕ್ಷ

ಹೌದು, ಹೋಂಡಾ ಸಂಸ್ಥೆಯು ಅಂತಿಮವಾಗಿ ಹೊಸ SUV ಯನ್ನು 2023ರಲ್ಲಿ ಭಾರತಕ್ಕೆ ತಂದಿದೆ. ಹೋಂಡಾ ಎಲೆವೇಟ್ ವಾಹನವು ಹೋಂಡಾ ಸಿಟಿಯ ಪ್ಲಾಟ್‌ ಫಾರ್ಮ್‌ ಅನ್ನೇ ಆಧರಿಸಿದೆ. ಸ್ವಲ್ಪ ತಡವಾಗಿ ರಸ್ತೆಗಿಳಿದರೂ ಎಲೆವೇಟ್‌ ಮಾದರಿಯು ಜನಪ್ರಿಯ ಕಾಂಪ್ಯಾಕ್ಟ್‌ SUV ವಿಭಾಗಕ್ಕೆ ಹೋಂಡಾದ ಪ್ರವೇಶವನ್ನು ರುಜುವಾತುಪಡಿಸಿದೆ. ಯಾವುದೇ ಎದ್ದುಕಾಣುವ ವೈಶಿಷ್ಟ್ಯಗಳನ್ನು ಇದು ಹೊಂದಿಲ್ಲದೆ ಇದ್ದರೂ CVT ಅಟೋಮ್ಯಾಟಿಕ್‌ ಜೊತೆಗೆ ಬರುವ ಈ ವಿಶ್ವಾಸಾರ್ಹ 1.5-ಲೀಟರ್‌ ನ್ಯಾಚುರಲಿ ಆಸ್ಪಿರೇಟ್‌ ಎಂಜಿನ್‌ ನ ವಾಹನವು ADAS ತಂತ್ರಜ್ಞಾನ ಮತ್ತು ವಿಶಾಲ ಒಳಾಂಗಣವು ಎಲೆವೇಟ್‌ ಅನ್ನು ಜನಪ್ರಿಯ ವಾಹನವಾಗಿ ಪ್ರತಿಷ್ಠಾಪಿಸಿದೆ. ಹೋಂಡಾ ಎಲೆವೇಟ್‌ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಹ್ಯುಂಡೈ ಎಕ್ಸ್ಟರ್

ಬೆಲೆ: ರೂ. 6 ಲಕ್ಷದಿಂದ ರೂ. 10.15 ಲಕ್ಷ

ಜನಪ್ರಿಯ ಟಾಟಾ ಪಂಚ್ ಸ್ಪರ್ಧಿಸುವ ಉದ್ದೇಶವನ್ನು ಹೊಂದಿರುವ ಕೊರಿಯಾದ ಈ ಮೈಕ್ರೋ-SUV ಯು ಈ ವಿಭಾಗದಲ್ಲಿ ಮೊದಲ ಬಾರಿಗೆ 6 ಏರ್‌ ಬ್ಯಾಗ್‌ ಗಳು, ಸನ್‌ ರೂಫ್‌ ಮತ್ತು ಡ್ಯುವಲ್‌ ಕ್ಯಾಮರಾ ಡ್ಯಾಶ್‌ ಕ್ಯಾಮ್‌ ಜೊತೆಗೆ ಬರುತ್ತಿದೆ. ಹ್ಯುಂಡೈ ಸಂಸ್ಥೆಯು ಎಕ್ಸ್ಟರ್‌ ಗ್ರಾಹಕರ ಅಗತ್ಯತೆಗಳನ್ನು ಚೆನ್ನಾಗಿ ಅರಿತುಕೊಂಡಿದ್ದು ಎಕ್ಸ್ಟರ್‌ ನ 75 ಶೇಕಡಾದಷ್ಟು ಭವಿಷ್ಯದ ಗ್ರಾಹಕರು ಸನ್‌ ರೂಫ್‌ ಇರುವ ವೇರಿಯಂಟ್‌ ಗಳನ್ನೇ ಇಷ್ಟ ಪಟ್ಟಿದ್ದಾರೆ. ಹ್ಯುಂಡೈ ಎಕ್ಸ್ಟರ್ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಹ್ಯುಂಡೈ ಅಯಾನಿಕ್ 5

ಬೆಲೆ: ರೂ 45.95 ಲಕ್ಷ

ಹ್ಯುಂಡೈ ಸಂಸ್ಥೆಯು ಕೋನಾ EV ಮೂಲಕ ಮೊದಲ ಬಾರಿಗೆ ಮಾಸ್‌ ಮಾರ್ಕೆಟ್‌ ಲಾಂಗ್‌ ರೇಂಜ್‌ EV ಯನ್ನು ಭಾರತದಲ್ಲಿ ಪರಿಚಯಿಸಿತು. ಇದರ ಜಾಗತಿಕ EV ಫ್ಲ್ಯಾಗ್‌ ಶಿಪ್‌ ಎನಿಸಿರುವ ಹ್ಯುಂಡೈ ಅಯಾನಿಕ್ 5 ಮೂಲಕ ಎರಡನೇ ಹೆಜ್ಜೆಯನ್ನು ಇಟ್ಟಿತು. ಇದು Evಗಳಿಗಾಗಿ ಮೀಸಲಾಗಿರುವ E-GMP ಪ್ಲಾಟ್‌ ಫಾರ್ಮ್‌ ಅನ್ನು ಆಧರಿಸಿರುವ ಮೊದಲ ಎಲೆಕ್ಟ್ರಿಕ್‌ ಕಾರು ಎನಿಸಿದೆ. ಈ ಕಾರು ಮೂಲತಃ ದೊಡ್ಡದಾದ ಹ್ಯಾಚ್‌ ಬ್ಯಾಕ್‌ ಆಗಿದ್ದು ಆಧುನಿಕ ಮತ್ತು ರೆಟ್ರೊ ಶೈಲಿಯನ್ನು ಸಂಯೋಜಿಸಿದ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಇದನ್ನು ಸ್ಥಳೀಯವಾಗಿ ಸಿದ್ಧಪಡಿಸಲಾಗಿದ್ದು ಇದರಿಂದಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಹೊರತರುವುದು ಸಾಧ್ಯವಾಗಿದೆ. ಕೊರಿಯಾದ ಕಾರು ತಯಾರಕ ಸಂಸ್ಥೆಯ ಅಗ್ರಗಣ್ಯ EV ಯ ಕುರಿತು ನೀವು ಇಲ್ಲಿ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ಹ್ಯುಂಡೈ ವೆರ್ನಾ

ಬೆಲೆ: ರೂ. 10.96 ಲಕ್ಷದಿಂದ ರೂ. 17.38 ಲಕ್ಷ

ಹ್ಯುಂಡೈ ಸಂಸ್ಥೆಯು 2023ರಲ್ಲಿ ಹೊಸ ವೆರ್ನಾಕಾರನ್ನು ಬಿಡುಗಡೆ ಮಾಡುವ ಮೂಲಕ ಸೆಡಾನ್‌ ಕ್ಷೇತ್ರದಲ್ಲಿನ ಸ್ಪರ್ಧೆಗೆ ಇನ್ನಷ್ಟು ವೇಗವನ್ನು ನೀಡಿದೆ. ಚೆನ್ನಾಗಿ ವಿನ್ಯಾಸಗೊಳಿಸಿದ ಈ ಸೆಡಾನ್‌ ಕಾರು ಶಕ್ತಿಯುತ ಎಂಜಿನ್‌ , ಪರಿಷ್ಕೃತ ಒಳಾಂಗಣಗಳು ಮತ್ತು ಆಧುನಿಕ ಹೊರಾಂಗಣಗಳೊಂದಿಗೆ ಬರುತ್ತಿದೆ. ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಈ ವಾಹನವು 5-ಸ್ಟಾರ್ GNCAP‌ ರೇಟಿಂಗ್‌ ಅನ್ನು ಪಡೆದಿದೆ. ಹ್ಯುಂಡೈ ವೆರ್ನಾ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯುವುದಕ್ಕಾಗಿ ನಮ್ಮ ಮೊದಲ ಚಾಲನಾ ವರದಿಯನ್ನು ಓದಿರಿ.

ಟೊಯೊಟಾ ಇನೋವಾ ಹೈಕ್ರಾಸ್‌

ಬೆಲೆ: ರೂ. 18.82 ಲಕ್ಷದಿಂದ ರೂ. 30.26 ಲಕ್ಷ

ಟೊಯೊಟಾ ಇನೋವಾ ಮಾದರಿಯು ಭಾರತದಲ್ಲಿ ಅತ್ಯಂತ ಸಾಂಪ್ರದಾಯಿಕ MPV ಬ್ರಾಂಡುಗಳಲ್ಲಿ ಒಂದಾಗಿದೆ. ಆದರೆ ಇನೋವಾ ಹೈಕ್ರಾಸ್ ವಾಹನವು ಇದರ ಮೂಲ MPV ಗಿಂತ ಸಾಕಷ್ಟು ಭಿನ್ನವಾಗಿದೆ. ಲ್ಯಾಡರ್‌ ಆನ್‌ ಫ್ರೇಮ್‌ ರಿಯರ್‌ ವೀಲ್‌ ಡ್ರೈವ್‌ ನಿಂದ ಹಿಡಿದು ಮೋನೋಕಾಕ್‌ ಫ್ರಂಟ್‌ ವೈಲ್‌ ಡ್ರೈವ್‌ ಪೆಟ್ರೋಲ್‌ ಮತ್ತು ಪೆಟ್ರೋಲ್‌ - ಹೈಬ್ರೀಡ್‌ ಮಾದರಿಯ ತನಕ ಇದು ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ. ಇದು ತಮ್ಮ ಕೆಲವು ಕಠಿಣ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದರೂ ಹಿಂದಿಗಿಂತಲೂ ಹೆಚ್ಚಿನ ಪ್ರೀಮಿಯಂ ವಾಹನವಾಗಿ ಮೂಡಿಬಂದಿದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಟೊಯೊಟಾ ಇನೋವಾ ಹೈಕ್ರಾಸ್‌ ಅವಲೋಕನವನ್ನು ಓದಿರಿ.

ಟೊಯೊಟಾ ರುಮಿಯನ್

ಬೆಲೆ: ರೂ. 10.29 ಲಕ್ಷದಿಂದ ರೂ. 13.68 ಲಕ್ಷ

ಮಾರುತಿ - ಟೊಯೊಟಾ ನಡುವಿನ ಸಹಭಾಗಿತ್ವದ ಇನ್ನೊಂದು ಉತ್ಪನ್ನವಾಗಿರುವ ರುಮಿಯನ್ ಕಾರು, ಅತ್ಯಂತ ಜನಪ್ರಿಯ ಎರ್ಟಿಗಾ MPV ಯ ಟೊಯೊಟಾದ ಆವೃತ್ತಿಯಾಗಿದೆ. ಜಪಾನಿನ ಕಾರು ತಯಾರಕರ ಬಲೇನೋ-ಗ್ಲಾಂಜಾ ಜೋಡಿಯ ಯಶಸ್ವಿಯ ನಂತರ ಎರ್ಟಿಗಾ-ರುಮಿಯನ್‌ ಜೋಡಿಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬ ವಿಚಾರವು ಕುತೂಹಲ ಮೂಡಿಸಿದೆ. ಟೊಯೊಟಾ ರುಮಿಯನ್ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಪಡೆಯಿರಿ.

ವೋಲ್ವೊ C40 ರೀಚಾರ್ಜ್

ಬೆಲೆ: ರೂ 62.95 ಲಕ್ಷ

ವೋಲ್ವೊ ಸಂಸ್ಥೆಯು C40 ರೀಚಾರ್ಜ್‌ ರೂಪದಲ್ಲಿ ತನ್ನ ಮುಂದಿನ EV ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್‌ XC40 ರೀಚಾರ್ಜ್‌ ಅನ್ನು ಆಧರಿಸಿದ SUV ಕೂಪೆ ಆಗಿದ್ದು, ಸ್ವೀಡಿಷ್‌ ಬ್ರಾಂಡಿನ ಪಟ್ಟಿಯಲ್ಲಿ ಮೊದಲ EV ಮಾದರಿ ಎನಿಸಿದೆ. C40 ರೀಚಾರ್ಜ್‌ ವಾಹನವು ಹೆಚ್ಚು ಆಕರ್ಷಕವಾಗಿದೆ ಮಾತ್ರವಲ್ಲದೆ ಪರಿಷ್ಕೃತ ಬ್ಯಾಟರಿಯ ಮೂಲಕ ಅದೇ ಗಾತ್ರದಲ್ಲಿ ಇನ್ನೂ ಹೆಚ್ಚಿನ ಕಿಲೋಮೀಟರ್‌ ಶ್ರೇಣಿಯನ್ನು ಒದಗಿಸುತ್ತಿದೆ. ವೋಲ್ವೊ C40 ರೀಚಾರ್ಜ್‌ ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ಈ ಕೊಂಡಿಯ ಮೂಲಕ ಪಡೆಯಬಹುದು.

ಎಲ್ಲಾ ಬೆಲೆಗಳು‌ ಎಕ್ಸ್-ಶೋರೂಂ ಬೆಲೆಗಳಾಗಿವೆ

ಈ ಪಟ್ಟಿಯಲ್ಲಿ 20ಕ್ಕೂ ಹೆಚ್ಚಿನ ಕಾರುಗಳು ಇರುವುದರಿಂದ ಯಾವುದೇ ಒಂದು ಕಾರನ್ನು ನೆಚ್ಚಿನ ಕಾರನ್ನಾಗಿ ಗುರುತಿಸುವುದು ಕಷ್ಟಕರ. ಏನೇ ಇರಲಿ, ಒಂದು ವೇಳೆ 2023ರಲ್ಲಿ ನೀವು ಮಾರುಕಟ್ಟೆಯಲ್ಲಿ ಹೊಸ ಕಾರಿನ ಹುಡುಕಾಟ ನಡೆಸುತ್ತಿದ್ದರೆ ಯಾವುದನ್ನು ನೀವು ಪರಿಗಣಿಸುತ್ತಿದ್ದೀರಿ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: Q3 ಸ್ಪೋರ್ಟ್‌ ಬ್ಯಾಕ್‌ ಅಟೋಮ್ಯಾಟಿಕ್

A
ಅವರಿಂದ ಪ್ರಕಟಿಸಲಾಗಿದೆ

Anonymous

  • 92 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಆಡಿ ಕ್ಯೂ3 ಸ್ಪೋರ್ಟ್ಬ್ಯಾಕ್

Read Full News

explore similar ಕಾರುಗಳು

ಬಿಎಂಡವೋ ಎಕ್ಸ1

ಡೀಸಲ್20.37 ಕೆಎಂಪಿಎಲ್
ಪೆಟ್ರೋಲ್20.37 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.24 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ