Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಕರ್ವ್‌ಗೆ ಟಕ್ಕರ್‌ ಕೊಡಲಿರುವ Citroen Basalt ನ ಮೈಲೇಜ್‌ ಎಷ್ಟು ?, ಇಲ್ಲಿದೆ ಹೊಸ ಆಪ್‌ಡೇಟ್‌

ಸಿಟ್ರೊನ್ ಬಸಾಲ್ಟ್‌ ಗಾಗಿ dipan ಮೂಲಕ ಆಗಸ್ಟ್‌ 06, 2024 04:18 pm ರಂದು ಪ್ರಕಟಿಸಲಾಗಿದೆ

ಬಸಾಲ್ಟ್ ನಿಮಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (82 PS/115 Nm) ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/205 Nm ವರೆಗೆ) ನ ಆಯ್ಕೆಯನ್ನು ನೀಡುತ್ತದೆ

  • ಸಿಟ್ರೊಯೆನ್ ಬಸಾಲ್ಟ್ ಭಾರತದಲ್ಲಿ ಕಾರು ತಯಾರಕರ ಮೊದಲ SUV-ಕೂಪ್ ಡಿಸೈನ್ ಆಗಿದೆ.

  • ಪ್ರೊಡಕ್ಷನ್ ಮಾಡೆಲ್ C3 ಏರ್‌ಕ್ರಾಸ್‌ನಂತೆಯೇ ಕಾಣುತ್ತದೆ, ಮತ್ತು V- ಆಕಾರದ LED DRLಗಳು ಮತ್ತು ರಾಪ್ ಅರೌಂಡ್ LED ಟೈಲ್ ಲೈಟ್‌ಗಳನ್ನು ನೀಡಲಾಗಿದೆ.

  • ಇದು LED ಪ್ರೊಜೆಕ್ಟರ್ ಹೆಡ್ ಲೈಟ್ ಗಳು ಮತ್ತು 16-ಇಂಚಿನ ಅಲೊಯ್ ವೀಲ್ ಗಳನ್ನು ಕೂಡ ಒಳಗೊಂಡಿದೆ.

  • ಇದು C3 ಏರ್‌ಕ್ರಾಸ್‌ನಲ್ಲಿರುವ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಡ್ಯುಯಲ್ ಡಿಸ್ಪ್ಲೇಗಳು ಮತ್ತು ಅದೇ ರೀತಿಯ AC ವೆಂಟ್ ಗಳನ್ನು ಹೊಂದಿದೆ.

  • ಇದು ಆರು ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು TPMS ಅನ್ನು ಹೊಂದಿದೆ.

  • ಇದನ್ನು ಎರಡು ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡಲಾಗುವುದು: 1.2-ಲೀಟರ್ N/A ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್.

ಭಾರತದಲ್ಲಿ ಫ್ರೆಂಚ್ ಕಾರು ತಯಾರಕರ ಮೊದಲ SUV-ಕೂಪ್ ಸಿಟ್ರೊಯೆನ್ ಬಸಾಲ್ಟ್ ಅನ್ನು ಇತ್ತೀಚೆಗೆ ಅದರ ಪ್ರೊಡಕ್ಷನ್ ರೆಡಿ ವರ್ಷನ್ ನಲ್ಲಿ ತೋರಿಸುವ ಮೂಲಕ ಅದರ ಡಿಸೈನ್ ಮತ್ತು ಫೀಚರ್ ಗಳನ್ನು ಪ್ರದರ್ಶಿಸಲಾಯಿತು. ಅನಾವರಣದ ಸಮಯದಲ್ಲಿ, ಸಿಟ್ರೊಯೆನ್ ಅದರ SUV-ಕೂಪ್ ಬಗ್ಗೆ ಕೆಲವು ಪ್ರಮುಖ ವಿವರಗಳನ್ನು ನೀಡಿತು. ಈ ಲೇಖನದಲ್ಲಿ, ನಾವು ಬಸಾಲ್ಟ್‌ನ ಸೈಜ್ ಮತ್ತು ಮೈಲೇಜ್ ಬಗ್ಗೆ ನಿಮಗೆ ವಿವರ ನೀಡುತ್ತೇವೆ:

ಗಾತ್ರಗಳು

ಈ SUV-ಕೂಪ್‌ನ ಗಾತ್ರಗಳು ಈ ಕೆಳಗಿನಂತಿವೆ:

ಉದ್ದ

4,352 ಮಿ.ಮೀ

ಅಗಲ (ORVM ಗಳಿಲ್ಲದೆ)

1,765 ಮಿ.ಮೀ

ಎತ್ತರ (ಲೋಡ್ ಇಲ್ಲದೆ)

1,593 ಮಿ.ಮೀ

ವೀಲ್ ಬೇಸ್

2,651 ಮಿ.ಮೀ

ಬೂಟ್ ಸ್ಪೇಸ್

470 ಲೀಟರ್

ಇದನ್ನು ಕೂಡ ಓದಿ: ಸಿಟ್ರೊಯೆನ್ ಬಸಾಲ್ಟ್ ಎಲ್ಲಾ ವಿವರಗಳು ನಿಮಗಾಗಿ ಈ ಗ್ಯಾಲರಿಯಲ್ಲಿ

ಎಂಜಿನ್ ಆಯ್ಕೆಗಳು ಮತ್ತು ಮೈಲೇಜ್

ಸಿಟ್ರೊಯೆನ್ ಬಸಾಲ್ಟ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು ಅದರ ಸ್ಪೆಸಿಫಿಕೇಷನ್ ಗಳು ಈ ಕೆಳಗಿನಂತಿವೆ:

ಇಂಜಿನ್

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್

82 PS

110 PS

110 PS

ಟಾರ್ಕ್

115 Nm

190 Nm

205 Nm

ಟ್ರಾನ್ಸ್‌ಮಿಷನ್‌

5-ಸ್ಪೀಡ್ MT

6-ಸ್ಪೀಡ್ MT

6-ಸ್ಪೀಡ್ AT

ಮೈಲೇಜ್ (ಕ್ಲೇಮ್ ಮಾಡಿರುವ)

18 kmpl

18 ಕಿ.ಮೀ ಪ್ರತಿ ಲೀಟರ್

19.5 ಕಿ.ಮೀ ಪ್ರತಿ ಲೀಟರ್

18.7 ಕಿ.ಮೀ ಪ್ರತಿ ಲೀಟರ್

5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 18 ಕಿಮೀ ನೀಡುತ್ತದೆ ಎಂದು ಹೇಳಲಾಗುತ್ತದೆ. 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ ಮ್ಯಾನುವಲ್‌ನೊಂದಿಗೆ 19.5 ಕಿಮೀ ಮತ್ತು ಆಟೋಮ್ಯಾಟಿಕ್ ನೊಂದಿಗೆ 18.7 ಕಿಮೀ ನೀಡಲಿದೆ ಎಂದು ಹೇಳಲಾಗುತ್ತದೆ.

ಸಿಟ್ರೊಯೆನ್ ಬಸಾಲ್ಟ್: ಒಂದು ಸಣ್ಣ ಪರಿಚಯ

ಸಿಟ್ರೊಯೆನ್ ಬಸಾಲ್ಟ್ SUV-ಕೂಪ್ ಫ್ರೆಂಚ್ ಕಾರು ತಯಾರಕರ ಐದನೇ ಮಾಡೆಲ್ ಆಗಿದೆ. ಇದು C3 ಏರ್‌ಕ್ರಾಸ್‌ನಂತೆಯೇ ಡಿಸೈನ್ ಅನ್ನು ಹೊಂದಿದೆ, ಮತ್ತು V- ಆಕಾರದ LED DRL ಗಳು ಮತ್ತು ಅದೇ ರೀತಿಯ ಬಂಪರ್‌ ಡಿಸೈನ್ ನೊಂದಿಗೆ ಬರುತ್ತದೆ. ಇದು ಕೂಪ್-ಶೈಲಿಯ ಸ್ಲೋಪಿಂಗ್ ರೂಫ್‌ಲೈನ್, ಡ್ಯುಯಲ್-ಟೋನ್ ಅಲಾಯ್ ವೀಲ್ ಗಳು, ರಾಪ್ ಅರೌಂಡ್ LED ಟೈಲ್ ಲೈಟ್‌ಗಳು ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಹಿಂಭಾಗದ ಬಂಪರ್ ಅನ್ನು ಪಡೆಯುತ್ತದೆ.

ಕ್ಯಾಬಿನ್ ನ ಒಳಗೆ, ಇದು C3 ಏರ್‌ಕ್ರಾಸ್‌ನಲ್ಲಿರುವ ಅದೇ ರೀತಿಯ ಡ್ಯಾಶ್‌ಬೋರ್ಡ್, ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳು ಮತ್ತು AC ವೆಂಟ್‌ಗಳೊಂದಿಗೆ ಬರುತ್ತದೆ.

ಫೀಚರ್ ಗಳ ವಿಷಯದಲ್ಲಿ, ಇದು 10.2-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಪಡೆಯುತ್ತದೆ. ಸುರಕ್ಷತೆಗಾಗಿ ಇಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಬದಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ನೀಡಲಾಗಿದೆ.

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸಿಟ್ರೊಯೆನ್ ಬಸಾಲ್ಟ್ ಬೆಲೆಯು ರೂ 10 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ). ಇದು ಟಾಟಾ ಕರ್ವ್ ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

Share via

Write your Comment on Citroen ಬಸಾಲ್ಟ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ