ಭಾರತದಲ್ಲಿ Citroenನ ಮೂರನೇ ವಾರ್ಷಿಕೋತ್ಸವ: C3 ಮತ್ತು C3 Aircross ಪ್ರವೇಶ ಬೆಲೆಗಳಲ್ಲಿ ಕಡಿತ
ಸಂಭ್ರಮಾಚರಣೆಯ ಭಾಗವಾಗಿ, C3 ಮತ್ತು eC3 ಹ್ಯಾಚ್‌ಬ್ಯಾಕ್‌ಗಳು ಲಿಮಿಟೆಡ್-ರನ್ ಬ್ಲೂ ಎಡಿಷನ್ ಅನ್ನು ಸಹ ಪಡೆಯುತ್ತವೆ.
- 2024 ರ ಏಪ್ರಿಲ್ ವಿಶೇಷ ಬೆಲೆಗಳಲ್ಲಿ C3 5.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ ಮತ್ತು C3 ಏರ್‌ಕ್ರಾಸ್ ಎಸ್‌ಯುವಿಯು 8.99 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
- C3 ಮತ್ತು eC3 ಹ್ಯಾಚ್‌ಬ್ಯಾಕ್‌ಗಳ ಬ್ಲೂ ಎಡಿಷನ್‌ಗಳು ರೂಫ್ ಗ್ರಾಫಿಕ್ಸ್ ಜೊತೆಗೆ ಕಾಸ್ಮೊ ಬ್ಲೂ ಬಾಡಿ ಕಲರ್ ಅನ್ನು ಪಡೆಯುತ್ತವೆ.
- ಒಳಗೆ, ಈ ವಿಶೇಷ ಆವೃತ್ತಿಗಳು ಏರ್ ಪ್ಯೂರಿಫೈಯರ್ ಮತ್ತು ಕಸ್ಟಮೈಸ್ ಮಾಡಿದ ಸೀಟ್ ಕವರ್‌ಗಳು, ನೆಕ್ ರೆಸ್ಟ್‌ಗಳು ಮತ್ತು ಸೀಟ್ ಬೆಲ್ಟ್ ಕುಶನ್‌ಗಳನ್ನು ಹೊಂದಿದೆ.
- ಆಟೋಮೇಕರ್ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪೂರಕ ಕಾರ್ ವಾಶ್ ಮತ್ತು ರೆಫರಲ್ ಬೋನಸ್ ಅನ್ನು ಸಹ ನೀಡುತ್ತಿದೆ.
C5 Aircross ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಬಿಡುಗಡೆ ಮಾಡುವ ಮೂಲಕ ಸಿಟ್ರೊಯೆನ್ ಅಧಿಕೃತವಾಗಿ 2021ರ ಏಪ್ರಿಲ್‌ನಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಈಗ 2024 ರ ಏಪ್ರಿಲ್‌ನಲ್ಲಿ, ಸಿಟ್ರೊಯೆನ್ ಇಲ್ಲಿ ಬ್ರ್ಯಾಂಡ್‌ನ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುವುದರೊಂದಿಗೆ ಹಲವು ಆಫರ್‌ಗಳ ಪಟ್ಟಿಯನ್ನು ಬಿಡುಗಡೆ ಮಾದಿದೆ. ಇದರಲ್ಲಿ ವಿಶೇಷ ಕಡಿಮೆ ಬೆಲೆಗಳು, ಹೊಸ ವಿಶೇಷ ಆವೃತ್ತಿಗಳು ಮತ್ತು ಅಸ್ತಿತ್ವದಲ್ಲಿರುವ ಮಾಲೀಕರಿಗೆ ವಿಶೇಷ ಕೊಡುಗೆಗಳು ಸೇರಿವೆ. ಏಪ್ರಿಲ್ ತಿಂಗಳಿನ ಈ ಪ್ರತಿಯೊಂದು ಕೊಡುಗೆಗಳನ್ನು ನಾವು ಕೆಳಗೆ ವಿವರಿಸಿದ್ದೇವೆ:
ಸಿಟ್ರೊಯೆನ್ C3 eC3 ಬ್ಲೂ ಎಡಿಷನ್
C3 ಮತ್ತು eC3 ನ ಬ್ಲೂ ಎಡಿಷನ್‌ಗಳು ಫೀಲ್ ಮತ್ತು ಶೈನ್ ಆವೃತ್ತಿಗಳನ್ನು ಆಧರಿಸಿವೆ. ಈ ಹ್ಯಾಚ್‌ಬ್ಯಾಕ್‌ಗಳು ರೂಫ್ ಗ್ರಾಫಿಕ್ಸ್‌ನೊಂದಿಗೆ ಕಾಸ್ಮೊ ಬ್ಲೂ ಬಾಡಿ ಕಲರ್‌ನಲ್ಲಿ ಬರುತ್ತವೆ. ಒಳಭಾಗದಲ್ಲಿ, ಸೀಮಿತ ಆವೃತ್ತಿಗಳು ಏರ್ ಪ್ಯೂರಿಫೈಯರ್, ಇಲ್ಯುಮಿನೇಟೆಡ್ ಕಪ್ ಹೋಲ್ಡರ್‌ಗಳು, ಸಿಲ್ ಪ್ಲೇಟ್‌ಗಳು, ಹಾಗೆಯೇ ಕಸ್ಟಮೈಸ್ ಮಾಡಿದ ಸೀಟ್ ಕವರ್‌ಗಳು, ನೆಕ್ ರೆಸ್ಟ್‌ಗಳು ಮತ್ತು ಸೀಟ್ ಬೆಲ್ಟ್ ಕುಶನ್‌ಗಳನ್ನು ಸಹ ಒಳಗೊಂಡಿರುತ್ತವೆ.
ಇದನ್ನು ಸಹ ಪರಿಶೀಲಿಸಿ: ಟೊಯೋಟಾ ಟೈಸರ್ Vs ಪ್ರಮುಖ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯನ್ನು ಹೋಲಿಕೆ
C3 ಮತ್ತು C3 ಏರ್‌ಕ್ರಾಸ್‌ಗಾಗಿ ವಿಶೇಷ ವಾರ್ಷಿಕೋತ್ಸವದ ಬೆಲೆಗಳು
ಸಂಭ್ರಮಾಚರಣೆಯ ಭಾಗವಾಗಿ, ಸಿಟ್ರೊಯೆನ್ C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ ಕಾಂಪ್ಯಾಕ್ಟ್ಎಸ್‌ಯುವಿಯ ಪ್ರವೇಶ ಮಟ್ಟದ ಆವೃತ್ತಿಗಳ ಆರಂಭಿಕ ಬೆಲೆಯನ್ನು ಕಡಿಮೆ ಮಾಡಿದೆ. C3 ಈಗ 5.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಇದು ಮೊದಲಿಗಿಂತ 17,000 ರೂ. ಕಡಿಮೆಯಾಗಿದೆ, ಹಾಗೆಯೇ C3 ಏರ್‌ಕ್ರಾಸ್ ಈಗ 8.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಇದು 1 ಲಕ್ಷ ರೂ.ನಷ್ಟು ಬೆಲೆ ಕಡಿತದೊಂದಿಗೆ ಹೆಚ್ಚು ಕೈಗೆಟುಕುವಂತೆ ಮಾಡಿದೆ. ದಯವಿಟ್ಟು ಗಮನಿಸಿ, ಈ ಬೆಲೆಗಳು ಪೂರ್ತಿ ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಅನ್ವಯಿಸುತ್ತವೆ.
ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ವಿಶೇಷ ಪ್ರಯೋಜನಗಳು
ಭಾರತದಲ್ಲಿ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮಾಲೀಕರು ಈ ಅವಧಿಯಲ್ಲಿ ಕಾಂಪ್ಲಿಮೆಂಟರಿ ಕಾರ್ ವಾಶ್ ಅನ್ನು ಆನಂದಿಸಬಹುದು. ಹೆಚ್ಚುವರಿಯಾಗಿ, ವಾಹನ ತಯಾರಕರು ರೆಫರಲ್ ಪ್ರೋಗ್ರಾಂ ಅನ್ನು ಪರಿಚಯಿಸಿದ್ದಾರೆ, ಸಿಟ್ರೊಯೆನ್ ಗ್ರಾಹಕರಿಗೆ ರೂ 10,000 ರೆಫರಲ್ ಬೋನಸ್ ಅನ್ನು ಸ್ವೀಕರಿಸುವ ಅವಕಾಶವನ್ನು ಮಾಡುತ್ತದೆ.
ಸಿಟ್ರೊಯೆನ್‌ನ ಭವಿಷ್ಯದ ಯೋಜನೆಗಳು
ಫ್ರೆಂಚ್‌ನ ಈ ವಾಹನ ತಯಾರಕರು ಭಾರತದಲ್ಲಿ ಹೊಸ ಕೂಪ್-ಎಸ್‌ಯುವಿ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಸಿಟ್ರೊಯೆನ್ ಬಸಾಲ್ಟ್ ವಿಷನ್ ಕಾನ್ಸೆಪ್ಟ್ ಅನ್ನು ಪೂರ್ವವೀಕ್ಷಣೆ ಮಾಡಲಾಗಿದೆ. ಅಲ್ಲದೆ, ಫ್ರೆಂಚ್ ವಾಹನ ತಯಾರಕ ಸಂಸ್ಥೆಯು ದೇಶದಲ್ಲಿ ತನ್ನ ವ್ಯವಹಾರವನ್ನು ಸುಮಾರು 400 ಪ್ರತಿಶತದಷ್ಟು ಹೆಚ್ಚಿಸಲು ಯೋಜಿಸುತ್ತಿದೆ. ಪ್ರಸ್ತುತ, ಸಿಟ್ರೊಯೆನ್ ಭಾರತದಲ್ಲಿ 58 ಔಟ್‌ಲೆಟ್‌ಗಳನ್ನು ಹೊಂದಿದೆ ಮತ್ತು ಇದು ತನ್ನ ಮಾರಾಟ ಮತ್ತು ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು 200 ಟಚ್‌ಪಾಯಿಂಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ, ಇದು 140 ಮಾರುಕಟ್ಟೆಗಳನ್ನು ಒಳಗೊಂಡಿದೆ.
ಸಿಟ್ರೊಯೆನ್ ಪ್ರಸ್ತುತ ಭಾರತದಲ್ಲಿ ಇವಿ ಸೇರಿದಂತೆ C3, C3 ಏರ್‌ಕ್ರಾಸ್, eC3 (ಎಲೆಕ್ಟ್ರಿಕ್), ಮತ್ತು C5 ಏರ್‌ಕ್ರಾಸ್ ಎಂಬ ನಾಲ್ಕು ಮೊಡೆಲ್‌ಗಳನ್ನು ಮಾರಾಟ ಮಾಡುತ್ತದೆ.
ಈ ಕುರಿತು ಹೆಚ್ಚು ಓದಿ : C3 ಆನ್‌ರೋಡ್ ಬೆಲೆ