ಮೊದಲನೇ ಸ್ಪೈ ಶಾಟ್‌ಗಳ ಪ್ರಕಾರ ಭರ್ಜರಿ ಪರಿಷ್ಕರಣೆ ಹೊಂದಲಿರುವ ನವೀಕೃತ ಟಾಟಾ ಸಫಾರಿಯ ಕ್ಯಾಬಿನ್
ಟಾಟಾ ಸಫಾರಿ ಗಾಗಿ ansh ಮೂಲಕ ಜೂನ್ 21, 2023 02:33 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ನವೀಕೃತ ಟಾಟಾ ಸಫಾರಿ ಕರ್ವ್ ಪರಿಕಲ್ಪನೆಯಿಂದ ಪ್ರೇರಿತಗೊಂಡು ಹೊಸ ಸೆಂಟರ್ ಕನ್ಸೋಲ್ ಪಡೆಯಲಿದೆ
-
ಇದು 2024ರ ಪ್ರಾರಂಭದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.
-
ಅವಿನ್ಯಾ ಮತ್ತು ಕರ್ವ್ ಪರಿಕಲ್ಪನೆಯಿಂದ ಹೊಸ ಸ್ಟೀರಿಂಗ್ ವ್ಹೀಲ್ ಪಡೆಯುತ್ತದೆ.
-
ನಿರ್ಗಮಿಸುತ್ತಿರುವ ಮಾಡೆಲ್‌ನ 2-ಲೀಟರ್ ಡೀಸೆಲ್ ಇಂಜಿನ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಪಡೆಯಲಿದೆ.
-
ಬೆಲೆಗಳು ರೂ 16 ಲಕ್ಷದಿಂದ (ಎಕ್ಸ್-ಶೋರೂ0) ಪ್ರಾರಂಭವಾಗುವ ನಿರೀಕ್ಷೆ ಇದೆ.
ನವೀಕೃತ ಟಾಟಾ ಸಫಾರಿಯ ಮರುವಿನ್ಯಾಸಗೊಳಿಸಲಾದ ಎಕ್ಸ್‌ಟೀರಿಯರ್‌ನ ಬಹುವೀಕ್ಷಣೆಯ ನಂತರ ಮತ್ತು ಇತ್ತೀಚಿನ ಒಂದರ ಹೊಸ 19-ಇಂಚು ಅಲಾಯ್ ವ್ಹೀಲ್‌ಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿದ ನಂತರ, ಈ SUVಯ ಇಂಟೀರಿಯರ್ ಅನ್ನು ಮೊದಲ ಬಾರಿಗೆ ಸ್ಪೈ ಮಾಡಲಾಗಿದ್ದು, ನಿಮ್ಮ ಮುಂದೆ ಏನಿದೆ ಎಂಬುದರ ಒಂದು ನೋಟವನ್ನು ನೀಡುತ್ತದೆ. ಈ ನವೀಕೃತ ಸಫಾರಿಯ ಕ್ಯಾಬಿನ್ ಅನ್ನು ಭರ್ಜರಿಯಾಗಿ ವಿನ್ಯಾಸಗೊಳಿಸಲಾಗಿದ್ದು ಸ್ಪೈ ಶಾಟ್‌ಗಳು ಏನು ಹೇಳುತ್ತವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಹೊಸ ಕ್ಯಾಬಿನ್
ಸ್ಪೈ ಶಾಟ್‌ಗಳ ಪ್ರಕಾರ, ಈ ನವೀಕೃತ ಟಾಟಾ SUV ಸಂಪೂರ್ಣ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಇದರೊಂದಿಗೆ, 10.25 ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್ ಅನ್ನೂ ಪಡೆದಿದ್ದು ಇದನ್ನು ಪ್ರಸ್ತುತ ಪುನರಾವೃತ್ತಿಯಲ್ಲೂ ನೀಡಲಾಗಿದೆ. ಅಲ್ಲದೇ ಇದು ಕ್ಲೈಮೆಟ್ ಕಂಟ್ರೋಲ್‌ಗೆ ಹ್ಯಾಪ್ಟಿಕ್ ಕಂಟ್ರೋಲ್‌ಗಳನ್ನು ಹೊಂದಿರಬಹುದಾದ ಹೊಸ ಸೆಟಪ್ ಅನ್ನು ಪಡೆಯುತ್ತದೆ, ಇದನ್ನು ಕರ್ವ್ ಪರಿಕಲ್ಪನೆಯಲ್ಲೂ ಕಾಣಬಹುದು ಹಾಗೂ ಮಧ್ಯದ AC ವೆಂಟ್‌ಗಳನ್ನೂ ಮರುವಿನ್ಯಾಸಗೊಳಿಸಿದಂತೆ ಕಾಣುತ್ತದೆ.
ಈ ಸ್ಪೈ ಶಾಟ್‌ಗಳು ಹೊಸ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಅನಾವರಣಗೊಳ ಸಿದ್ದು, ಇದು ಟಾಟಾ ಅವಿನ್ಯಾ ಪರಿಕಲ್ಪನೆಯಿಂದ ಪ್ರೇರಿತಗೊಂಡಿದೆ ಮತ್ತು ಡಿಸ್‌ಪ್ಲೇ ಅನ್ನು ಮಧ್ಯದಲ್ಲಿ ಪಡೆದಿರಬಹುದು, ಮಾತ್ರವಲ್ಲ ವ್ಹೀಲ್ ಹಿಂದೆ ನೀವು ಪ್ಯಾಡಲ್ ಶಿಫ್ಟರ್‌ಗಳನ್ನೂ ಗುರುತಿಸಬಹುದು. ಈ ಸ್ಟೀರಿಂಗ್ ವ್ಹೀಲ್ ಅನ್ನು ನವೀಕೃತ ಟಾಟಾ ನೆಕ್ಸಾನ್‌ನ ಪರೀಕ್ಷಾರ್ಥ ಕಾರಿನಲ್ಲೂ ಗುರುತಿಸಲಾಗಿತ್ತು. ಆದಾಗ್ಯೂ, ನವೀಕೃತ ನೆಕ್ಸಾನ್‌ಗಿಂತ ಭಿನ್ನವಾಗಿ ಇದು ಹೆಚ್ಚು ಕಾರ್ಯದಕ್ಷತೆಯನ್ನು ನೀಡಬಹುದು; ಮತ್ತು ನಾವು ಹೇಳಿದಂತೆ, ಬ್ಯಾಕ್‌ಲಿಟ್ ಟಾಟಾ ಲೋಗೋ ಹೊರತಾಗಿ ಇದು ಕೆಲವು ಡ್ರೈವ್ ಮಾಹಿತಿಯನ್ನು ಡಿಸ್‌ಪ್ಲೇ ಮಾಡುವ ನಿರೀಕ್ಷೆ ಇದೆ.
ಇದು ಡ್ರೈವ್ ಮೋಡ್ ಸೆಲೆಕ್ಟರ್ ಅನ್ನು ಪಡೆದಿದ್ದು, ಟಾಟಾ ನೆಕ್ಸಾನ್ EV ಮ್ಯಾಕ್ಸ್‌ನಲ್ಲಿ ನೀಡಲಾದಂತಹ ಡಿಸ್‌ಪ್ಲೇ ಅನ್ನು ಹೊಂದಿರಬಹುದು ಮತ್ತು ಗೇರ್ ನಾಬ್ ಕೂಡಾ ಹೊಸತು. ಅಲ್ಲದೇ, ಡ್ಯಶ್‌ಬೋರ್ಡ್ ಒಳಗೊಂಡಂತೆ ಕ್ಯಾಬಿನ್‌ನ ಒಟ್ಟಾರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಯನ್ನು ನಾವು ನಿರೀಕ್ಷಿಸಬಹುದು, ಇದು ನವೀಕೃತ ಸಫಾರಿಗೆ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಆ್ಯಂಬಿಯೆನ್ಸ್ ನೀಡುತ್ತದೆ.
ಪವರ್‌ಟ್ರೇನ್‌ನಲ್ಲಿ ಬದಲಾವಣೆ
ನವೀಕೃತ ಸಫಾರಿ ಪ್ರಸ್ತುತ ಮಾಡೆಲ್‌ನಿಂದ 2-ಲೀಟರ್ ಡೀಸೆಲ್ ಇಂಜಿನ್ ಅನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಈ ಯುನಿಟ್ 170PS ಮತ್ತು 350Nm ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡಲಾಗಿದೆ.
ಇದನ್ನು: ಟಾಟಾ ಟಿಯಾಗೋ EV 0-100 KMPH ಸ್ಪ್ರಿಂಟ್‌ನಲ್ಲಿ ಈ 10 ಕಾರುಗಳಿಗಿಂತ ಚುರುಕು
ಈ SUV, ಟಾಟಾದ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (170PS/280Nm) ಅನ್ನೂ ಪಡೆಯುತ್ತದೆ, ಇದನ್ನು 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಈ ಇಂಜಿನ್ ಸ್ಟೀರಿಂಗ್ ವ್ಹೀಲ್ ಮೇಲೆ ಪ್ಯಾಡಲ್ ಶಿಫ್ಟರ್ ಉಪಸ್ಥಿತಿಯಲ್ಲಿ ಸೂಚಿಸಿದಂತೆ DCTಯೊಂದಿಗೂ ಬರಬಹುದು.
ಫೀಚರ್‌ಗಳು ಮತ್ತು ಸುರಕ್ಷತೆ
ಈ ನವೀಕರಣದೊಂದಿಗೆ ಸಫಾರಿ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವಾತಾಯನದ ಮುಂಭಾಗ ಮತ್ತು ಮಧ್ಯದ ಸಾಲಿನ ಸೀಟುಗಳು (6-ಸೀಟರ್), ಪವರ್ ಡ್ರೈವರ್ ಸೀಟುಗಳು, ಪನೋರಮಿಕ್ ಸನ್‌ರೂಫ್ ಜೊತೆಗೆ ಏಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರ್ಯೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳನ್ನು ಹೊಂದಿರುತ್ತದೆ.
ಇದನ್ನೂ ನೋಡಿ: ಟಾಟಾ ಪಂಚ್ CNG ಕವರ್ ಇಲದೆಯೇ ಪರೀಕ್ಷೆ ಮಾಡುವುದು ಗುರುತಿಸಲ್ಪಟ್ಟಿದೆ, ಶೀಘ್ರದಲ್ಲೇ ಬಿಡುಗಡೆ
ಸುರಕ್ಷತೆಯ ವಿಚಾರದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಫಾರ್ವರ್ಡ್-ಕೊಲಿಶನ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮುಂತಾದ ಪ್ರಸ್ತುತ ಆವೃತ್ತಿಯ ADAS ಫೀಚರ್‌ಗಳೊಂದಿಗೆ ಬರುತ್ತದೆ.
ಇದನ್ನೂ ಓದಿ: ಟಾಟಾ ಆಲ್ಟ್ರೋಝ್ CNG ವಿಮರ್ಶೆಯ 5 ಸಾರಾಂಶಗಳು
ಈ ಪಟ್ಟಿಯಲ್ಲಿನ ಒಂದು ಪ್ರಮುಖ ಸೇರ್ಪಡೆಯೆಂದರೆ, ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ಇಲ್ಲದಿರುವ ಲೇನ್ ಕೀಪ್ ಅಸಿಸ್ಟ್. ಟಾಟಾ ಈ ಫೀಚರ್ ಅನ್ನು ನವೀಕರಣದೊಂದಿಗೆ ಸೇರಿಸಬಹುದು, ಇದರೊಂದಿಗೆ ಈ ಕಾರುತಯಾರಕ ಕಂಪನಿಯು ಪವರ್ ಸ್ಟೀರಿಂಗ್ ಇಲೆಕ್ಟ್ರಾನಿಕ್ ಮಾಡುವ ಸಂಭವ ಇದೆ.
ಬಿಡುಗಡೆ, ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ನವೀಕೃತ ಟಾಟಾ ಸಫಾರಿಯನ್ನು ಟಾಟಾ ರೂ.16 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯ ನಿರೀಕ್ಷೆಯೊಂದಿಗೆ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಬಹುದು. ಬಿಡುಗಡೆಯಾದ ನಂತರ, ಇದು MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಝಾರ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯಲಿದೆ.