Login or Register ಅತ್ಯುತ್ತಮ CarDekho experience ಗೆ
Login

ಇವುಗಳು 2024ರ ಜನವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು

published on ಫೆಬ್ರವಾರಿ 13, 2024 12:11 pm by rohit for ಮಾರುತಿ ಬಾಲೆನೋ

ಪಟ್ಟಿಯಲ್ಲಿರುವ 10 ಕಾರುಗಳಲ್ಲಿ, ಮೂರು ಮಾಡೆಲ್‌ಗಳು 2024ರ ಜನವರಿಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ (YoY) 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿವೆ.

2024 ರ ಮೊದಲ ತಿಂಗಳು ಮುಗಿದಿದೆ ಮತ್ತು 2023 ರ ಅಂತ್ಯದ ವೇಳೆಗೆ ಮಾರಾಟದಲ್ಲಿ ಕುಸಿತದ ನಂತರ ಭಾರತೀಯ ವಾಹನ ಉದ್ಯಮದಲ್ಲಿ ತಿಂಗಳಿನಿಂದ ತಿಂಗಳಿಗೆ (MoM) ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಈ ಪಟ್ಟಿಯಲ್ಲಿರುವ ಬಹುತೇಕ ಎಲ್ಲಾ ಕಾರುಗಳು ಬೇಡಿಕೆಯಲ್ಲಿ ವರ್ಷದಿಂದ ವರ್ಷಕ್ಕೆ (YoY) ಧನಾತ್ಮಕ ಬೆಳವಣಿಗೆಯನ್ನು ಕಂಡಿವೆ. 2024 ರ ಜನವರಿಯ ಮಾರಾಟದಲ್ಲಿ ಪ್ರತಿ ಮೊಡೆಲ್‌ಗಳು ಹೇಗೆ ಮಾರಾಟವನ್ನು ಕಂಡಿತು ಎಂಬುದರ ವಿವರವಾದ ನೋಟ ಇಲ್ಲಿದೆ:

ಮೊಡೆಲ್‌

ಜನವರಿ 2024

ಜನವರಿ 2023

ಡಿಸೆಂಬರ್ 2023

ಮಾರುತಿ ಬಲೆನೋ

19,630

16,357

10,669

ಟಾಟಾ ಪಂಚ್

17,978

12,006

13,787

ಮಾರುತಿ ವ್ಯಾಗನ್ ಆರ್

17,756

20,466

8,578

ಟಾಟಾ ನೆಕ್ಸಾನ್‌

17,182

15,567

15,284

ಮಾರುತಿ ಡಿಜೈರ್

16,773

11,317

14,012

ಮಾರುತಿ ಸ್ವಿಫ್ಟ್

15,370

16,440

11,843

ಮಾರುತಿ ಬ್ರೆಜ್ಜಾ

15,303

14,359

12,844

ಮಾರುತಿ ಎರ್ಟಿಗಾ

14,632

9,750

12,975

ಮಹೀಂದ್ರಾ ಸ್ಕಾರ್ಪಿಯೋ

14,293

8,715

11,355

ಮಾರುತಿ ಫ್ರಾಂಕ್ಸ್‌

13,643

9,692

ಇದನ್ನು ಸಹ ಓದಿ: 2024ರ ಜನವರಿಯ ಕಾರು ಮಾರಾಟದಲ್ಲಿ 10 ಕಾರ್ ಬ್ರಾಂಡ್‌ಗಳದ್ದೇ ಮೆಲುಗೈ: ಟಾಟಾವನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಮರಳಿ ಪಡೆದ ಹ್ಯುಂಡೈ

ಗಮನಿಸಬೇಕಾದ ಪ್ರಮುಖ ಅಂಶಗಳು

  • ಮಾರುತಿ ಬಲೆನೊ, ಸುಮಾರು 20,000 ಯುನಿಟ್‌ಗಳಷ್ಟು ಮಾರಾಟವನ್ನು ಕಂಡಿದ್ದು, ಜನವರಿ 2024 ರ ಮಾರಾಟ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅದರ ವರ್ಷದಿಂದ ವರ್ಷಕ್ಕೆ (YoY) ಅಂಕಿಅಂಶವು 20 ಪ್ರತಿಶತದಷ್ಟು ಏರಿತು. ಹಾಗೆಯೇ ತಿಂಗಳಿನಿಂದ ತಿಂಗಳಿಗೆ ಇದರಲ್ಲಾದ ಮಾರಾಟದ ಜಂಪ್ ಅದರ ಬೇಡಿಕೆಯನ್ನು ದ್ವಿಗುಣಗೊಳಿಸಿತು.

  • 2024 ರ ಜನವರಿಯ ಮುಂದಿನ ಮೂರು ಟಾಪ್-ಸೆಲ್ಲರ್‌ಗಳೆಂದರೆ ಟಾಟಾ ಪಂಚ್, ಮಾರುತಿ ವ್ಯಾಗನ್ ಆರ್ ಮತ್ತು ಟಾಟಾ ನೆಕ್ಸಾನ್. ಇವುಗಳ ಮಾರಾಟವು 17,000 ಮತ್ತು 18,000 ಯುನಿಟ್‌ಗಳ ನಡುವೆ ಇತ್ತು. ಈ ಮೂರರಲ್ಲಿ, ಪಂಚ್ 50 ಪ್ರತಿಶತದಷ್ಟು ಬೃಹತ್ತಾದ ವರ್ಷದಿಂದ ವರ್ಷದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪಂಚ್ ಮತ್ತು ನೆಕ್ಸಾನ್‌ನ ಸಂಖ್ಯೆಗಳು ಕ್ರಮವಾಗಿ ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
  • ಮಾರಾಟದಲ್ಲಿ ನೆಕ್ಸಾನ್‌ಗೆ ಸಮೀಪದಲ್ಲಿರುವ ಮಾರುತಿ ಡಿಜೈರ್ (ಪಟ್ಟಿಯಲ್ಲಿರುವ ಏಕೈಕ ಸೆಡಾನ್) ಸುಮಾರು 16,800 ಯುನಿಟ್‌ಗಳ ಒಟ್ಟು ಮಾರಾಟವನ್ನು ಕಂಡಿದೆ. ಅದರ ತಿಂಗಳಿನಿಂದ ತಿಂಗಳ (MoM) ಮಾರಾಟವು 2,000-ಕ್ಕೂ ಮಿಕ್ಕಿ ಸಂಖ್ಯೆಯಿಂದ ಹೆಚ್ಚಾಗಿದೆ.

  • 15,000 ರಿಂದ 16,000 ಯುನಿಟ್‌ಗಳ ನಡುವಿನ ಮಾರಾಟ ಸಂಖ್ಯೆಗಳೊಂದಿಗೆ, ಮಾರುತಿ ಸ್ವಿಫ್ಟ್ ಮತ್ತು ಮಾರುತಿ ಬ್ರೆಝಾ 2024ರ ಜನವರಿಯ ಪಟ್ಟಿಯಲ್ಲಿ ಮುಂದಿನ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ವರ್ಷದಿಂದ ವರ್ಷದ ಮಾರಾಟದಲ್ಲಿ ಸ್ವಿಫ್ಟ್‌ ಏಳು ಪ್ರತಿಶತದಷ್ಟು ಕುಸಿತವನ್ನು ಕಂಡರೆ, ಬ್ರೆಜ್ಜಾದ ವರ್ಷದಿಂದ ವರ್ಷದ ಮಾರಾಟದ ಸಂಖ್ಯೆಯು ಏಳು ಪ್ರತಿಶತದಷ್ಟು ಬೆಳೆದಿದೆ.

  • ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಸ್ಕಾರ್ಪಿಯೊ (ಕ್ಲಾಸಿಕ್ ಮತ್ತು ಸ್ಕಾರ್ಪಿಯೊ ಎನ್ ಎರಡನ್ನೂ ಒಳಗೊಂಡಂತೆ) ಎರಡರ ವರ್ಷದಿಂದ ವರ್ಷದ ಮಾರಾಟ ಸಂಖ್ಯೆಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
  • 13,600 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಟ ಮಾಡುವುದರೊಂದಿಗೆ, ಮಾರುತಿ ಫ್ರಾಂಕ್ಸ್ ಈ ಪಟ್ಟಿಗೆ ಸೇರಿದೆ. ಇದರ ತಿಂಗಳಿನಿಂದ ತಿಂಗಳ ಮಾರಟದ ಸಂಖ್ಯೆಯು ಸುಮಾರು 4,000 ಯೂನಿಟ್‌ಗಳಷ್ಟು ಹೆಚ್ಚಿದೆ.

ಇನ್ನಷ್ಟು ಓದಿ: ಬಲೆನೋ ಎಎಮ್‌ಟಿ

r
ಅವರಿಂದ ಪ್ರಕಟಿಸಲಾಗಿದೆ

rohit

  • 26 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಬಾಲೆನೋ

R
rahul kumar
Feb 19, 2024, 3:51:59 PM

Very good car

Read Full News

explore similar ಕಾರುಗಳು

ಟಾಟಾ ಪಂಚ್‌

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.99 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಟಾಟಾ ನೆಕ್ಸ್ಂನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಸ್ವಿಫ್ಟ್

ಪೆಟ್ರೋಲ್22.38 ಕೆಎಂಪಿಎಲ್
ಸಿಎನ್‌ಜಿ30.9 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎರ್ಟಿಗಾ

ಪೆಟ್ರೋಲ್20.51 ಕೆಎಂಪಿಎಲ್
ಸಿಎನ್‌ಜಿ26.11 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ