Login or Register ಅತ್ಯುತ್ತಮ CarDekho experience ಗೆ
Login

2024ರ ಮುಂಬರುವ ದಿನಗಳಲ್ಲಿ 10 ಕಾರುಗಳ ಬಿಡುಗಡೆಗಾಗಿ ಹೆಚ್ಚಿನ ನಿರೀಕ್ಷೆ..!

modified on ಜೂನ್ 04, 2024 08:59 pm by ansh for ಟಾಟಾ ಕರ್ವ್‌

ಮುಂಬರುವ ತಿಂಗಳುಗಳಲ್ಲಿ ನಾವು ಎರಡು ಕೂಪ್‌ ಎಸ್‌ಯುವಿಗಳು, ಮೂರು ಇವಿಗಳು ಮತ್ತು ಬಹುನಿರೀಕ್ಷಿತ ಆಫ್-ರೋಡರ್ ಒಂದನ್ನು ನೋಡುತ್ತೇವೆ

2024ರ ಇಲ್ಲಿಯವರೆಗೆ ನಾವು ಎಲ್ಲಾ ಹೊಸ ಮಾಡೆಲ್‌ಗಳು ಮತ್ತು ಫೇಸ್‌ಲಿಫ್ಟ್‌ಗಳೆರಡೂ ಸೇರಿ ಅನೇಕ ಕಾರುಗಳ ಬಿಡುಗಡೆಗಳನ್ನು ನೋಡಿದ್ದೇವೆ, ಹಾಗೆಯೇ ಉಳಿದ ಅರ್ಧ ವರ್ಷದಲ್ಲಿ ನಾವು ಇನ್ನೂ ಹಲವು ಕಾರುಗಳ ಬಿಡುಗಡೆ ಮತ್ತು ಅನಾವರಣವನ್ನು ನೋಡಲಿದ್ದೇವೆ. ಟಾಟಾ, ಮಹೀಂದ್ರಾ, ಕಿಯಾ ಮತ್ತು ಹೋಂಡಾ ಮತ್ತು ಸಿಟ್ರೊಯೆನ್‌ನಂತಹ ಬ್ರಾಂಡ್‌ಗಳಿಂದ ಇನ್ನೂ ಹಲವು ಕಾರುಗಳ ಬಿಡುಗಡೆಯನ್ನು ನಾವು ಎದುರುನೋಡುತ್ತಿದ್ದೇವೆ. ಈ ಮುಂಬರುವ ಕಾರುಗಳ ಪಟ್ಟಿ ಮಾಡಿದರೆ, ಸಂಖ್ಯೆಯು ಹೆಚ್ಚಾಗುತ್ತಲೇ ಇರಬಹುದು ಆದರೆ ಈ 10 ಕಾರುಗಳು ಆ ಪಟ್ಟಿಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಟಾಟಾ ಆಲ್ಟ್ರೋಜ್ ರೇಸರ್

ನಿರೀಕ್ಷಿತ ಬಿಡುಗಡೆ: 2024 ಜೂನ್

ನಿರೀಕ್ಷಿತ ಬೆಲೆ: 10 ಲಕ್ಷ ರೂ.ನಿಂದ ಪ್ರಾರಂಭ

ಈ ವರ್ಷದ ಆರಂಭದಲ್ಲಿ ಪಂಚ್ ಇವಿ ಬಿಡುಗಡೆಯಾದ ನಂತರ, ಟಾಟಾ ಇನ್ನೂ ಹಲವು ಮೊಡೆಲ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ, ಅವುಗಳಲ್ಲಿ ಒಂದು ಟಾಟಾ ಆಲ್ಟ್ರೋಜ್ ರೇಸರ್ ಆಗಿದೆ. ಇದನ್ನು ಆಟೋ ಎಕ್ಸ್‌ಪೋ 2023ರಲ್ಲಿ ಮೊದಲ ಬಾರಿಗೆ ಅನಾವರಣ ಮಾಡಲಾಯಿತು ಮತ್ತು ಈಗ ಅಂತಿಮವಾಗಿ ಬಿಡುಗಡೆಗೆ ದಿನ ಫಿಕ್ಷ್‌ ಮಾಡಲಾಗಿದೆ. ಇದು ಆಲ್ಟ್ರೋಜ್‌ ​​ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ಆವೃತ್ತಿಯಾಗಿದೆ ಮತ್ತು ಇದು ವಿನ್ಯಾಸ ಬದಲಾವಣೆಗಳು, ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಮತ್ತು ಮುಖ್ಯವಾಗಿ, ನೆಕ್ಸಾನ್‌ನಿಂದ ಎರವಲು ಪಡೆದ ಪ್ರಬಲ 120 PS ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದರ ಪರೀಕ್ಷಾ ಆವೃತ್ತಿಗಳು ಈಗಾಗಲೇ ಹಲವು ಬಾರಿ ರಸ್ತೆಗಳಲ್ಲಿ ಯಾವುದೇ ಕವರ್‌ ಇಲ್ಲದೇ ಕಾಣಿಸಿಕೊಂಡಿದ್ದು, ಈಗಾಗಲೇ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ.

ಹೊಸ ತಲೆಮಾರಿನ ಮಾರುತಿ ಡಿಜೈರ್

ನಿರೀಕ್ಷಿತ ಬಿಡುಗಡೆ: 2024 ಜೂನ್

ನಿರೀಕ್ಷಿತ ಬೆಲೆ: 7 ಲಕ್ಷ ರೂ.ನಿಂದ ಪ್ರಾರಂಭ

ಮಾರುತಿಯು ಹೊಸ-ಜೆನ್ ಸ್ವಿಫ್ಟ್ ಅನ್ನು 2024ರ ಮೇ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತು ಮತ್ತು ಹೊಸ-ತಲೆಮಾರಿನ ಮಾರುತಿ ಡಿಜೈರ್ ಬಿಡುಗಡೆಗೆ ಹೆಚ್ಚು ದೂರವಿಲ್ಲ. ನವೀಕರಿಸಿದ ಸೆಡಾನ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದು ಹೊಸ 1.2-ಲೀಟರ್ ಪೆಟ್ರೋಲ್ ಎಂಜಿನ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು ನವೀಕರಿಸಿದ ಕ್ಲೈಮೇಟ್‌ ಕಂಟ್ರೋಲ್‌ಗಳಂತಹ ಕೆಲವು ಅಂಶಗಳನ್ನು ಹ್ಯಾಚ್‌ಬ್ಯಾಕ್‌ನಿಂದ ಎರವಲು ಪಡೆಯುತ್ತದೆ. ಇದು ನವೀಕರಿಸಿದ ವಿನ್ಯಾಸವನ್ನು ಪಡೆಯುವ ನಿರೀಕ್ಷೆಯಿದೆ ಮತ್ತು ಸಬ್‌-4ಮೀ ಸೆಡಾನ್ ಸೆಗ್ಮೆಂಟ್‌ಗೆ ಸನ್‌ರೂಫ್ ಅನ್ನು ಸಹ ಪರಿಚಯಿಸಬಹುದು.

ಕಿಯಾ ಇವಿ9

ನಿರೀಕ್ಷಿತ ಬಿಡುಗಡೆ: 2024ರ ಜೂನ್

ನಿರೀಕ್ಷಿತ ಬೆಲೆ: 80 ಲಕ್ಷ ರೂ.ನಿಂದ ಪ್ರಾರಂಭ

ಕಿಯಾ ತನ್ನ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈ ವರ್ಷ ಭಾರತಕ್ಕೆ ತರಲಿದೆ, ಅದುವೇ ಕಿಯಾ EV9. ಇದು ಇವಿ6 ನಂತರ ಭಾರತದಲ್ಲಿ ಬ್ರ್ಯಾಂಡ್‌ನಿಂದ ಎರಡನೇ ಎಲೆಕ್ಟ್ರಿಕ್ ಕೊಡುಗೆಯಾಗಿದೆ. ಅಂತರಾಷ್ಟ್ರೀಯವಾಗಿ, ಈ ಎಸ್‌ಯುವಿಯು 99.8 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಹಿಂಬದಿ-ವೀಲ್‌-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್‌ಗಳನ್ನು ಪಡೆಯುತ್ತದೆ.ಕಿಯಾ EV9 WLTP-ಕ್ಲೈಮ್‌ ಮಾಡಿದ 680 ಕಿಮೀ ರೇಂಜ್‌ ಅನ್ನು ಹೊಂದಿದೆ, ಮತ್ತು ಡ್ಯುಯಲ್ 12.3-ಇಂಚಿನ ಸ್ಕ್ರೀನ್‌ಗಳು, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ಹೀಟೆಡ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: 2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು

‌ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್

ಚಿತ್ರದ ಮೂಲ

ನಿರೀಕ್ಷಿತ ಬಿಡುಗಡೆ:2024 ಜೂನ್

ನಿರೀಕ್ಷಿತ ಬೆಲೆ: 17 ಲಕ್ಷ ರೂ.ನಿಂದ ಪ್ರಾರಂಭ

2024ರ ಜನವರಿಯಲ್ಲಿ ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾವನ್ನು ಬಿಡುಗಡೆ ಮಾಡಿದ ನಂತರ, ಹ್ಯುಂಡೈ ತನ್ನ ದೊಡ್ಡದಾದ ಮೂರು-ಸಾಲು ಸೀಟನ್ನು ಹೊಂದಿರುವ ಎಸ್‌ಯುವಿಯನ್ನು ನವೀಕರಿಸಲು ನಾವು ನಿರೀಕ್ಷಿಸುತ್ತಿದ್ದೇವೆ. ಫೇಸ್‌ಲಿಫ್ಟೆಡ್ ಹ್ಯುಂಡೈ ಅಲ್ಕಾಜರ್ ತನ್ನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಮತ್ತು ಇದು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಪ್ಯಾನರೋಮಿಕ್‌ ಸನ್‌ರೂಫ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಗಳಂತಹ ವೈಶಿಷ್ಟ್ಯಗಳೊಂದಿಗೆ ರಿಫ್ರೆಶ್ ಕ್ಯಾಬಿನ್ ಅನ್ನು ಪಡೆಯುತ್ತದೆ.

ಟಾಟಾ ಕರ್ವ್ ಇವಿ

ನಿರೀಕ್ಷಿತ ಬಿಡುಗಡೆ: 2024ರ ಜುಲೈ

ನಿರೀಕ್ಷಿತ ಬೆಲೆ: 20 ಲಕ್ಷ ರೂ.ನಿಂದ ಪ್ರಾರಂಭ

ಈ ವರ್ಷ ಟಾಟಾದಿಂದ ಬಿಡುಗಡೆಯಾಗಲಿರುವ ಮತ್ತೊಂದು ಹೊಸ ಮೊಡೆಲ್‌ ಕರ್ವ್‌ ಇವಿ ಆಗಿರುತ್ತದೆ. ಈ ಕೂಪ್-ಎಸ್‌ಯುವಿ ಟಾಟಾದ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು 500 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ನೀಡುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ನಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಮಹಿಂದ್ರಾ ಥಾರ್ 5 ಡೋರ್‌

ನಿರೀಕ್ಷಿತ ಬಿಡುಗಡೆ: 2024ರ ಆಗಸ್ಟ್

ನಿರೀಕ್ಷಿತ ಬೆಲೆ: 5 ಲಕ್ಷ ರೂ.ನಿಂದ ಪ್ರಾರಂಭ

5-ಬಾಗಿಲಿನ ಮಹೀಂದ್ರಾ ಥಾರ್‌ನ ಸಿದ್ಧತೆ ಬಹಳ ಸಮಯದಿಂದ ನಡೆಯುತ್ತಿದೆ ಮತ್ತು ಪ್ರತಿ ಬಾರಿಯೂ ಹೊಸ ಸ್ಪೈ ಶಾಟ್‌ಗಳು ಆನ್‌ಲೈನ್‌ನಲ್ಲಿ ದೊಡ್ಡ ಆಫ್-ರೋಡರ್‌ನ ಹೊಸ ವಿವರಗಳನ್ನು ಬಹಿರಂಗಪಡಿಸುತ್ತವೆ. ಥಾರ್‌ನ ಉದ್ದನೆಯ ಆವೃತ್ತಿಯು ಅದರ 3-ಡೋರ್ ಮೊಡೆಲ್‌ನ ಅದೇ ಎಂಜಿನ್ ಆಯ್ಕೆಗಳೊಂದಿಗೆ ಹಿಂಬದಿ-ಚಕ್ರ-ಡ್ರೈವ್ ಮತ್ತು ನಾಲ್ಕು-ಚಕ್ರ-ಡ್ರೈವ್ ಪವರ್‌ಟ್ರೇನ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ (ಬಹುಶಃ 10.25-ಇಂಚಿನ ಡಿಸ್‌ಪ್ಲೇ), ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಇದನ್ನೂ ಓದಿ: Mahindra XUV700 AX5 Select ವರ್ಸಸ್‌ Hyundai Alcazar Prestige: ನೀವು ಯಾವ 7-ಸೀಟರ್ ಎಸ್‌ಯುವಿಯನ್ನು ಖರೀದಿಸಬೇಕು?

ಸಿಟ್ರೊಯೆನ್ ಬಸಾಲ್ಟ್

ನಿರೀಕ್ಷಿತ ಬಿಡುಗಡೆ: 2024ರ ಆಗಸ್ಟ್

ನಿರೀಕ್ಷಿತ ಬೆಲೆ: 11 ಲಕ್ಷ ರೂ.ನಿಂದ ಪ್ರಾರಂಭ

ಭಾರತೀಯ ಮಾರುಕಟ್ಟೆಗೆ ಕಾರು ತಯಾರಕರ ಮುಂದಿನ ಹೊಸ ಕೊಡುಗೆಯಾಗಿ ಸಿಟ್ರೊಯೆನ್ ಬಸಾಲ್ಟ್ ಅನ್ನು ಕೆಲ ಸಮಯದ ಹಿಂದೆ ಅನಾವರಣಗೊಳಿಸಲಾಗಿತ್ತು. ಕೂಪೆ-ಎಸ್‌ಯುವಿಯು ಸಿ3 ಮತ್ತು ಸಿ3 ಏರ್‌ಕ್ರಾಸ್‌ನಂತೆಯೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಪಡೆಯುವ ಸಾಧ್ಯತೆಯಿದೆ. ಇದು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಮತ್ತು ರಿಯರ್‌ವ್ಯೂ ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ.

ಟಾಟಾ ಕರ್ವ್

ನಿರೀಕ್ಷಿತ ಬಿಡುಗಡೆ: 2024ರ ಆಗಸ್ಟ್

ನಿರೀಕ್ಷಿತ ಬೆಲೆ: 10.50 ಲಕ್ಷ ರೂ.ನಿಂದ ಪ್ರಾರಂಭ

ಕರ್ವ್‌ ಇವಿಯ ಬಿಡುಗಡೆಯ ನಂತರ, ಟಾಟಾವು ತನ್ನ ಟಾಟಾ ಕರ್ವ್‌ನ ICE ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು ಕೆಲವು ಸಣ್ಣ ಬದಲಾವಣೆಗಳೊಂದಿಗೆ ಅದರ ಎಲೆಕ್ಟ್ರಿಕ್ ಆವೃತ್ತಿಯಂತೆಯೇ ಅದೇ ವಿನ್ಯಾಸವನ್ನು ಹಂಚಿಕೊಳ್ಳುತ್ತದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದರ ವೈಶಿಷ್ಟ್ಯಗಳ ಪಟ್ಟಿಯು ಅದೇ ಸ್ಕ್ರೀನ್‌ನ ಸೆಟಪ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪ್ಯಾನರೋಮಿಕ್‌ ಸನ್‌ರೂಫ್ ಮತ್ತು ADAS ವೈಶಿಷ್ಟ್ಯಗಳನ್ನು ಒಳಗೊಂಡಂತೆ ಅದರ ಎಲೆಕ್ಟ್ರಿಕ್ ಕೌಂಟರ್‌ಪಾರ್ಟ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಭಾರತದಲ್ಲಿ ಮುಂಬರುವ ಎಲ್ಲಾ ಕಾರುಗಳು

ಮಹೀಂದ್ರಾ XUV e8

ನಿರೀಕ್ಷಿತ ಬಿಡುಗಡೆ: 2024 ಡಿಸೆಂಬರ್

ನಿರೀಕ್ಷಿತ ಬೆಲೆ: 35 ಲಕ್ಷ ರೂ.ನಿಂದ ಪ್ರಾರಂಭ

XUV700ರ ಎಲೆಕ್ಟ್ರಿಕ್ ಆವೃತ್ತಿಯಾಗಿರುವ ಮಹೀಂದ್ರಾ ಎಕ್ಸ್‌ಯುವಿ e8 ಸಹ ಈ ವರ್ಷ ಬಿಡುಗಡೆಯಾಗಲಿದೆ. ಇದು 60 kWh ಮತ್ತು 80 kWh ಬ್ಯಾಟರಿ ಗಾತ್ರಗಳನ್ನು ಬೆಂಬಲಿಸುವ ಮಹೀಂದ್ರಾದ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಮಹೀಂದ್ರಾ ಎಲೆಕ್ಟ್ರಿಕ್ ಎಕ್ಸ್‌ಯುವಿ700 ಅನ್ನು ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್‌ಗಳಲ್ಲಿ WLTP-ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು 450 ಕಿ.ಮೀ ವರೆಗೆ ನೀಡಬಹುದು. ಇದು ಇಂಟಿಗ್ರೇಟೆಡ್ ಟ್ರಿಪಲ್-ಸ್ಕ್ರೀನ್ ಸೆಟಪ್, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ADAS ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ಜನರೇಷನ್‌ನ ಹೋಂಡಾ ಅಮೇಜ್

ನಿರೀಕ್ಷಿತ ಬಿಡುಗಡೆ: ಇನ್ನೂ ದೃಢಪಡಿಸಿಲ್ಲ

ನಿರೀಕ್ಷಿತ ಬೆಲೆ: 7.50 ಲಕ್ಷ ರೂ.ನಿಂದ ಪ್ರಾರಂಭ

ಹೋಂಡಾ ಅಮೇಜ್ ಆಪ್‌ಗ್ರೇಡ್‌ ಪಡೆಯುವುದು ಬಾಕಿಯಿದೆ ಮತ್ತು ಹೋಂಡಾವು ಈ ವರ್ಷ ತನ್ನ ಹೊಸ-ಪೀಳಿಗೆಯ ಅವತಾರವನ್ನು ಬಿಡುಗಡೆಗೊಳಿಸಬಹುದು. ಅದರ ಬದಲಾವಣೆಗಳ ವಿವರಗಳು ತೀರಾ ಕಡಿಮೆ, ಆದರೆ ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಹವಾಮಾನ ನಿಯಂತ್ರಣದಂತಹ ವೈಶಿಷ್ಟ್ಯಗಳೊಂದಿಗೆ ರಿಫ್ರೆಶ್ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಅದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ರಿಯರ್ ವ್ಯೂ ಕ್ಯಾಮೆರಾ ಅನ್ನು ಒಳಗೊಂಡಿರುತ್ತದೆ. ಪ್ರಸ್ತುತ ಮೊಡೆಲ್‌ನ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಈ ಸೆಡಾನ್ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ: Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ

a
ಅವರಿಂದ ಪ್ರಕಟಿಸಲಾಗಿದೆ

ansh

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಕರ್ವ್‌

Read Full News

explore similar ಕಾರುಗಳು

ಮಾರುತಿ ಡಿಜೈರ್

ಪೆಟ್ರೋಲ್22.41 ಕೆಎಂಪಿಎಲ್
ಸಿಎನ್‌ಜಿ31.12 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಕಿಯಾ ಇವಿ9

Rs.80 ಲಕ್ಷ* Estimated Price
ಅಕ್ಟೋಬರ್ 01, 2024 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ